ಭೋಪಾಲ್​:ಮಧ್ಯಪ್ರದೇಶದ ಭೋಪಾಲ್​ನಲ್ಲಿ ಅನಿರೀಕ್ಷಿತ ಘಟನೆಯೊಂದು ನಡೆದಿದೆ. ಮಗುವನ್ನು ಉಳಿಸಲು ವ್ಯಕ್ತಿಯೊಬ್ಬ ಮೈನವಿರೇಳಿಸುವ ಸಾಹಸವನ್ನು ಮಾಡಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಫೆ. 5ರಂದು ನಡೆದ ಘಟನೆ ಇದಾಗಿದೆ. ಆ ದಿನ ಸಂಜೆ ಮೊಹಮ್ಮದ್​ ಮೆಹಬೂಬ್​ ಎಂಬಾತ ಭೋಪಾಲ್​ನ ಬರ್ಖೇದಿ ಏರಿಯಾದಲ್ಲಿ ನಮಾಜ್​ ಮಾಡಿ ತನ್ನ ಸ್ನೇಹಿತನೊಂದಿಗೆ ಹಿಂದಿರುಗುವಾಗ ಗೂಡ್ಸ್​ ಟ್ರೈನ್​ ಬರುವುದನ್ನು ನೋಡಿ ಹತ್ತಿರದಲ್ಲೇ ಇದ್ದ ರೈಲ್ವೆ ಕ್ರಾಸ್​ ಬಳಿ ನಿಂತಿದ್ದಾರೆ.
ಇದೇ ಸಂದರ್ಭದಲ್ಲಿ ಅಲ್ಲಿಯೇ ಪಾಲಕರೊಂದಿಗೆ ನಿಂತಿದ್ದ ಬಾಲಕಿಯೊಬ್ಬಳು ಇದ್ದಕ್ಕಿದ್ದಂತೆ ರೈಲು ಹಳಿಯ ಮೇಲೆ ಬಿದ್ದಿದ್ದಾಳೆ. ಆಕೆಗೆ ತಕ್ಷಣ ರೈಲು ಹಳಿಯಿಂದ ಮೇಲೆಳಲು ಸಾಧ್ಯವಾಗಲಿಲ್ಲ. ಇದೇ ಸಂದರ್ಭದಲ್ಲಿ ರೈಲು ಕೂಡ ಹತ್ತಿರದಲ್ಲೇ ಬರುತ್ತಿತ್ತು. ಅಲ್ಲಿದ್ದವರು ನೆರವಿಗೆ ಧಾವಿಸದೇ ಅಸಹಾಯಕತೆಯಿಂದ ನೋಡುವಾಗ ಮೊಹಮ್ಮದ್​ ಮಾತ್ರ ಬಾಲಕಿ ಬಿದ್ದಿದ್ದ ಸ್ಥಳಕ್ಕೆ ಓಡಿ ಆಕೆಯನ್ನು ಮೇಲೆತ್ತಲು ಪ್ರಯತ್ನಿಸಿದ. ಆದರೆ, ಅಷ್ಟರಲ್ಲಾಗಲೇ ರೈಲು ಬಂದಿದ್ದರಿಂದ ಇಬ್ಬರು ರೈಲಿನ ಅಡಿಯಲ್ಲಿ ಸಿಲುಕಿದ್ದರು.
ಬಾಲಕಿ ಮೇಲಕ್ಕೆ ತಲೆ ಎತ್ತದಂತೆ ಆಕೆಯ ತಲೆಯನ್ನು ಹಿಡಿದುಕೊಂಡು ತಾನು ಒಂದು ಚೂರು ಅಲುಗಾಡದೇ ರೈಲು ಹೋಗುವರೆಗೂ ಅಡಿಯಲ್ಲಿ ಕೊಂಚವೂ ಹೆದರದೆ ಸುಮ್ಮನೇ ಮಲಗಿದ್ದರು. ಕೊನೆಯಲ್ಲಿ ರೈಲು ಹೋದ ನಂತರ ಬಾಲಕಿಯನ್ನು ಮೊಹಮ್ಮದ್​ ರಕ್ಷಿಸಿದರು. ಬಳಿಕ ಬಾಲಕಿಯ ಪಾಲಕರು ಆತನಿಗೆ ಧನ್ಯವಾದ ತಿಳಿಸಿದೆ.
ಅಲ್ಲಿದ್ದ ಜನರು ಕೂಡ ಮೊಹಮ್ಮದ್​ ಎದೆಗಾರಿಕೆಯನ್ನು ಕಂಡು ಬೆರಗಾಗಿದ್ದಲ್ಲದೆ, ಬಾಲಕಿಯನ್ನು ರಕ್ಷಣೆ ಮಾಡಿದ್ದಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಬಾಲಕಿಯ ರಕ್ಷಣೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮೊಹಮ್ಮದ್​ ದಿಟ್ಟತನಕ್ಕೆ ನೆಟ್ಟಿಗರು ಪ್ರಶಂಸೆಯ ಸುರಿಮಳೆಗೈದಿದ್ದಾರೆ.(ಏಜೆನ್ಸೀಸ್​)
ಚಲಿಸುವ ರೈಲಿನ ಕೆಳಗೆ ಸಿಲುಕಿದ್ದ ಬಾಲಕಿಯನ್ನು ರಕ್ಷಿಸಿದ ವ್ಯಕ್ತಿಗೆ ಮೆಚ್ಚುಗೆಯ ಮಹಾಪೂರ!#MadhyaPradesh#Bhopalman#GirlRescue#Movingtrain#SocialMediapic.twitter.com/xL4h2ORgNZ
— Vijayavani (@VVani4U)February 13, 2022

ಕೋರ್ಟ್​ ಆವರಣದಲ್ಲಿ ಗಲಾಟೆ ಪ್ರಕರಣ: ವಕೀಲ ಜಗದೀಶ್​ರನ್ನು​ ಬಂಧಿಸಿದ ಹಲಸೂರು ಠಾಣಾ ಪೊಲೀಸರು

ಆಧಾರ್​ ಬಳಕೆದಾರರೇ ಎಚ್ಚರ! ಈ ನಿಯಮಗಳನ್ನು ಉಲ್ಲಂಘಿಸಿದ್ರೆ 1 ಕೋಟಿ ರೂ. ದಂಡ ತೆರಬೇಕಾಗುತ್ತೆ!

VIDEO| ಬಿಕಿನಿಯಲ್ಲಿ ಫೋಟೋಶೂಟ್​ ಮಾಡಿಸಿ ಸಿನಿ ಮಂದಿಯ ಹುಬ್ಬೇರಿಸಿದ ನಟಿ ರಾಕುಲ್​ ಪ್ರೀತ್​ ಸಿಂಗ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
