ಹೈದರಾಬಾದ್​:ಮದುವೆ ದಿಬ್ಬಣದಲ್ಲಿ “ನೀ ಬುಲೆಟ್ಟು ಬಂಡಿ” ಎಂಬ ಜಾನಪದದ ಟಪ್ಪಾಂಗುಚ್ಚಿ ಹಾಡಿಗೆ ವಧುವಿನೊಂದಿಗೆ ಸೊಂಟ ಬಳುಕಿಸಿ, ಖ್ಯಾತಿ ಪಡೆದಿದ್ದ ವರನಿಗೆ ತೆಲಂಗಾಣದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಶಾಕ್​ ನೀಡಿದೆ. ಲಂಚ ಪಡೆಯುತ್ತಿದ್ದ ವೇಳೆ ಸರ್ಕಾರಿ ನೌಕರನನ್ನು ಎಸಿಬಿ ಬಲೆಗೆ ಕೆಡವಿದೆ.
ಬಡಂಗಪೇಟೆ ನಗರಸಭೆಯ ನಗರ ಯೋಜನಾ ಮೇಲ್ವಿಚಾರಕರಾಗಿರುವ ಅಕುಲ ಅಶೋಕ್ ಅವರು ದೂರುದಾರರಿಂದ 30,000 ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟು, ಅದನ್ನು ಸ್ವೀಕರಿಸಿದ ಆರೋಪದ ಮೇಲೆ ಎಸಿಬಿ ಅಧಿಕಾರಿಗಳು ಅಶೋಕ್​ನನ್ನು ಬಂಧಿಸಿದೆ.
ಅಂದಹಾಗೆ ಅಶೋಕ್, ಕಳೆದ ವರ್ಷ ನಡೆದ ತಮ್ಮ ಮದುವೆಯ ದಿಬ್ಬಣದಲ್ಲಿ “ನೀ ಬುಲೆಟ್ಟು ಬಂಡಿ” ಎಂಬ ಟಪ್ಪಾಂಗುಚ್ಚಿ ಹಾಡಿಗೆ ಸಖತ್​ ಆಗಿ ಹೆಜ್ಜೆ ಹಾಕುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ ವಧು ಸಾಯಿ ಶ್ರೀಯಾ ಅವರ ಪತಿ. ಡಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ, ರಾತ್ರೋರಾತ್ರಿ ಶ್ರೀಯಾ ಫೇಮಸ್​ ಆಗಿದ್ದರು. ಅಲ್ಲದೆ, ಗಾಯಕ ಮೋಹನ್​ ಭೋಗರಾಜು ಹಾಡುಗಳನ್ನು ನಿರ್ಮಿಸುವ ಮನರಂಜನಾ ಕಂಪನಿಯೊಂದು ಶ್ರೀಯಾ ಅವರ ಡಾನ್ಸ್​ ನೋಡಿ ಆಫರ್ ಸಹ ನೀಡಿತ್ತು. ತಮ್ಮ ಕಂಪನಿಯ ಮುಂದಿನ ಹಾಡಿಗೆ ಹೆಜ್ಜೆ ಹಾಕುವ ಅವಕಾಶವನ್ನು ಶ್ರೀಯಾಗೆ ನೀಡಿತ್ತು.
ಇದೀಗ ಅದೇ ವರ ಹಾಗೂ ಶ್ರೀಯಾ ಪತಿ ಅಶೋಕ್​ ಎಸಿಬಿ ಬಲೆ ಬಿದ್ದಿದ್ದಾರೆ. ಮೂಲಗಳ ಪ್ರಕಾರ ಅಶೋಕ್​ ಅವರು ದೂರುದಾರ ದೇವೇಂದ್ರ ರೆಡ್ಡಿ ಎಂಬುವರಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಉದ್ಯಮಿ ಮತ್ತು ಸರೂರ್​ನಗರದ ಜೆಬಿ ಕಾಲನಿ ನಿವಾಸಿಯಾಗಿರುವ ದೇವೇಂದ್ರ ರೆಡ್ಡಿ ತಮ್ಮ ಮನೆ ನಿರ್ಮಾಣಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು ಎಂದು ತಿಳಿದುಬಂದಿದೆ. ಆದರೆ, ಅನುಮತಿ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಶೋಕ್​ ಇದೀಗ ಎಸಿಬಿ ಬಲೆಗೆ ಬಿದ್ದಿದ್ದಾರೆ.(ಏಜೆನ್ಸೀಸ್​)

ತನ್ನ ಮದುವೆ ದಿಬ್ಬಣದಲ್ಲಿ ಸೊಂಟ ಬಳುಕಿಸಿದ ವಧುವಿಗೆ ಖುಲಾಯಿಸಿದ ಲಕ್​: ಹುಡುಕಿಕೊಂಡು ಬಂತು ಬಿಗ್​ ಆಫರ್!​

ನಮೀಬಿಯಾ ಚೀತಾಗೆ ಆನೆಗಳೇ ಸೆಕ್ಯುರಿಟಿ ಗಾರ್ಡ್​! ಶಾಂತ ‘ಲಕ್ಷ್ಮೀ’, ಉಗ್ರ ‘ಸಿದ್ಧಾಂತ್’

ಮಗು ದತ್ತುಪಡೆಯ ಹೊರಟಿದ್ದ ಮಾಜಿ ಸಚಿವ, ನಟಿ ! ಜೈಲಲ್ಲಿರೋ ಜೋಡಿಯ ರಹಸ್ಯ ಇಡಿಯಿಂದ ಬಯಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − one =
Remember me
