ಹೈದರಾಬಾದ್​:ಜನಜಂಗುಳಿಯನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ಕೈಚಳಕ ತೋರುತ್ತಾರೆಂಬುದು ಗೊತ್ತಿದೆ. ಆದರೆ, ಅವರ ಕೈಚಳಕ ಯಾವ ರೀತಿ ಇರುತ್ತದೆ ಎಂಬುದನ್ನು ಬಹುಶಃ ಯಾರು ನೋಡಿರುವುದಿಲ್ಲ. ಆದರೆ, ಇಲ್ಲೊಂದು ಸ್ಥಳದಲ್ಲಿ ಖದೀಮನ ಕೈಚಳಕ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿಬಿಟ್ಟಿದೆ.
ತೆಲಂಗಾಣದ ಭುವನಗಿರಿ ಜಿಲ್ಲೆಯ ಮೊಟ್ಕುರು ಕೃಷಿ ಮಾರುಕಟ್ಟೆಯ ನೂತನ ಚೇರ್​ಮನ್​ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸಚಿವರಾದ ಜಗದೀಶ್​ ರೆಡ್ಡಿ ಮತ್ತು ನಿರಂಜನ್​ ರೆಡ್ಡಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಸಚಿವರು ಅಂದ ಮೇಲೆ ಈ ವೇಳೆ ಸಾಮಾನ್ಯವಾಗಿಯೇ ಜನ ಸೇರಿದ್ದರು.
ಕಾರ್ಯಕ್ರಮಕ್ಕೆ ಆಗಮಿಸಿದ ಸಚಿವರಿಗೆ ಹೂಗುಚ್ಛ ನೀಡಿ ಸ್ವಾಗತಿಸಬೇಕಾದರೆ ತೆಲಂಗಾಣ ರಾಷ್ಟ್ರೀಯ ಪಕ್ಷದ (ಟಿಆರ್​ಎಸ್​) ನಾಯಕರ ಜೇಬಿಗೆ ಕಳ್ಳನೊಬ್ಬ ಕೈ ಹಾಕಿರುವ ದೃಶ್ಯ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದೆ. ಕಾರ್ಯಕರ್ತರು, ಸ್ಥಳೀಯ ನಾಯಕರು ಒಂದೇ ಕಡೆ ಒಟ್ಟಿಗೆ ಸೇರಿದ್ದು, ಖದೀಮರಿಗೆ ತಮ್ಮ ಕೈಚಳಕ ತೋರಲು ನೆರವಾಗಿದೆ. ಖದೀಮ ಕೈಚಳಕದ ಫೋಟೋ ಸದ್ಯ ಸಾಮಾಜಿಕ ಜಾಲತಾನದಲ್ಲಿ ವೈರಲ್​ ಆಗಿದೆ.
ಇನ್ನು ಸ್ಥಳದಲ್ಲಿ ಸಾಕಷ್ಟು ಪೊಲೀಸರಿದ್ದರೂ ಕೂಡ ಕಳ್ಳರು ತಮ್ಮ ಕೈಚಳಕವನ್ನು ತೋರಿ ಮೂರು ಪ್ಯಾಕೆಟ್​ ಅನ್ನು ಎಗಿಸಿದ್ದಾರೆ. ಕಾರ್ಯಕ್ರಮ ಮುಗಿದ ಬಳಿಕ ಪ್ಯಾಕೆಟ್​ ಕಳ್ಳತನವಾಗಿರುವುದು ರಾಜಕೀಯ ನಾಯಕರಿಗೆ ಗೊತ್ತಾಗಿದೆ. ಬಳಿಕ ಠಾಣೆಗೆ ತೆರಳಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿರುವ ಪೊಲೀಸರು ಕಳ್ಳರ ಪತ್ತೆಗೆ ಮುಂದಾಗಿದ್ದಾರೆ.(ಏಜೆನ್ಸೀಸ್​)
ದಂಡ ವಸೂಲಿ ಮಾಡ್ತಿದ್ದ ಪೊಲೀಸರಿಗೆ ಕ್ಲಾಸ್​: ಮಾಜಿ ಸ್ಪೀಕರ್ ರಮೇಶ್​ ಕುಮಾರ್​ ವಿರುದ್ಧ ತಿರುಗಿಬಿದ್ದ ಕೆಲ ಪೊಲೀಸರು!
ಅಮಾನವೀಯ ಕೃತ್ಯ: ಕಳ್ಳ ಅಂದುಕೊಂಡು ವ್ಯಕ್ತಿಯೊಬ್ಬನಿಗೆ ಥಳಿಸಿ, ಟ್ರಕ್​ಗೆ ಕಟ್ಟಿ ದರದರನೇ ಎಳೆಸಿ ಹತ್ಯೆ
ಸೆಪ್ಟೆಂಬರ್​ 1 ರಿಂದ 5… ಆಫ್ಘಾನ್​ ಬೆಳವಣಿಗೆ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − 3 =
Remember me
