ಹೈದರಾಬಾದ್​:ಮೊದಲ ಮದುವೆಯನ್ನು ಮರೆಮಾಚಿ ವಿವಾಹೇತರ ಸಂಬಂಧವನ್ನು ಮುಂದುವರಿಸಿದ್ದ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ನನ್ನು ಹೈದರಾಬಾದ್​ ನಗರ ಪೊಲೀಸ್​ ಆಯುಕ್ತ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಟಾಪ್ಪಚಬುತ್ರ ಪೊಲೀಸ್​ ಠಾಣೆಯ ಎಸ್​ಐ ಮಧು ಎಂಬುವರನ್ನು ಅಮಾನತು ಮಾಡಲಾಗಿದೆ. ಮೊದಲ ಮದುವೆಯನ್ನು ಮುಚ್ಚಿಟ್ಟು ಮದುವೆಯಾಗುವುದಾಗಿ ಮತ್ತೊಂದು ಯುವತಿಯನ್ನು ನಂಬಿಸಿ, ಆಕೆಯೊಂದಿಗೆ ದೈಹಿಕ ಸಂಬಂಧ ಇಟ್ಟುಕೊಂಡು ಇದೀಗ ವಂಚಿಸಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಸಂತ್ರಸ್ತ ಯುವತಿ ಎಸ್​ಐ ಮಧು ವಿರುದ್ಧ ದೂರು ನೀಡಿದ್ದಾಳೆ.
ಮಧು ಹಿಂದೆ ಚಿಕ್ಕಲಗುಡ ಮತ್ತು ಬೆಗುಂಪೇಟೆ ಪೊಲೀಸ್​ ಠಾಣೆಗಳಲ್ಲಿ ಎಸ್​ಐ ಆಗಿ ಕೆಲಸ ಮಾಡಿದ್ದು, ಕೆಲವು ತಿಂಗಳ ಹಿಂದೆ ಟಾಪ್ಪಚಬುತ್ರಗೆ ವರ್ಗಾವಣೆ ಮಾಡಲಾಗಿತ್ತು. ಸಂತ್ರಸ್ತ ಯುವತಿ ಬೆಗುಂಪೇಟೆ ಹಾಗೂ ಟಾಪ್ಪಚಬುತ್ರ ಪೊಲೀಸ್​ ಠಾಣೆಗಳಲ್ಲಿ ದೂರು ದಾಖಲಿಸಿದ್ದಾಳೆ. ಅಲ್ಲದೆ, ಪಶ್ಚಿಮ ವಲಯದ ಡಿಸಿಪಿ ಕಚೇರಿಯಲ್ಲೂ ಪ್ರಕರಣ ದಾಖಲಿಸಿದ್ದಾಳೆ.
ಮದುವೆಯಾಗುವುದಾಗಿ ನನ್ನನ್ನು ನಂಬಿಸಿ, ವಿವಾಹೇತರ ಸಂಬಂಧವನ್ನು ಬೆಳೆಸಿದ್ದಾರೆ. ಇದೀಗ ಮದುವೆ ಆಗು ಅಂದರೆ ತಿರಸ್ಕರಿಸುತ್ತಿದ್ದಾರೆ. ಅಲ್ಲದೆ, ಮೊದಲೇ ಮದುವೆ ಆಗಿರುವುದನ್ನು ಮುಚ್ಚಿಟ್ಟು ವಂಚನೆ ಮಾಡಿದ್ದಾರೆಂದು ಯುವತಿ ದೂರಿದ್ದಾಳೆ. ಈ ಮಧ್ಯೆ ನನ್ನ ದೂರಿಗೆ ಪೊಲೀಸರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಇದೇ ತಿಂಗಳ 19ರಂದು ಸಿಕಂದರಬಾದ್​ ಪೊಲೀಸ್​ ಪರೇಡ್​ ಮೈದಾನದ ಬಳಿ ಕೈ ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಳು. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಇದಾದ ಬಳಿಕ ಬೆಗುಂಪೇಟ್​ ಠಾಣೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲಾಯಿತು. ಪ್ರಕರಣ ಪೊಲೀಸ್​ ಆಯುಕ್ತರ ಗಮನಕ್ಕೆ ಬಂದಿದ್ದು, ಸದ್ಯ ಎಸ್​ಐ ಮಧುರನ್ನು ಪೊಲೀಸ್​ ಆಯುಕ್ತರು ಅಮಾನತು ಮಾಡಿದ್ದಾರೆ. ಹಿಂದೆ ಚಿಕಲಗುಡದಲ್ಲಿ ಕೆಲಸ ಮಾಡುವಾಗಲೂ ಅಮಾನತಾಗಿದ್ದರು.(ಏಜೆನ್ಸೀಸ್​)
ರಾಜ್ಯ ನಾಯಕರ ಚಿತ್ತ ದೆಹಲಿಯತ್ತ!; ರಾಷ್ಟ್ರ ರಾಜಧಾನಿಯಲ್ಲಿ ಹೊಸ ಸಿಎಂ ಚರ್ಚೆ ಜೋರು, ಗರಿಗೆದರಿದ ಕುತೂಹಲ..

ಮುರಿದುಬಿತ್ತಾ ಡಿಯು – ಅರವಿಂದ್ ಸ್ನೇಹ? ಬೇಸರದಲ್ಲಿ ಅರ್ವಿಯಾ ಅಭಿಮಾನಿಗಳು

ಪಂಚಭಾಷಾ ತಾರೆ ಪ್ರಿಯಾಮಣಿ-ಮುಸ್ತಫಾ ರಾಜ್ ಮದುವೆ ಅಸಿಂಧು: ಕೊರ್ಟ್​ ಮೆಟ್ಟಿಲೇರಿದ ಮೊದಲ ಪತ್ನಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × two =
Remember me
