ಅಹಮದಾಬಾದ್​:ಸ್ನೇಹಿತರ ಜತೆ ಓದಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕಾದ ಹದಿನಾಲ್ಕು ವರ್ಷದ ಬಾಲಕನೊಬ್ಬ ತಾಯಿ ಮಾಡಿದ ಒಂದು ತಪ್ಪಿನಿಂದಾಗಿ ಇಂದು ಕೊಲೆಗಾರನ ಪಟ್ಟ ಕಟ್ಟಿಕೊಂಡಿರುವ ಘಟನೆ ಗುಜರಾತ್​ನ ಅಹಮದಾಬಾದ್​ನಲ್ಲಿ ನಡೆದಿದೆ.
ಘಟನೆಯ ವಿವರಣೆಗೆ ಬರುವುದಾದರೆ, ಅಹಮದಾಬಾದ್​ನ ವಿವಾಹಿತೆ ಮಹಿಳೆಯೊಬ್ಬಳು 10 ವರ್ಷಗಳ ಹಿಂದೆ ತನ್ನ ನಾಲ್ಕು ವರ್ಷದ ಮಗನೊಂದಿಗೆ ಬಾಯ್​ಫ್ರೆಂಡ್​ ಜತೆ ಪರಾರಿಯಾಗಿದ್ದಳು. ಅಂದಿನಿಂದ ಮೂವರು ಒಟ್ಟಿಗೆ ವಾಸಿಸುತ್ತಿದ್ದರು. ಕೆಲವು ವರ್ಷಗಳವರೆಗೆ ಚೆನ್ನಾಗಿಯೇ ಸಂಸಾರ ನಿಭಾಯಿಸುತ್ತಿದ್ದ ಬಾಯ್​ಫ್ರೆಂಡ್​ ನಂತರದ ದಿನಗಳಲ್ಲಿ ತನ್ನ ಇನ್ನೊಂದು ಮುಖ ಅನಾವರಣಗೊಳಿಸಿದ.
ಬಾಲಕನ ತಾಯಿಗೆ ದಿನನಿತ್ಯ ಕಿರುಕುಳ ನೀಡಲು ಆರಂಭಿಸಿದ. ಪ್ರತಿನಿತ್ಯ ಹೀಗೆ ನಡೆಯುತ್ತಿತ್ತು. ಇದನ್ನು ನೋಡುತ್ತಾ ಬಾಲಕನ ಮನಸ್ಸಿನಲ್ಲಿ ದ್ವೇಷ ಬೆಳೆಯಿತು. ಬಾಲಕನೂ ಕೂಡ ಮಲತಂದೆಯಿಂದ ಥಳಿತಕ್ಕೊಳಗಾಗಿದ್ದ. ನನ್ನ ತಾಯಿಗೆ ಏಕೆ ಹೊಡೆಯುತ್ತೀಯಾ ಎಂದು ಪ್ರಶ್ನಿಸಿದಾಗಲೆಲ್ಲ ಆತನ ದನಕ್ಕೆ ಬಡಿಯುವ ಥರಾ ಬಾಲಕನಿಗೂ ಬಡಿಯುತ್ತಿದ್ದ.
ವರ್ಷಗಳು ಉರುಳಿದಂತೆ ಬಾಲಕನು ಸಹ ಬೆಳೆಯುತ್ತಾ ಬಂದನು. ಆತನ ಜತೆಯಲ್ಲೇ ದ್ವೇಷವೂ ಬೆಳೆದು ತಾಯಿ ಮತ್ತು ತನಗೆ ಥಳಿಸುತ್ತಿದ್ದ ಮಲತಂದೆಯನ್ನು ಇಲ್ಲವಾಗಿಸಬೇಕು ಅನ್ನುವಷ್ಟು ಕೋಪ ಬಾಲಕನ ಮನದಲ್ಲೂ ಮೂಡಿತ್ತು. ಒಂದು ದಿನ ಅದು ಕಾರ್ಯರೂಪಕ್ಕೆ ಬಂದೇ ಬಿಟ್ಟಿತ್ತು.
ಈ ತಿಂಗಳ 17ರಂದು ತನ್ನ ಮಲತಂದೆಯನ್ನು ಬೈಕ್​ನಲ್ಲಿ ಕೂರಿಸಿಕೊಂಡು ಅಹಮದಾಬಾದ್​ನ ಬೆರ್ಹಾಂಪುರ್​ ಏರಿಯಾದ ಕ್ಯಾಲಿಕೊ ಟೆಕ್ಸ್​ಟೈಲ್​ ಕಾಂಪೌಂಡ್​ ಬಳಿ ಕರೆದೊಯ್ದಿದ್ದ. ಬಳಿಕ ಜತೆಯಲ್ಲೇ ತೆಗೆದುಕೊಂಡು ಹೋಗಿದ್ದ ಚಾಕುವಿನಿಂದ ಮಲತಂದೆಗೆ ಇರಿದು ಸತ್ತಿದ್ದಾನೆಂದು ಖಚಿತವಾದ ಬಳಿಕ ಆ ಸ್ಥಳದಿಂದ ಪರಾರಿ ಆಗಿದ್ದ.
ಕೊಲೆಯಾಗಿರುವ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಶವಪರೀಕ್ಷೆಗೆಂದು ಮೃತದೇಹವನ್ನು ಆಸ್ಪತ್ರಸೆ ಸ್ಥಳಾಂತರಿಸಿದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ತನಿಖೆ ವೇಳೆ ತಾನೇ ಕೊಲೆ ಮಾಡಿದ್ದಾಗಿ ಬಾಲಕ ಒಪ್ಪಿಕೊಂಡಿದ್ದಾನೆ. ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ದಿನಾಲು ತನ್ನ ಮಲತಂದೆ ತಾಯಿ ಮತ್ತು ತನಗೆ ಕಿರುಕುಳ ನೀಡುತ್ತಿದ್ದನ್ನು ಸಹಿಸಲಾಗದೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.(ಏಜೆನ್ಸೀಸ್​)
ಪತ್ನಿಗೆ ಕರೆ​ ಮಾಡಿದಾಗಲೆಲ್ಲ ಕೇಳಿ ಬರ್ತಿದ್ದ ಒಂದೇ ಮಾತಿಂದ ಸೈಕೋ ಆದ ಗಂಡ: ನಡೆದೇ ಹೋಯ್ತು ಭೀಕರ ಕೃತ್ಯ!

ಕೋವಿಡ್​ಗೆ ಗಂಡ ಬಲಿ, 4 ದಿನದ ಬಳಿಕ ಮನೆಯಲ್ಲೇ ದುರಂತ ಅಂತ್ಯ ಕಂಡ ಗರ್ಭಿಣಿ ಪತ್ನಿ!

ಕರೊನಾ ಲಸಿಕೆಯಲ್ಲೂ ಹಣ ಪೀಕಿದ ವೈದ್ಯೆ! ಈಕೆ ಬಳಿ ವ್ಯಾಕ್ಸಿನ್​ ಪಡೆದವರಿಗೆ ಇಲ್ಲಿದೆ ಶಾಕಿಂಗ್​ ನ್ಯೂಸ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
