ಶ್ರೀನಗರ:ಭಾರತದ ಸೇನಾ ಚೌಕಿಯ ಮೇಲೆ ದಾಳಿ ಮಾಡಿದರೆ ಪಾಕ್ ಸೇನೆಯ ಕರ್ನಲ್​ವೊಬ್ಬರು 30 ಸಾವಿರ ರೂಪಾಯಿ (ಪಾಕ್ ಕರೆನ್ಸಿ) ನೀಡುವುದಾಗಿ ಹೇಳಿದ್ದರು ಎಂದು ಬಂಧಿತ ಉಗ್ರ ಬಾಯ್ಬಿಟ್ಟಿದ್ದಾನೆ.
ಜಮ್ಮು-ಕಾಶ್ಮೀರದಲ್ಲಿ ರಜೌರಿ ಜಿಲ್ಲೆಯ ನೌಶೇರಾ ಬಳಿ ಗಡಿ ನಿಯಂತ್ರಣ ರೇಖೆ (ಎಲ್​ಒಸಿ) ದಾಟಿ ಒಳನುಸುಳುತ್ತಿದ್ದ ಉಗ್ರರನ್ನು ತಡೆಯಲು ಆ.21ರಂದು ಸೇನೆ ನಡೆಸಿದ ಕಾರ್ಯಾಚರಣೆ ವೇಳೆ ಓರ್ವನಿಗೆ ಗುಂಡೇಟು ತಗುಲು ಸಿಕ್ಕಿಬಿದ್ದ. ಉಳಿದಿಬ್ಬರಿಗೂ ಹೇಗೋ ಪಾಕಿಸ್ತಾನಕ್ಕೆ ವಾಪಸ್​ ಎಸ್ಕೇಪ್​ ಆಗಿದ್ದಾರೆ.
ಸೆರೆಹಿಡಿದಿರುವ ಉಗ್ರನನ್ನು ಹಿಂದೊಮ್ಮೆ ಗಡಿ ನಿಯಂತ್ರಣ ರೇಖೆ ದಾಟಿದ್ದಕ್ಕೆ ಬಂಧಿಸಲಾಗಿತ್ತು. ಆದರೆ, ಮಾನವೀಯ ನೆಲೆಯಲ್ಲಿ ಆತನನ್ನು ಬಿಡುಗಡೆ ಮಾಡಿ, ವಾಪಸ್​ ಕಳುಹಿಸಲಾಗಿತ್ತು. ಇದೀಗ ಉಗ್ರನಿಗೆ 30 ಸಾವಿರ ಪಾಕಿಸ್ತಾನಿ ರೂಪಾಯಿ ಕೊಟ್ಟ ಭಾರತದ ಸೇನಾ ನೆಲೆ ಮೇಲೆ ದಾಳಿ ಮಾಡಲು ಕಳುಹಿಸಲಾಗಿದೆ.
ಆಗಸ್ಟ್ 21 ರಂದು ಮುಂಜಾನೆ ನೌಶೇರಾ ಪ್ರದೇಶದ ಜಂಗರ್ ಸೆಕ್ಟರ್‌ನಲ್ಲಿ ನಿಯೋಜಿಸಲಾದ ಸೈನಿಕರು, ಗಡಿ ನಿಯಂತ್ರಣ ರೇಖೆಯ ಬಳಿ ಮೂವರು ಭಯೋತ್ಪಾದಕರ ಚಲನಾವಲವನ್ನು ಗುರುತಿಸಿದರು. ಒಳನುಸುಳುಕೋರರಲ್ಲಿ ಒಬ್ಬಾತ ಭಾರತೀಯ ಸೇನಾ ಚೌಕಿಯ ಸಮೀಪದಲ್ಲಿದ್ದನು ಮತ್ತು ಬೇಲಿಯನ್ನು ಕತ್ತರಿಸಲು ಪ್ರಯತ್ನಿಸಿದನು. ಈ ವೇಳೆ ಸೈನಿಕರನ್ನು ನೋಡಿ ಓಡಿಹೋಗಲು ಪ್ರಯತ್ನಿಸಿದಾಗ, ಆತನಿಗೆ ಗುಂಡು ಹಾರಿಸಿ, ಸೆರೆಹಿಡಿಯಲಾಯಿತು.
ಇನ್ನಿಬ್ಬರು ನುಸುಳುಕೋರರು ದಟ್ಟ ಕಾಡಿನಲ್ಲಿ ರಕ್ಷಣೆ ಪಡೆದು ಪಾಕಿಸ್ತಾನ ಆಕ್ರಮಿತ ಪ್ರದೇಶಕ್ಕೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ಗಾಯಗೊಂಡ ಪಾಕಿಸ್ತಾನಿ ಭಯೋತ್ಪಾದಕನನ್ನು ಜೀವಂತವಾಗಿ ಸೆರೆಹಿಡಿಯಲಾಯಿತು ಮತ್ತು ತಕ್ಷಣದ ವೈದ್ಯಕೀಯ ನೆರವು ಮತ್ತು ಜೀವರಕ್ಷಕ ಶಸ್ತ್ರಚಿಕಿತ್ಸೆ ನಡೆಸಲಾಯಿತು ಎಂದು ಸೇನೆ ತಿಳಿಸಿದೆ.
ಬಂಧಿತನನ್ನು ತಬರಕ್​ ಹುಸೇನ್​ ಎಂದು ಗುರುತಿಸಲಾಗಿದೆ. ಈತ ಪಾಕ್ ಆಕ್ರಮಿತ ಕಾಶ್ಮೀರದ ಕೋಟ್ಲಿ ಜಿಲ್ಲೆಯ ಸಬ್‌ಕೋಟ್ ಗ್ರಾಮದ ನಿವಾಸಿ. ಪಾಕಿಸ್ತಾನ ಗುಪ್ತಚರ ಸಂಸ್ಥೆಯ ಕರ್ನಲ್ ಯೂನಸ್ ಚೌಧರಿ ಎಂಬುವರು ನನ್ನನ್ನು ಕಳುಹಿಸಿದ್ದರು ಎಂದು ವಿಚಾರಣೆ ವೇಳೆ ಉಗ್ರ ಬಹಿರಂಗಪಡಿಸಿದ್ದಾನೆ ಎಂದು ಸೇನೆ ಹೇಳಿದೆ. ಕರ್ನಲ್ ನೀಡಿದ 30,000 ಪಾಕಿಸ್ತಾನಿ ರೂಪಾಯಿಗಳನ್ನು ಆತ ಒಯ್ಯುತ್ತಿದ್ದ ಎಂದು ತಿಳಿಸಿದೆ.(ಏಜೆನ್ಸೀಸ್​)
ಪುನೀತ್​ಗಾಗಿ ಸಿನಿಮಾ ಅಪ್ಪಿಕೊಳ್ಳಿ; ಲಕ್ಕಿಮ್ಯಾನ್ ಆಡಿಯೋ ಬಿಡುಗಡೆಯಲ್ಲಿ ಸುದೀಪ್..

ರಾಷ್ಟ್ರಪ್ರಶಸ್ತಿ ಪುರಸ್ಕೃತ ‘ಡೊಳ್ಳು’ ಸಿನಿಮಾ ವೀಕ್ಷಿಸಿದ ಸಿದ್ಧರಾಮಯ್ಯ

ಇದು ಯಾರನ್ನಾದರೂ ಮಂತ್ರಮುಗ್ಧರನ್ನಾಗಿಸುವ ತಂತ್ರಯುಕ್ತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + nineteen =
Remember me
