ನವದೆಹಲಿ:ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾಕಷ್ಟು ವಿಡಿಯೋಗಳು ಪೋಸ್ಟ್​ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿಬಿಡುತ್ತವೆ. ಕೆಲವೊಂದು ವಿಡಿಯೋಗಳು ತುಂಬಾ ಫನ್ನಿಯಾಗಿರುತ್ತವೆ ಮತ್ತು ನೋಡುಗರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತವೆ. ಆ ಸಾಲಿಗೆ ಇದೀಗ ಮತ್ತೊಂದು ವಿಡಿಯೋ ಸೇರ್ಪಡೆಯಾಗಿದೆ.
ಸದ್ಯ ವೈರಲ್​ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ವಿಚಿತ್ರವಾಗಿ ಮತ್ತು ತಮಾಷೆಯ ಸನ್ನೆಗಳನ್ನು ಮಾಡುತ್ತಾ ಹಣ್ಣು ಮಾರಾಟ ಮಾಡುವ ದೃಶ್ಯವಿದೆ. ಈ ವಿಡಿಯೋವನ್ನು ಯುಮ್​ ಯುಮ್​ ಇಂಡಿಯಾ ಹೆಸರಿನ ಯೂಟ್ಯೂಬ್​ ಚಾನೆಲ್​ನಲ್ಲಿ ಜೂನ್​ 20ರಂದು ಅಪ್​ಲೋಡ್​ ಮಾಡಲಾಗಿದೆ. ಈವರೆಗೂ 20 ಸಾವಿರಕ್ಕೂ ಹೆಚ್ಚುಮ ವೀಕ್ಷಣೆಗಳನ್ನು ಪಡೆದುಕೊಂಡಿದೆ. 80ಕ್ಕೂ ಹೆಚ್ಚು ಮಂದಿ ವಿಡಿಯೋಗೆ ಕಾಮೆಂಟ್​ ಮಾಡಿದ್ದಾರೆ.
ವಿಡಿಯೋಗೆ ಭಾರತದ ಅತ್ಯುತ್ಸಾಹಿ ಹಣ್ಣು ಮಾರಾಟಗಾರ ಎಂದು ಶೀರ್ಷಿಕೆ ನೀಡಲಾಗಿದೆ. ಮಾರಾಟಗಾರನು ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಕೂಗುತ್ತಾ ಮತ್ತು ತಮಾಷೆಯ ಮುಖ ಭಾವಗಳನ್ನು ಮಾಡುವ ಮೂಲಕ ಹಣ್ಣುಗಳನ್ನು ಮಾರಾಟ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು.
ಈ ವಿಡಿಯೋವನ್ನು ಯೂಟ್ಯೂಬ್​ ಮಾತ್ರವಲ್ಲದೆ, ಟ್ವಿಟರ್​, ಇನ್​ಸ್ಟಾಗ್ರಾಂ ಮತ್ತು ಫೇಸ್​ಬುಕ್​ನಂತಹ ಇತರೆ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲೂ ಶೇರ್​ ಮಾಡಲಾಗಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ. ಅದರ ವಿಡಿಯೋ ಲಿಂಕ್​ ಈ ಕೆಳಗಡೆ ಇದೆ. ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮಾಡಿ.(ಏಜೆನ್ಸೀಸ್​)

ವಾರದಲ್ಲಿ 2 ದಿನ ಕೆಲ್ಸ…ಆರೇ ತಿಂಗಳಲ್ಲಿ 27 ಲಕ್ಷ ರೂ. ಗಳಿಕೆ! ಈಕೆಯ ಹಿನ್ನೆಲೆ ಕೇಳಿದ್ರೆ ನೀವು ದಂಗಾಗ್ತೀರಾ

ಆಸ್ತಿ ವಿಚಾರವಾಗಿ ಕೊಲೆಯಾಗಿದೆ ಅನ್ನೋದು ಸುಳ್ಳು: ಸ್ಫೋಟಕ ಸಂಗತಿ ಬಿಚ್ಚಿಟ್ಟ ಆರೋಪಿ ಮಹಾಂತೇಶ್​ ಪತ್ನಿ

ಜನ ಸಾಮಾನ್ಯರಿಗೆ ಮತ್ತೆ ದರ ಏರಿಕೆ ಬರೆ​: ಗೃಹಬಳಕೆಯ LPG ಸಿಲಿಂಡರ್​ ಬೆಲೆಯಲ್ಲಿ 50 ರೂ. ಹೆಚ್ಚಳ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 10 =
Remember me
