ಹೈದರಾಬಾದ್​:ಖಾಸಗಿ ಈಜುಕೊಳದ ಶೌಚಗೃಹ ಹಾಗೂ ಬಟ್ಟೆ ಬದಲಾಯಿಸುವ ಕೊಠಡಿಗಳಲ್ಲಿ ರಹಸ್ಯ ಕ್ಯಾಮೆರಾಗಳನ್ನು ಇಟ್ಟು ಮಹಿಳೆಯರ ಅಶ್ಲೀಲ ವಿಡಿಯೋಗಳನ್ನು ಕದ್ದು ಸೆರೆ ಹಿಡಿಯುತ್ತಿದ್ದ ಆತಂಕಕಾರಿ ಘಟನೆ ತೆಲಂಗಾಣದ ಸೂರ್ಯಪೇಟೆಯಲ್ಲಿ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.
ಯುವಕನೊಬ್ಬ ರಹಸ್ಯವಾಗಿ ವಿಡಿಯೋ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಇದನ್ನು ಪತ್ತೆ ಹಚ್ಚಿದ ಯುವತಿಯೊಬ್ಬಳು ಪಾಲಕರ ಸಹಾಯದಿಂದ ಪ್ರಕರಣ ದಾಖಲಿಸಿದ್ದು, ಈ ಸಂಬಂಧ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.
ಪೊಲೀಸರ ಪ್ರಕಾರ ಗುಗುಲೊತು ಮಹೇಶ್​ ಎಂಬಾತ ಸೂರ್ಯಪೇಟೆ ಜಿಲ್ಲೆಯ ಚಿವ್ವೆನ್ಲಾ ವಲಯದ ಕುಡಕುಡ ಗ್ರಾಮದಲ್ಲಿರುವ ಈಜುಕೊಳದಲ್ಲಿ ಕೆಲಸ ಮಾಡುತ್ತಿದ್ದ. ಮೇ 3ರಂದು ತನ್ನ ಮೊಬೈಲ್​ ಕ್ಯಾಮೆರಾವನ್ನು ಆನ್​ ಮಾಡಿ ಅದನ್ನು ಬಾತ್​ರೂಮ್​ನಲ್ಲಿಟ್ಟಿದ್ದ. ಅದೇ ದಿನ ಯುವತಿಯೊಬ್ಬಳು ಬಾತ್​ರೂಮ್​ನಲ್ಲಿ ತನ್ನ ಬಟ್ಟೆಯನ್ನು ಬದಲಾಯಿಸುವಾಗ ಅನುಮಾನಗೊಂಡು ಪರಿಶೀಲಿಸಿದಾಗ ಕ್ಯಾಮೆರಾ ಪತ್ತೆಯಾಗಿದೆ.
ಇದಾದ ಬೆನ್ನಲ್ಲೇ ಯುವತಿ ನಡೆದ ಘಟನೆಯನ್ನು ಪಾಲಕರಿಗೆ ತಿಳಿಸಿದ್ದಾಳೆ. ಬಳಿಕ ಪಾಲಕರು ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​)
ಮುಸ್ಲಿಂ ಕುಟುಂಬದಿಂದ ಹಿಂದು ಯುವಕನ ಹತ್ಯೆ: ಕಣ್ಣೆದುರೇ ಗಂಡನನ್ನು ಕಳ್ಕೊಂಡ ಸುಲ್ತಾನಾಳ ನೋವಿನ ಮಾತಿದು

ನಾನು ನಿರ್ದೇಶಕರ ಜತೆ ಮಲಗಿದ್ದಕ್ಕೆ ಸೋನಾಕ್ಷಿಗೆ ಸಿನಿಮಾ ಅವಕಾಶ ಸಿಕ್ಕಿತ್ತು: ಪೂಜಾ ಮಿಶ್ರಾ ಸ್ಫೋಟಕ ಹೇಳಿಕೆ

15 ಕ್ವಿಂಟಾಲ್‌ ಹೂವಿನಿಂದ ಕಂಗೊಳಿಸುತ್ತಿದೆ ಕೇದಾರನಾಥ: ಆರು ತಿಂಗಳು ಉರಿಯುವ ದೀಪವೇ ಇಲ್ಲಿಯ ವಿಶೇಷತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − one =
Remember me
