ಗುವಾಹಟಿ:ಜನರು ಮೇಕೆ ಅಥವಾ ಹಸುವಿನ ಕೆಚ್ಚಲಿನಿಂದ ನೇರವಾಗಿ ಹಾಲು ಕುಡಿಯುವುದನ್ನು ನೋಡಿದ್ದೇವೆ. ಆದರೆ, ಪುಟ್ಟ ಬಾಲಕಿಯೊಬ್ಬಳು ತಾಯಿ ಆನೆಯ ಕೆಚ್ಚಲಿನಿಂದ ಹಾಲು ಕುಡಿಯಲು ಯತ್ನಿಸಿರುವ ಘಟನೆ ಅಸ್ಸಾಂನಲ್ಲಿ ಘಟನೆ ನಡೆದಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಅಸ್ಸಾಂನ ಗೋಲಘಾಟ್​ ಜಿಲ್ಲೆಯ ಮೂರು ವರ್ಷದ ಬಾಲಕಿ ಹರ್ಷಿತಾ ಬೋರಾ, ತಾಯಿ ಆನೆಯ ಕೆಚ್ಚಲಿಗೆ ಬಾಯಿ ಹಾಕಿ ಹಾಲು ಕುಡಿಯಲು ಯತ್ನಿಸಿದ್ದಾಳೆ. ಅಲ್ಲದೆ, ಆನೆಯ ಕೆಳಗಡೆಯೇ ನಿಂತು ಆಟವಾಡಿದ್ದಾಳೆ. ಬಾಲಕಿ ಕೆಚ್ಚಲನ್ನು ಹಿಡಿದುಕೊಂಡಿರುವುದು ಆನೆಗೆ ತಿಳಿದಿದ್ದರೂ ಒಂಚೂರು ಕದಲದೇ ಬಾಲಕಿಯ ಮೇಲೆ ಮಾತೃ ಪ್ರೇಮವನ್ನು ತೋರಿದೆ.
ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ಆನೆಗಳು ಒಮ್ಮೆಲೇ ಕೋಪದಿಂದ ಪ್ರತಿಕ್ರಿಯಿಸುತ್ತವೆ. ಕೆಲವೊಮ್ಮೆ ಸಾಕಿದ ಆನೆಗಳು ಕೂಡ ತಾಳ್ಮೆ ಕಳೆದುಕೊಳ್ಳುತ್ತವೆ. ಸೊಂಡಿಲಿನಿಂದ ಹಿಡಿದು ಎಸೆಯುವುದಲ್ಲದೆ, ಕಾಲುಗಳಿಂದ ತುಳಿದು ಸಾಯಿಸುವ ಸಾಧ್ಯತೆಯು ಇರುತ್ತದೆ. ಆದರೆ, ಬಾಲಕಿ ವಿಚಾರದಲ್ಲಿ ಆನೆ ನಡೆದುಕೊಂಡ ರೀತಿ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.
ಇನ್ನು ಹರ್ಷಿತಾ ಆನೆಯೊಂದಿಗೆ ಆಟವಾಡುತ್ತಿರುವುದು ಕಂಡುಬಂದಿದೆ. ಅವಳು ಆನೆಗಳನ್ನು ಬಿನು ಎಂದು ಕರೆಯುತ್ತಾಳೆ. ವೈರಲ್ ವಿಡಿಯೋದಲ್ಲಿ ಬಿನು ಮತ್ತು ಹರ್ಷಿತಾ ಒಟ್ಟಿಗೆ ತಮ್ಮ ಸಮಯವನ್ನು ಆನಂದಿಸುತ್ತಿರುವುದು ಕಂಡುಬಂದಿದೆ.(ಏಜೆನ್ಸೀಸ್​)

U19 World Cup: ಬಾಂಗ್ಲಾ ಬಗ್ಗು ಬಡಿದ ಭಾರತ.. 2 ವರ್ಷದ ಹಿಂದಿನ ಸೇಡು ತೀರಿಸಿಕೊಂಡು ಸೆಮೀಸ್​ಗೆ ಲಗ್ಗೆ

ಅಂಡರ್​ 19 ವಿಶ್ವಕಪ್​ ಪಂದ್ಯದ ವೇಳೆ ಭೂಕಂಪನ: ಕ್ಯಾಮೆರಾದಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ

VIDEO: ಈತನ ದೇಹಕ್ಕಿದೆ ವಿಶೇಷ ಶಕ್ತಿ- 85 ಚಮಚ ಇಟ್ಟುಕೊಂಡು ಗಿನ್ನೆಸ್‌ ದಾಖಲೆ ನಿರ್ಮಾಣ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − 1 =
Remember me
