ಹೈದರಾಬಾದ್​:ಎರಡು ಮೆಡಿಕಲ್​ ಶಾಪ್​, ಒಂದು ಪೆಟ್ರೋಲ್​ ಬಂಕ್​ ಒಂದು ಕಡೆಯಾದರೆ, ಇನ್ನೊಂದೆಡೆ ಸಾಲದ ಹೊರೆ ಏರಿಕೆ. ದಿನದಿಂದ ದಿನಕ್ಕೆ ಏರಿಕೆಯಾದ ಸಾಲದ ಬಡ್ಡಿಯಿಂದ ಕುಟುಂಬ ಕುಸಿದಿತ್ತು. ಇದರ ನಡುವೆ ಸಾಲಗಾರರು ಬಂದು ಮನೆಯ ಬಾಗಿಲ ಮೇಲೆ ಬರವಣಿಗೆಯನ್ನು ಗೀಚಿ ಹೋಗಿದ್ದರು. ಇತ್ತ ಸಾಲ ಹಿಂದಿರುಗಿಸಲಾಗೇ ತೀವ್ರ ನೊಂದಿದ್ದ ಕುಟುಂಬ ಕಠಿಣ ನಿರ್ಧಾರ ತೆಗೆದುಕೊಂಡು ಸಾಮೂಹಿಕವಾಗಿ ಆತ್ಮಹತ್ಯೆಗೆ ಶರಣಾಗಿದೆ.
ತೆಲಂಗಾಣದ ನಿಜಾಮಬಾದ್​ ಮೂಲದ ಪಾಪ್ಪುಲಾ ಸುರೇಶ್​ ಕುಟುಂಬ ಆತ್ಮಹತ್ಯೆ ಸುದ್ದಿ ಇದೀಗ ಸ್ಥಳೀಯವಾಗಿ ಭಾರೀ ಚರ್ಚೆಯಾಗುತ್ತಿದೆ. ಸಾಲ ನೀಡಿದ್ದ ಖಾಸಗಿ ಕಂಪನಿಯವರ ಕಿರುಕುಳವನ್ನು ತಾಳಲಾರದೇ ಇಡೀ ಕುಟುಂಬ ಆತ್ಮಹತ್ಯೆಯ ಹಾದಿ ಹಿಡಿದಿದೆ ಎಂದು ಸುರೇಶ್​ ಆಪ್ತರು ಆರೋಪ ಮಾಡಿದ್ದಾರೆ.
ಸುರೇಶ್​ ಮತ್ತು ಶ್ರೀಲತಾ ದಂಪತಿ ತಮ್ಮಿಬ್ಬರು ಮಕ್ಕಳಾದ ಅಖಿಲ್​ ಮತ್ತು ಅನೀಶ್​ ಜತೆ ನಿಜಾಮಬಾದ್​ನ ಗಂಗಸ್ಥಾನ ಎರಡನೇ ಹಂತದ ಅಪಾರ್ಟ್​ಮೆಂಟ್​ನಲ್ಲಿ ವಾಸವಿದ್ದರು. ಸುರೇಶ್ ಅವರು ನಿಜಾಮಾಬಾದ್​ನಲ್ಲಿ​ ಎರಡು ಮೆಡಿಕಲ್​ ಶಾಪ್ ನಡೆಸುತ್ತಿದ್ದರು. ಹಿರಿಯ ಮಗ ಅಖಿಲ್​ ಇತ್ತೀಚೆಗಷ್ಟೇ ಪೆಟ್ರೋಲ್​ ಬಂಕ್​ ಒಂದನ್ನು ಲೀಸ್​ಗೆ ಹಾಕಿಕೊಂಡಿದ್ದರು. ಕಿರಿಯ ಮಗ ಅನೀಶ್​ ಫಾರ್ಮಸಿ ಓದುತ್ತಿದ್ದ. ಸುರೇಶ್​ ಕುಟುಂಬ ಬಿಸಿನೆಸ್​ನಿಂದಾ ತುಂಬಾ ಸಾಲ ಮಾಡಿಕೊಂಡಿದ್ದರು. ಸುಮಾರು 4 ಕೋಟಿ ರೂ.ವರೆಗೆ ಸಾಲ ಪಡೆದಿದ್ದರು ಎನ್ನಲಾಗಿದೆ. ಅಲ್ಲದೆ, ಕೆಲ ದಿನಗಳ ಹಿಂದೆ ಮಗ ನಡೆಸುತ್ತಿರುವ ಪೆಟ್ರೋಲ್ ಬಂಕ್​ಗೆ ಬಂದು ಕೆಲವರು ಬೆದರಿಕೆ ಹಾಕಿದ್ದರಿಂದ ಕುಟುಂಬಸ್ಥರು ತೀವ್ರ ಆತಂಕದಲ್ಲಿದ್ದರು ಎಂದು ಹೇಳಲಾಗಿದೆ.
ಸುರೇಶ್​ ಕುಟುಂಬ ಕೆಲವು ದಿನಗಳ ಹಿಂದೆ ವಿಜಯವಾಡಕ್ಕೆ ಆಗಮಿಸಿದ್ದರು. ಕನ್ನಿಕಾಪರಮೇಶ್ವರಿ ಸತ್ರ ಬಳಿ ಒಂದು ಬಾಡಿಗೆ ಮನೆ ಪಡೆದು ಅಲ್ಲಿಯೇ ನೆಲೆಸಿದ್ದರು. ಇದರ ನಡುವೆ ನಿಜಾಮಬಾದ್​ನಲ್ಲಿರುವ ಮನೆಯ ಮೇಲೆ ಖಾಸಗಿ ಕಂಪನಿಯವರು ಈ ಆಸ್ತಿ ನಮಗೆ ಸಂಬಂಧಿಸಿದ್ದು ಎಂದು ಬರೆದಿರುವ ಸುದ್ದಿಯನ್ನು ಕೇಳಿ ಕುಟುಂಬ ಮತ್ತಷ್ಟು ಆಘಾತಕ್ಕೆ ಒಳಗಾಯಿತು. ಈ ಅವಮಾನದಿಂದ ಹೊರಬಾರದ ಕುಟುಂಬ ತಮ್ಮ ಸಂಬಂಧಿಕರಿಗೆ ಮಸೇಜ್​ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದೆ.
ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಸ್ಪಷ್ಟವಾಗಿದ್ದು, ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 15 =
Remember me
