ಮೇದಕ್​:ಪಾಲಕರು ವಿವಾಹಕ್ಕೆ ಒಪ್ಪಿಗೆ ನೀಡದಿದ್ದಕ್ಕೆ ಮನನೊಂದ ಪ್ರೇಮಿಗಳಿಬ್ಬರು ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಮೇದಕ್​ ಜಿಲ್ಲೆಯಲ್ಲಿ ನಡೆದಿದೆ.
ಪ್ರೇಮಿಗಳಿಬ್ಬರು ಜನವರಿ 5ರಂದು ನಾಪತ್ತೆಯಾಗಿದ್ದರು. ಸಾಕಷ್ಟು ಹುಡುಕಾಟದ ಬಳಿಕ ಇಬ್ಬರ ಶವ ಮಂಜಿರಾ ನದಿಯಲ್ಲಿ ಪತ್ತೆಯಾಗಿದ್ದು, ಇಬ್ಬರ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಪೊಲೀಸ್​ ಮೂಲಗಳ ಪ್ರಕಾರ ಮೃತರನ್ನು ನಗಿಲಿಗಿಡ್ಡ ವಲಯದ ಮೈನೆಲ್ಲಿ ಗ್ರಾಮದ ಅನಿಲ್​ (25) ಮತ್ತು ಸಂಗಾರೆಡ್ಡಿ ಜಿಲ್ಲೆಯ ಭಗತ್​ಸಿಂಗ್​ ಕಾಲನಿಯ ಕೃಷ್ಣವೇಣಿ (28) ಎಂದು ಗುರುತಿಸಲಾಗಿದೆ. ಕಳೆದ ಒಂದೂವರೆ ವರ್ಷದಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಬಳಿಕ ಮದುವೆ ಮಾಡಿಕೊಳ್ಳುವ ಬಯಕೆಯನ್ನು ತಮ್ಮ ತಮ್ಮ ಪಾಲಕರ ಮುಂದೆ ಪ್ರಸ್ತಾಪಿಸಿದ್ದರು. ಆದರೆ, ಇಬ್ಬರ ಜಾತಿ ಬೇರೆ ಬೇರೆಯಾಗಿದ್ದಲ್ಲದೇ, ವಯಸ್ಸಿನಲ್ಲಿ ಯುವಕನಿಗಿಂತ ಯುವತಿಯೇ ದೊಡ್ಡವಳಾಗಿದ್ದರಿಂದ ಪಾಲಕರು ಮದುವೆಗೆ ಒಪ್ಪಿಗೆ ನೀಡಲಿಲ್ಲ.
ಇದಾದ ಬಳಿಕ ತೀವ್ರ ಮನನೊಂದಿದ್ದ ಪ್ರೇಮಿಗಳಿಬ್ಬರು ಇದೇ ಜ.5ರಂದು ಮನೆ ಬಿಟ್ಟು ಹೋಗಿದ್ದರು. ಸಾಕಷ್ಟು ಹುಡುಕಾಟದ ನಡುವೆಯೂ ಇಬ್ಬರು ಪತ್ತೆಯಾಗದಿದ್ದಾಗ ಸಂಗಾರೆಡ್ಡಿ ಪೊಲೀಸರಿಗೆ ಎರಡು ಕುಟುಂಬಗಳು ದೂರು ನೀಡಿದ್ದರು. ಇದರ ನಡುವೆ ರಾಯ್ಕೋಡ್​ ವಲಯದ ಸಿರುರು ಗ್ರಾಮದ ಬಳಿಯಿರುವ ಮಂಜಿರಾ ನದಿ ಸೇತುವೆ ಮೇಲೆ ಬೈಕ್​ ಒಂದು ಸಾಕಷ್ಟು ಸಮಯದಿಂದ ನಿಂತಿರುವುದನ್ನು ನೋಡಿದ ಸ್ಥಳೀಯರು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬೈಕ್​ ನಂಬರ್​ ಆಧಾರದ ಮೇಲೆ ಮಾಹಿತಿ ಪತ್ತೆಹಚ್ಚಿದಾಗ ನಾಪತ್ತೆಯಾಗಿದ್ದ ಅನಿಲ್​ ಎಂಬುದು ಪೊಲೀಸರಿಗೆ ತಿಳಿದಿದೆ. ಒಂದು ಮೃತದೇಹ ಶುಕ್ರವಾರ ಪತ್ತೆಯಾಗಿದ್ದು, ಅದು ಕೃಷ್ಣವೇಣಿಯದ್ದು ಎಂದು ಪಾಲಕರು ಪತ್ತೆಹಚ್ಚಿದ್ದಾರೆ. ಮತ್ತೊಂದು ಮೃತದೇಹ ಶನಿವಾರ ಪತ್ತೆಯಾಗಿದ್ದು, ಅದು ಅನಿಲ್​ ಎಂದು ಪಾಲಕರು ಗುರುತಿಸಿದ್ದಾರೆ. ಎರಡು ಮೃತದೇಹಗಳನ್ನು ಸಂಗಾರೆಡ್ಡಿ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × five =
Remember me
