ತಿರುವನಂತಪುರಂ:ಒಂದು ದಿನದ ಅಂತರದಲ್ಲೇ ಇಬ್ಬರು ರಾಜಕೀಯ ನಾಯಕರ ಬರ್ಬರ ಹತ್ಯೆಯಾಗಿದ್ದು, ಈ ಘಟನೆ ಕೇರಳದ ಆಲಪ್ಪುಳ ನಗರದ ಜನತೆಯನ್ನು ಬೆಚ್ಚಿಬೀಳಿಸಿದೆ. ಬಿಜೆಪಿ ಮತ್ತು ಎಸ್​ಡಿಪಿಐ (ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ) ಪಕ್ಷಕ್ಕೆ ಸೇರಿದ ನಾಯಕರನ್ನು ಹತ್ಯೆ ಮಾಡಲಾಗಿದೆ.
ಆಲುಪ್ಪುಳ ನಗದಲ್ಲಿ ಸದ್ಯ 144 ಸೆಕ್ಷನ್​ ಜಾರಿ ಮಾಡಲಾಗಿದ್ದು, ಘಟನೆಯನ್ನು ಖಂಡಿಸಿರುವ ಸಿಎಂ ಪಿಣರಾಯಿ ವಿಜಯನ್​, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದ್ದಾರೆ.
ನಿನ್ನೆ (ಡಿ.18) ಸಂಜೆ ಎಸ್​ಡಿಪಿಐ ರಾಜ್ಯ ಕಾರ್ಯದರ್ಶಿ ಕೆ.ಎಸ್​. ಶಾನ್​ ಮನೆಗೆ ಹೋಗುವಾಗ ಕೊಲೆಯಾಗಿದ್ದಾರೆ. ಶಾನ್​ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುವಾಗ ಗುಂಪೊಂದು ಅವರ ಮೇಲೆ ಹಲ್ಲೆ ಮಾಡಿದೆ. ಗಂಭೀರವಾಗಿ ಗಾಯಗೊಂಡಿದ್ದ ಶಾನ್​ ಚಿಕಿತ್ಸೆ ಫಲಕಾರಿಯಾಗದೇ ಕೊಚ್ಚಿ ಆಸ್ಪತ್ರೆಯಲ್ಲಿ ಮಧ್ಯರಾತ್ರಿ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂಸೇವಕ ಸಂಘ ಅಥವಾ ಆರ್‌ಎಸ್‌ಎಸ್‌ನ ಕಾರ್ಯಕರ್ತರು ಈ ದಾಳಿಯನ್ನು ಮಾಡಿದ್ದಾರೆಂದು ಎಸ್​ಡಿಪಿಐ ಆರೋಪಿಸಿದೆ.
ಇದಾದ 12 ಗಂಟೆ ಬಳಿಕ ಕೆಲ ಅಪರಿಚಿತ ವ್ಯಕ್ತಿಗಳು ಬಿಜೆಪಿ ನಾಯಕ ರೆಂಜಿತ್​ ಶ್ರೀನಿವಾಸನ್​ ಮನೆಗೆ ನುಗ್ಗಿ ಕೊಲೆ ಮಾಡಿದ್ದಾರೆ. ರೆಂಜಿತ್​ ಅವರು ಪಕ್ಷದ ಒಬಿಸಿ ಘಟಕದ ಮುಖ್ಯಸ್ಥರಾಗಿದ್ದರು.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎರಡು ಘಟನೆಗಳ ಮೇಲೆ ತನಿಖೆ ಕೈಗೊಂಡಿದ್ದಾರೆ.
ಇಂತಹ ಹೀನ ಮತ್ತು ಅಮಾನವೀಯ ಕೃತ್ಯಗಳಂತಹ ಹಿಂಸಾತ್ಮಕ ಘಟನೆಗಳು ರಾಜ್ಯಕ್ಕೆ ಅಪಾಯಕಾರಿ. ಈ ಕೃತ್ಯಗಳನ್ನು ಎಸಗಿದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯನ್ನು ನೀಡಲಾಗುತ್ತದೆ ಎಂದು ಸಿಎಂ ಪಿಣರಾಯಿ ವಿಜಯನ್​ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.(ಏಜೆನ್ಸೀಸ್​)
ಭಾಷೆ, ಸ್ವಾತಂತ್ರ್ಯ ವೀರರಿಗೆ ಅವಮಾನಿಸೋ ಷಡ್ಯಂತ್ರ ರೂಪುಗೊಂಡಿದ್ದು ಕಾಂಗ್ರೆಸ್ ವಾರ್ ರೂಮಿನಲ್ಲೇ? ಬಿಜೆಪಿ ಆರೋಪ

ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ: ಸರ್ಕಾರಿ ಶಾಲೆ ಟಿಸಿ ಪಡೆದು ಮಗನನ್ನು ಖಾಸಗಿ ಶಾಲೆಗೆ ಸೇರಿಸಿದ ತಂದೆ

ಮೊಬೈಲ್​ ಆಸೆಗೆ ಬಿದ್ದ ಬಾಗಲಕೋಟೆ ಯುವಕನಿಗೆ ಮಹಾ ವಂಚನೆ: ನಿಮಗೂ ಈ ರೀತಿ ಆಗಬಹುದು ಎಚ್ಚರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − 4 =
Remember me
