ಹೈದರಾಬಾದ್​​:ರಸ್ತೆ ಅಪಘಾತ ಪ್ರಕರಣಗಳ ಸಂಖ್ಯೆಯಲ್ಲಿ ತೆಲಂಗಾಣ ರಾಜ್ಯವೂ ಕುಖ್ಯಾತಿ ಪಾತ್ರವಾಗಿದೆ. ಮದ್ಯಪಾನ ಮತ್ತು ವೇಗದ ಚಾಲನೆಯಿಂದ ಹೆಚ್ಚು ಅಪಘಾತಗಳು ಸಂಭವಿಸುತ್ತಿರುವುದಾಗಿ ಇತ್ತೀಚಿನ ಅಂಕಿ-ಅಂಶಗಳು ಹೇಳುತ್ತಿವೆ. ಸಾಕಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಂಡರು ಕೂಡ ಅಪಘಾತಗಳ ಸಂಖ್ಯೆ ಇಳಿಯುತ್ತಿಲ್ಲ. 2021ರಲ್ಲಿ ತೆಲಂಗಾಣದಾದ್ಯಂತ 6690 ಮಂದಿ ಅಪಘಾತಕ್ಕೆ ಬಲಿಯಾಗಿದ್ದಾರೆ.
ಅಪಘಾತದ ಪ್ರಕರಣದಲ್ಲಿ ತೆಲಂಗಾಣ ಚೀನಾ, ಜಪಾನ್​ ಮತ್ತು ಜರ್ಮನಿಯನ್ನು ಮೀರಿಸಿದೆ ಎಂದು ಸುಪ್ರಿಂಕೋರ್ಟ್​ ಮಾಜಿ ನ್ಯಾಯಮೂರ್ತಿ ಹಾಗೂ ರಸ್ತ ಸುರಕ್ಷತಾ ಸಮಿತಿಯ ಮುಖ್ಯಸ್ಥರಾದ ಅಭಯ್​ ಮನೋಹರ್​ ಸಪ್ರೆ ಅವರು ಹೇಳಿದ್ದಾರೆ.
ಶನಿವಾರ ಶಮ್ಶಬಾದ್​ನ ಹೋಟೆಲ್​ನಲ್ಲಿ ನಡೆದ ರಸ್ತೆ ಅಪಘಾತಗಳು ಮತ್ತು ಸುರಕ್ಷತಾ ಮಾನದಂಡಗಳ ಪರಿಶೀಲನಾ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮನೋಹರ್​ ಸಪ್ರೆ ಅವರು ಮಾತನಾಡಿದರು.
ಶೇ. 91ರಷ್ಟು ಅಪಘಾತಗಳು ವೇಗದ ಚಾಲನೆಯಿಂದಲೇ ಸಂಭವಿಸುತ್ತಿವೆ. ಹೀಗಾಗಿ ವಾಹನ ಸವಾರರು ಶೇ. 100ರಷ್ಟು ಹೆಲ್ಮೆಟ್​ ಮತ್ತು ಸೀಟ್​ ಬೆಲ್ಟನ್ನು ಧರಿಸಬೇಕು. ಅಲ್ಲದೆ, ಸರ್ಕಾರ ಅಪಘಾತದ ಕೇಂದ್ರಗಳನ್ನು ಪತ್ತೆ ಹಚ್ಚಿ ಸುರಕ್ಷತಾ ಮಾನದಂಡಗಳನ್ನು ಹೆಚ್ಚಿಸಬೇಕು. ಅಪಘಾತಗಳನ್ನು ತಡೆಯಲು ಉತ್ತಮ ಮಾನದಂಡಗಳನ್ನು ರಚಿಸಬೇಕಿದೆ ಎಂದು ಮನೋಹರ್​ ಸಪ್ರೆ ಹೇಳಿದರು.(ಏಜೆನ್ಸೀಸ್​)
ವೈಯಕ್ತಿಕ ದ್ವೇಷಕ್ಕಾಗಿ ಕೀಳುಮಟ್ಟಕ್ಕಿಳಿದ ಎಸ್​ಐ: ಅಪ್ರಾಪ್ತ ಮಗಳ ದುರ್ಬಳಕೆ, ತನಿಖೆಯಲ್ಲಿ ಕಟ್ಟುಕತೆ ಬಯಲು

ಗಂಡ ಬೇಡ ಎಂದಾಕೆಯನ್ನು 5 ತಿಂಗಳು ಅಕ್ರಮವಾಗಿ ಕೂಡಿಟ್ಟ ಪೊಲೀಸ್​ ಇನ್​ಸ್ಪೆಕ್ಟರ್​ಗೆ ಎದುರಾಯ್ತು ಸಂಕಷ್ಟ!

ಮಹಿಳಾ ಪೊಲೀಸ್​ ಬೆನ್ನಿಗೆ ನಿಂತ ಸರ್ಕಾರದ ವಿರುದ್ಧವೇ ಗೆದ್ದು ಬೀಗಿದ 8ರ ಬಾಲೆಯ ಈ ಕೆಲ್ಸ ನಿಜಕ್ಕೂ ಶ್ಲಾಘನೀಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 1 =
Remember me
