ನವದೆಹಲಿ:ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ವಿವಿಧ ವಿಷಯಗಳಿಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಮತ್ತು ಫೋಟೋಗಳು ಹರಿದಾಡುತ್ತಿರುತ್ತವೆ. ಅವುಗಳಲ್ಲಿ ಕೆಲವೇ ಕೆಲವು ವಿಡಿಯೋ ಮತ್ತು ಫೋಟೋಗಳು ಜನರ ಗಮನ ಸೆಳೆಯುತ್ತವೆ. ಅದರಲ್ಲೂ ಜನರ ಮುಖದಲ್ಲಿ ನಗು ಅರಳಿಸಬಲ್ಲ ಪೋಸ್ಟ್​ಗಳಂತೂ ಜಾಲತಾಣದಲ್ಲಿ ಹೆಚ್ಚು ವೈರಲ್​ ಆಗುತ್ತವೆ. ಆ ಸಾಲಿಗೆ ಇದೀಗ ಇನ್ನೊಂದು ಸೇರ್ಪಡೆಯಾಗಿದೆ.
ಮದುವೆ ಕುರಿತಾದ ಪ್ರಶ್ನೆಗೆ ವಿದ್ಯಾರ್ಥಿಯೊಬ್ಬ ಉತ್ತರ ಪತ್ರಿಕೆಯಲ್ಲಿ ಬರೆದಿರುವ ಉತ್ತರದ ಫೋಟೋ ಇದೀಗ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದೆ. ವೇಲು ಎಂಬುವರು ಉತ್ತರ ಪತ್ರಿಕೆಯ ಫೋಟೋವನ್ನು ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ಸಿಕ್ಕಾಪಟ್ಟೆ ಶೇರ್​ ಆಗುತ್ತಿದೆ.
ಫೋಟೋದಲ್ಲಿ ಏನಿದೆ?ಮದುವೆ ಅಂದರೆ ಏನು? ಎಂದು ಕೇಳಲಾದ ಪ್ರಶ್ನೆಗೆ ವಿದ್ಯಾರ್ಥಿ ಬರೆದಿರುವ ಉತ್ತರ ಹೀಗಿದೆ… ನೀವು ದೊಡ್ಡವಳಾಗಿದ್ದೀಯ. ಇನ್ನು ಮುಂದೆ ನಾವು ನಿನಗೆ ಊಟ ಹಾಕಲು ಆಗುವುದಿಲ್ಲ. ಹೀಗಾಗಿ ನೀನು ಒಬ್ಬ ವ್ಯಕ್ತಿಯನ್ನು ಹುಡುಕಿಕೊ ಮತ್ತು ಆತ ನಿನಗೆ ಆಹಾರ ನೀಡಿ, ಪೋಷಿಸಲು ಆರಂಭಿಸುತ್ತಾನೆ ಎಂದು ಹುಡುಗಿಯ ಪಾಲಕರು ಹೇಳುತ್ತಾರೆ. ಅದೇ ರೀತಿ ಹುಡುಗನ ಮನೆಯವರು ಸಹ ನೀನು ದೊಡ್ಡವನಾಗಿದ್ದೀಯಾ, ದಯವಿಟ್ಟು ಮದುವೆ ಆಗು ಎಂದು ಕೇಳಿಕೊಳ್ಳುತ್ತಾರೆ. ಆಗ ಇಬ್ಬರ ಮದುವೆ ಸಂಭವಿಸುತ್ತದೆ. ಇದಾದ ಬಳಿಕ ಹುಡುಗ ಮತ್ತು ಹುಡುಗಿ ಇಬ್ಬರು ಒಟ್ಟಿಗೆ ಜೀವಿಸಲು ನಿರ್ಧರಿಸುತ್ತಾರೆ. ಬಳಿಕ ಮಕ್ಕಳನ್ನು ಪಡೆಯಲು ಅವರು ತಪ್ಪು ಕೆಲಸಗಳನ್ನು ಮಾಡಲು ಪ್ರಾರಂಭಿಸುತ್ತಾರೆ ಎಂದು ವಿದ್ಯಾರ್ಥಿ ಬರೆದಿದ್ದಾನೆ.
ಸಾಮಾಜಿಕ ಅಧ್ಯಯನ ವಿಭಾಗದಲ್ಲಿ ಈ ಪ್ರಶ್ನೆ ಕೇಳಲಾಗಿದ್ದು, ವಿದ್ಯಾರ್ಥಿ ಬರೆದಿರುವ ಉತ್ತರ ನೋಡಿದ ಶಿಕ್ಷಕ ತಬ್ಬಿಬ್ಬಾಗಿದ್ದು, ವಿದ್ಯಾರ್ಥಿಗೆ 10ಕ್ಕೆ ಸೊನ್ನೆ (0) ಅಂಕಗಳನ್ನು ನೀಡಿ ನಾನ್​​ಸೆನ್ಸ್ ಎಂದು ಉತ್ತರ ಪತ್ರಿಕೆಯ ಮೇಲೆ ಬರೆದಿದ್ದಾರೆ. ಅಲ್ಲದೆ, ನನ್ನನ್ನು ಬಂದು ಕಾಣು ಅಂತಲೂ ಬರೆದಿದ್ದಾರೆ.
What is marriage? 😂pic.twitter.com/tM8XDNd12P
—  V. Raghavan (@srpdaa)October 11, 2022

ಈ ಪ್ರಸಂಗ ಎಲ್ಲಿ ನಡೆದಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಫೋಟೋ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪತ್ರಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ.(ಏಜೆನ್ಸೀಸ್​)
ಗರ್ಲ್​ಫ್ರೆಂಡ್​ ಜತೆ ಶಾಪಿಂಗ್​ ಮಾಡುವಾಗ ಪತ್ನಿಯ ಕೈಗೆ ಸಿಕ್ಕಿಬಿದ್ದ ಪತಿ: ಮುಂದೇನಾಯ್ತು ವಿಡಿಯೋ ನೋಡಿ…

ದಿಢೀರ್​ ಶ್ರೀಮಂತರಾಗಲು 14 ವರ್ಷದ ಮಗಳನ್ನೇ ಬಲಿ ಕೊಟ್ಟ ಪಾಲಕರು! ಬಯಲಾಯ್ತು ಮತ್ತೊಂದು ಭೀಕರ ಘಟನೆ

ಧೋನಿ ನಿರ್ಮಾಣದ ಮೊದಲ ಸೌತ್​ ಸಿನಿಮಾ ಅಪ್​ಡೇಟ್ ಇಲ್ಲಿದೆ​: ಸ್ಟಾರ್ ನಟರಿಬ್ಬರ ಜತೆ ಮಲ್ಟಿಸ್ಟಾರರ್​ ಚಿತ್ರ ಸಾಧ್ಯತೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:four × one =
Remember me
