ಹೈದರಾಬಾದ್​:ಮದುವೆಯಾದ ಮೂರೇ ದಿನದಲ್ಲಿ ನವವಿವಾಹಿತೆಯೊಬ್ಬಳು ಶನಿವಾರ ಬೆಳಗ್ಗೆ ತೆಲಂಗಾಣದ ನಿರ್ಮಲ ಜಿಲ್ಲೆಯಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟಿದ್ದಾಳೆ. ಅವಘಡದಲ್ಲಿ ಆಕೆಯ ತಂದೆಯೂ ಕೂಡ ಕೊನೆಯುಸಿರೆಳೆದಿದ್ದಾರೆ.
ಮೌನಿಕಾ (25) ಮೃತ ನವವಿವಾಹಿತೆ. ತಂದೆ ರಾಜಯ್ಯ (50) ಕೂಡ ಅಸುನೀಗಿದ್ದಾರೆ. ನಿರ್ಮಲ ಜಿಲ್ಲೆಯ ಕೊಡೆಮ್​ ವಲಯದ ಪಾಂಡವಪುರ್​ ಬಳಿ ಕಣಿವೆಯೊಂದಕ್ಕೆ ಕಾರು ಉರುಳಿಬಿದ್ದು ದುರಂತ ಸಂಭವಿಸಿದೆ. ಮಹಾರಾಷ್ಟ್ರದ ಬಲಹರ್ಷಾದಲ್ಲಿರುವ ವರನ ಮನೆಯಲ್ಲಿ ರಿಸೆಪ್ಷನ್​ ಮುಗಿಸಿಕೊಂಡು ತವರಿಗೆ ಹಿಂದಿರುಗುವಾಗ ಕಾರು ಅಪಘಾತಕ್ಕೀಡಾಗಿದೆ.
ಆಗಸ್ಟ್​ 25ರಂದು ಮೌನಿಕಾ ಮದುವೆ ನಡೆದಿತ್ತು. ಇದಾದ ಮೂರೇ ದಿನಗಳಲ್ಲಿ ಮೌನಿಕಾ ದಾರುಣವಾಗಿ ಮೃತಪಟ್ಟಿದ್ದು, ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಇದೀಗ ಸೂತಕದ ಛಾಯೆ ಆವರಿಸಿದೆ. ವರ ಜನಾರ್ಧನ್​ ಕೂಡ ಅದೇ ಕಾರಿನಲ್ಲಿದ್ದರು. ಅವರು ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ಕುಟುಂಬದ ಕೆಲವರಿಗೂ ಗಾಯಗಳಾಗಿವೆ.
ಘಟನೆ ನಡೆದ ಬೆನ್ನಲ್ಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ನವವಿವಾಹಿತೆಯನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.(ಏಜೆನ್ಸೀಸ್​)
VIDEO| ಯೂನಿಫಾರ್ಮ್​ ಧರಿಸಿ, ರಿವಾಲ್ವರ್​ ಹಿಡಿದು ಡೈಲಾಗ್​ ಹೊಡೆದ ಮಹಿಳಾ ಕಾನ್ಸ್​ಟೇಬಲ್​ಗೆ ಸಂಕಷ್ಟ!​​​

ಮೈಸೂರಲ್ಲಿ ಗ್ಯಾಂಗ್​ ರೇಪ್​: ಸಂತ್ರಸ್ತೆಯ ಗೆಳೆಯನ ವಿರುದ್ಧವೇ ಕೇಸ್​? ಸ್ಫೋಟಕ ತಿರುವು ಕೊಟ್ಟ ತಂದೆ-ಮಗನ ನಡೆ

ಮೈಸೂರಲ್ಲಿ ಗ್ಯಾಂಗ್​ ರೇಪ್​ ಸಂತ್ರಸ್ತೆ ಆಸ್ಪತ್ರೆಯಿಂದ ಡಿಸ್ಚಾರ್ಜ್​: ನಾನು ದೂರು ಕೊಡಲ್ಲ, ನನ್ನನ್ನು ಬಿಟ್ಟುಬಿಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 13 =
Remember me
