ನಿರ್ಮಲ್ (ತೆಲಂಗಾಣ):ಸೆಲ್ಫಿ ತೆಗೆಯುಲು ಹೋಗಿ ಕಾಲು ಜಾರಿ ಕೆರೆಗೆ ಬಿದ್ದು ಮೂವರು ಸಹೋದರಿಯರು ದಾರುಣವಾಗಿ ಮೃತಪಟ್ಟಿರುವ ಘಟನೆ ತೆಲಂಗಾಣದ ನಿರ್ಮಲ್​ ಜಿಲ್ಲೆಯಲ್ಲಿ ನಡೆದಿದೆ.
ಎಲ್ಮೆ ದಾದಾರಾವ್ ಮತ್ತು ಮಂಗಳಬಾಯಿ ದಂಪತಿ​ ನಿರ್ಮಲ್​ ಜಿಲ್ಲೆಯ ನೂರ್​ ವಲಯದ ಸಿಂಗಿಂಗಮ್ ಗ್ರಾಮ ನಿವಾಸಿಗಳು. ದಂಪತಿಗೆ ಸ್ಮಿತಾ, ವೈಶಾಲಿ ಹೆಸರಿನ ಇಬ್ಬರು ಹೆಣ್ಣು ಮಕ್ಕಳು ಮತ್ತು ಓರ್ವ ಗಂಡು ಮಗನಿದ್ದಾನೆ.
ಭಾನುವಾರ ಮಧ್ಯಾಹ್ನ ಸ್ಮಿತಾ ಮತ್ತು ವೈಶಾಲಿ ತಮ್ಮ ತಾಯಿಯ ಜತೆ ತೋಟಕ್ಕೆ ತೆರಳಿದರು. ಹೋಗುವಾಗ ತಮ್ಮ ಜತೆಯಲ್ಲಿ ಸೋದರಸಂಬಂಧಿ ಲಾಹುಬಂಡೆ ಅಂಜಲಿಯನ್ನು ಕರೆದುಕೊಂಡು ಹೋಗಿದ್ದಾರೆ. ತೋಟದಲ್ಲಿ ಕೆಲವೊತ್ತು ಉಳಿದುಕೊಂಡ ಅವರು ಸೆಲ್ಫಿಗಳು ತೆಗೆದುಕೊಳ್ಳುತ್ತಾ ತೋಟವನ್ನು ಸುತ್ತು ಹಾಕಿದರು.
ಸ್ವಲ್ಪ ಸಮಯದ ನಂತರ ತಾಯಿ ಮಂಗಳಬಾಯಿ ಮನೆಗೆ ಹಿಂದಿರುಗಿದರೆ, ಮೂವರು ಸಹೋದರಿಯರು ಅಲ್ಲಿಯೇ ಇದ್ದ ಕೆರೆಯ ಬಳಿಗೆ ತೆರಳಿದರು. ಈ ವೇಳೆ ಸೆಲ್ಫಿ ತೆಗೆಯುವಾಗ ಮೂವರು ಆಕಸ್ಮಿಕವಾಗಿ ಕೆರೆಯೊಳಗೆ ಬಿದ್ದಿದ್ದಾರೆ. ಸ್ಮಿತಾ (17), ವೈಶಾಲಿ (14) ಮತ್ತು ಅಂಜಲಿ (16) ಈಜು ಬರದೇ ದುರಂತ ಸಾವಿಗೀಡಾಗಿದ್ದಾರೆ.
ಸಂಜೆಯಾದರೂ ಮಕ್ಕಳು ಮನೆಗೆ ಬಾರದಿದ್ದಾಗ ತೋಟಕ್ಕೆ ತೆರಳಿದ ಮಂಗಳಬಾಯಿ ಮಕ್ಕಳಿಗಾಗಿ ಹುಡುಕಾಡಿದ್ದಾರೆ. ಅವರು ಪತ್ತೆಯಾಗದಿದ್ದಾಗ ಸಂಬಂಧಿಕರಿಗೆ ಆಕೆ ಮಾಹಿತಿ ನೀಡಿದ್ದಾರೆ. ಅಲ್ಲದೆ, ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಸೋಮವಾರ ಬೆಳಗ್ಗೆ ಕುಟುಂಬದ ಸದಸ್ಯರು ಕೆರೆಯ ಸಮೀಪ ಹೋಗಿ ನೋಡಿದಾಗ ಎಲ್ಲರು ಬೆಚ್ಚಿಬಿದ್ದಿದ್ದಾರೆ. ಮೂವರೂ ಕೂಡ ಶವವಾಗಿ ಕೆರೆಯಲ್ಲಿ ತೇಲುತ್ತಿದ್ದರು. ಈ ಸಂಬಂಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ಏಜೆನ್ಸೀಸ್​)
ಇದೆಂಥಾ ದುರ್ವಿಧಿ: ದೇವರಿಗೆ ಪೂಜೆ ಮಾಡಿ ನಿಟ್ಟುಸಿರು ಬಿಡುವಷ್ಟರಲ್ಲೇ ರೈತನಿಗೆ ಶಾಕ್​!
ಅರಣ್ಯಾಧಿಕಾರಿ ಕರೆದರೆಂದು ಕ್ವಾರ್ಟರ್ಸ್​ಗೆ ಹೋದ ಅಮಾಯಕ ಬುಡಕಟ್ಟು ಯುವತಿಗೆ ಕಾದಿತ್ತು ಶಾಕ್​!
ಹೆತ್ತವಳಿಗೇ ಚಪ್ಪಲಿಯಲ್ಲಿ ಬಾರಿಸಿದ ಮಗ! ವಿಡಿಯೋ ವೈರಲ್ ಆದ ಬೆನ್ನಲ್ಲೇ ಮನೆ ಬಾಗಿಲಿಗೆ ಬಂದರು ಪೊಲೀಸರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + eight =
Remember me
