ನೆಯ್ಯತಿಂಕರ:ಶಾಲಾ ಸಮವಸ್ತ್ರದಲ್ಲಿ ಜ್ಯುವೆಲ್ಲರಿ ಶಾಪ್​ಗೆ ಎಂಟ್ರಿ ಕೊಟ್ಟ ಹುಡುಗಿಯೊಬ್ಬಳು 21 ಸಾವಿರ ರೂಪಾಯಿ ಕದ್ದೊಯ್ದಿರುವ ಘಟನೆ ಕೇರಳದಲ್ಲಿ ನಡೆದಿದೆ.
ನೆಯ್ಯತಿಂಕರದಲ್ಲಿರುವ ಮೂಕಾಂಬಿಕ ಸಿಲ್ವರ್​​ ಪ್ಯಾಲೇಸ್​ ಶಾಪ್​ನಲ್ಲಿ ಗುರುವಾರ ಘಟನೆ ನಡೆದಿದೆ. 21,180 ರೂಪಾಯಿ ಕಳೆದುಕೊಂಡಿರುವುದಾಗಿ ಶಾಪ್​ನ ಸಿಬ್ಬಂದಿ ತಿಳಿಸಿದ್ದಾರೆ. ಪ್ಯಾಂಟ್​ ಮತ್ತು ಶರ್ಟ್ಸ್​ ಧರಿಸಿರುವ ಹುಡುಗಿ ಹಣ ಹಿಡಿದು ಶಾಪ್​ನಿಂದ ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹುಡುಗಿ ಬಂದಾಗ ಅಂಗಡಿಯಲ್ಲಿ ಒಬ್ಬ ಹಿರಿಯ ಉದ್ಯೋಗಿ ಮಾತ್ರ ಇದ್ದರು. ಘಟನೆ ವೇಳೆ ವೃದ್ಧ ಉದ್ಯೋಗಿ ಮಲಗಿದ್ದು, ಮತ್ತೊಬ್ಬರು ಬ್ಯಾಂಕ್‌ಗೆ ತೆರಳಿದ್ದರು. ಹುಡುಗಿ ಕ್ಯಾಶ್ ಕೌಂಟರ್ ತೆರೆದು ಕೈಯಲ್ಲಿದ್ದ ಬ್ಯಾಗ್ ತೆಗೆದುಕೊಂಡು ಹೊರಗೆ ಬಂದಿದ್ದಳು. ಬ್ಯಾಗ್‌ನಲ್ಲಿ ಕೀಲಿಗಳು ಮಾತ್ರ ಇರುವುದನ್ನು ಅರಿತು ಹಿಂತಿರುಗಿ ಕ್ಯಾಶ್ ಕೌಂಟರ್‌ನಲ್ಲಿದ್ದ ನೋಟುಗಳನ್ನು ಕದ್ದಿದ್ದಾಳೆ.
ಉದ್ಯೋಗಿ ಬ್ಯಾಂಕ್‌ನಿಂದ ಹಿಂತಿರುಗಿ ಟೇಬಲ್ ತೆರೆದಾಗ ಹಣ ಕಳೆದು ಹೋಗಿರುವುದು ಬೆಳಕಿಗೆ ಬಂದಿದೆ. ಬಳಿಕ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಕಳ್ಳತನ ನಡೆದಿರುವುದು ದೃಢಪಟ್ಟಿದೆ. ಅಂಗಡಿ ಮಾಲೀಕರು ನೀಡಿದ ದೂರಿನ ಮೇರೆಗೆ ತನಿಖೆ ಆರಂಭಿಸಿದ್ದೇವೆ ಎಂದು ನೆಯ್ಯತಿಂಕರ ವೃತ್ತ ನಿರೀಕ್ಷಕರು ತಿಳಿಸಿದ್ದಾರೆ.(ಏಜೆನ್ಸೀಸ್​)
ಮುಂಬರುವ ಗುಜರಾತ್​ ಚುನಾವಣೆ ಮೇಲೆ ಕಣ್ಣು: ಗಾಂಧಿನಗರದಲ್ಲಿ ಪ್ರಧಾನಿ ಮೋದಿ ಭರ್ಜರಿ ರೋಡ್​ ಶೋ

ಎಡಗೈಯಲ್ಲಿ ಊಟ ಮಾಡಿದ ವಧು! ರೊಚ್ಚಿಗೆದ್ದು ಹೊರ ನಡೆದೇಬಿಟ್ಟ ವರ… ದಾಂಡೇಲಿಯಲ್ಲೊಂದು ಘಟನೆ…

ಚಿಕನ್​ ಪ್ರಿಯರಿಗೆ ಶಾಕಿಂಗ್​ ನ್ಯೂಸ್​! ಈ ಒಂದು ಕಾರಣದಿಂದ ಕೋಳಿ ಮಾಂಸದ ಬೆಲೆ ಇನ್ನಷ್ಟು ಹೆಚ್ಚಲಿದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × five =
Remember me
