ವಿಜಯವಾಡ:ಹೆದ್ದಾರಿಯ ಪಕ್ಕದಲ್ಲಿ ಅಳವಡಿಸಿದ್ದ ಟ್ರಾನ್ಸ್​ಫಾರ್ಮರ್​ಗೆ ಕಾರು ಡಿಕ್ಕಿಯಾಗಿ ಆಂಧ್ರ ಪ್ರದೇಶದ ವೈಸಿಪಿ ಪಕ್ಷದ ಶಾಸಕರ ಪುತ್ರ ಮತ್ತು ಸೋದರಳಿಯ ಗಂಭೀರವಾಗಿ ಗಾಯಗೊಂಡಿರುವ ಘಟನೆ ಆಂಧ್ರದ ಪೂರ್ವ ಗೋದಾವರಿಯ ಪೊಲಾವರಂ ವಲಯದ ಹಳೇ ಇಂಜರಮ್​ನಲ್ಲಿರುವ ರಾಷ್ಟ್ರೀಯ ಹೆದ್ದಾರಿ 216ರಲ್ಲಿ ಮಂಗಳವಾರ (ಮಾ.1) ರಾತ್ರಿ ನಡೆದಿದೆ.
ಶಾಸಕ ಪೊನ್ನಾಡ ವೆಂಕಟ ಸತೀಶ್​ ಕುಮಾರ್​ ಎಂಬುವರ ಹಿರಿಯ ಪುತ್ರ ಸುಮಂತ್​ ಮತ್ತು ಸೋದರಳಿಯ ಲೋಕೇಶ್​, ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ವೇಗವಾಗಿ ಬಂದ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆಯ ಪಕ್ಕದಲ್ಲೇ ಇದ್ದ ಟ್ರಾನ್ಸ್​ಫಾರ್ಮರ್​ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಅಪಘಾತದ ಬಗ್ಗೆ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಹೆದ್ದಾರಿ ಮೊಬೈಲ್​ ವಾಹನ ಗಾಯಾಳುಗಳನ್ನು ತಕ್ಷಣ ಯಾನಮ್​ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಬಳಿಕ ಹೆಚ್ಚಿನ ಚಿಕಿತ್ಸೆಗೆಂದು ಕಾಕಿನಾಡ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಶಾಸಕರ ಸೋದರಳಿಯ ಲೋಕೇಶ್​ಗೆ ಗಂಭೀರ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.
ಅಪಘಾತ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಅಪಘಾತಕ್ಕೆ ಕಾರಣ ಏನೆಂಬುದು ತಿಳಿದುಬರಬೇಕಿದೆ.(ಏಜೆನ್ಸೀಸ್​)
ಇಡೀ ದಿನ ಒಂದೇ ಕೋಣೆಯಲ್ಲಿ ಆತನೊಂದಿಗೆ ಇರಬೇಕಿತ್ತು: ಮಾಜಿ ಪತಿಯ ಕರಾಳ ಮುಖ ಬಿಚ್ಚಿಟ್ಟ ಪೂನಂ ಪಾಂಡೆ

ಗ್ರಾಪಂ ಸದಸ್ಯನ ಜತೆ ಕಾಮದಾಟ: ಪ್ರಶ್ನಿಸಿದ್ದ ಮಗನನ್ನೇ ಕೊಲೆ ಮಾಡಿದಳಾ ಪಾಪಿ ತಾಯಿ?

ಪ್ರಧಾನಿ ಅಮ್ಮನಿಗೂ, ಕಾಶಿ ವಿಶ್ವನಾಥನ ಗರ್ಭಗುಡಿಯ ಚಿನ್ನಕ್ಕೂ ಇದೆ ನಂಟು: ಖುದ್ದು ಅಚ್ಚರಿಗೊಂಡ ಮೋದಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 9 =
Remember me
