ನಲ್ಗೊಂಡ:ಗಂಡ ದಸರಾ ಹಬ್ಬಕ್ಕೆ ಮನೆ ಬರಲಿಲ್ಲ ಅಂತಾ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯ ಅಮಂಗಲ್ಲು ಮೆಡಿಗಡ್ಡದಲ್ಲಿ ನಡೆದಿದೆ.
ವಿದ್ಯಾವತ್​​ ಮೌನಿಕಾ (20) ಮೃತ ಯುವತಿ. ಮೆಡಿಗುಡ್ಡದ ಈಕೆ, ತನ್ನ ಮಾವನ ಮಗನಾದ ಅನಿಲ್​ ಎಂಬಾತನನ್ನು ಆರು ತಿಂಗಳ ಹಿಂದೆ ಮದುವೆ ಆಗಿದ್ದಳು. ಇಬ್ಬರು ಕೂಡ ಒಂದೇ ಗ್ರಾಮದವರು.
ಅನಿಲ್​ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಇಡೀ ಕುಟುಂಬದ ಜವಬ್ದಾರಿ ಆತನ ಮೇಲಿದೆ. ಮೊದಲೇ ಚಾಲಕನ ವೃತ್ತಿ ಆಗಿದ್ದರಿಂದ ಬೇರೆ ಬೇರೆ ಊರುಗಳಿಗೆ ಹೋಗಿದ್ದ. ಹೀಗಾಗಿ ದಸರಾ ಹಬ್ಬಕ್ಕೆ ಮನೆಗೆ ಬರಲು ಸಾಧ್ಯವಾಗಲಿಲ್ಲ. ಇದರಿಂದ ಮನನೊಂದ ಮೌನಿಕಾ ತೋಟಕ್ಕೆ ತೆರಳಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ವಿಷ ಕುಡಿದು ನರಳಾಡುತ್ತಿದ್ದ ಮೌನಿಕಾಳನ್ನು ನೋಡಿದ ಸ್ಥಳೀಯ ಆಕೆಯನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಅಷ್ಟರಲ್ಲಾಗಲೇ ಆಕೆಯ ಪ್ರಾಣ ಹೋಗಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಮೌನಿಕಾಳನ್ನು ಕಳೆದುಕೊಂಡ ಎರಡು ಕುಟುಂಬ ಇದೀಗ ಶೋಕ ಸಾಗರದಲ್ಲಿ ಮುಳುಗಿದೆ. ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿರುವ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್​)
ಮೋಸ್ಟ್​ ಎಲಿಜಿಬಲ್​ ಬ್ಯಾಚುಲರ್​ ಪ್ರಭಾಸ್ ಮದುವೆ ಕುರಿತು ಅಚ್ಚರಿಯ ಭವಿಷ್ಯ ನುಡಿದ ಸೆಲೆಬ್ರಿಟಿ ಜ್ಯೋತಿಷಿ..!​

ಬ್ಯಾಂಕ್ ಖಾತೆಗೆ ಪಾನ್ ನಂಬರ್ ಲಿಂಕ್ ಸೋಗಲ್ಲಿ ಕರೆ ಮಾಡಿ ಶಂಕರ್ ಬಿದರಿಗೆ 89 ಸಾವಿರ ಧೋಖಾ

ಭಾರತವನ್ನು ವಿಶ್ವದ ಅತಿ ದೊಡ್ಡ ಮಿಲಿಟರಿ ದೇಶವನ್ನಾಗಿಸಲು ಮಹತ್ವದ ಹೆಜ್ಜೆ ಇಟ್ಟ ಸರ್ಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 6 =
Remember me
