ಹೈದರಾಬಾದ್​:ತೆಲುಗಿನಲ್ಲಿ ಬಿಗ್​​ಬಾಸ್​ 5ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಸೆಪ್ಟೆಂಬರ್​ ಆರಂಭದಲ್ಲಿ ರಿಯಾಲಿಟಿ ಶೋ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಈ ಬಾರಿಯು ಅಕ್ಕಿನೇನಿ ನಾಗಾರ್ಜುನ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಇತ್ತೀಚೆಗಷ್ಟೇ ಪ್ರೋಮೋ ಶೂಟ್​ ಸಹ ಪೂರ್ಣಗೊಳಿಸಿದ್ದಾರೆ. ಆಗಸ್ಟ್​ 15ರಿಂದ ಪ್ರೋಮೋ ಸ್ಟಾರ್​ ಮಾ ಚಾನೆಲ್​ನಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.
ಈಗಾಗಲೇ ಯಾವೆಲ್ಲ ಸ್ಪರ್ಧಿಗಳು ಶೋನಲ್ಲಿ ಭಾಗವಹಿಸಲಿದ್ದಾರೆ ಎಂಬ ಚರ್ಚೆಗಳು ಆರಂಭವಾಗಿವೆ. ತಾಜಾ ಬೆಳವಣಿಗೆಯೆಂಬಂತೆ ಟಿಕ್​ಟಾಕ್​​ ಸ್ಟಾರ್​ ಫನ್​ ಬಕೆಟ್​ ಭಾರ್ಗವ ಬಿಗ್​ಬಾಸ್​ ಮನೆ ಸೇರಲಿದ್ದಾರೆ ಎಂಬ ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಅಲ್ಲದೆ, ಬಹುತೇಕ ಖಚಿತವಾಗಿದೆ ಎಂಬ ಮಾತುಗಳು ಕೇಳಿಬಂದಿದೆ. ಆದರೆ, ಅದನ್ನು ಕಾರ್ಯಕ್ರಮ ಆಯೋಜಕರು ನಿರಾಕರಿಸಿದ್ದಾರೆ.
ಶೋನಲ್ಲಿ ಭಾರ್ಗವನ ಭಾಗವಹಿಸುವಿಕೆ ಆಯೋಜಕರಿಗೆ ಸ್ವಲ್ಪವು ಇಷ್ಟವಿಲ್ಲ. ಏಕೆಂದರೆ, ಅಪ್ರಾಪ್ತೆಯನ್ನು ಲೈಂಗಿಕವಾಗಿ ಬಳಸಿಕೊಂಡು ಗರ್ಭಿಣಿ ಮಾಡಿದ ಆರೋಪದಲ್ಲಿ ಈಗಾಗಲೇ ಜೈಲು ಸೇರಿ ಜಾಮೀನಿನ ಮೇಲೆ ಭಾರ್ಗವ ಬಿಡುಗಡೆ ಆಗಿದ್ದಾನೆ. ಈ ಪ್ರಕರಣ ತೆಲುಗು ರಾಜ್ಯಗಳಲ್ಲಿ ಭಾರಿ ಸುದ್ದಿಯಾಗಿದೆ. ಹೀಗಾಗಿ ಭಾರ್ಗವನನ್ನು ಶೋಗೆ ಆಹ್ವಾನಿಸಿ ಕಾರ್ಯಕ್ರಮದ ಮಾನ ಹರಾಜು ಹಾಕಿಕೊಳ್ಳಲು ಯಾರಿಗೂ ಇಷ್ಟವಿಲ್ಲ. ಹೀಗಾಗಿ ಆತನನ್ನು ತಿರಸ್ಕರಿಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.
ಭಾರ್ಗವನನ್ನು ಬಿಟ್ಟರೆ, ಕಾಸ್ಕೋ ನಿಖಿಲ್​, ಪ್ರಿಯಾಂಕ ಸಿಂಗ್​, ಲೊಬೊ, ಆ್ಯಂಕರ್​ ವರ್ಷಿಣಿ, ಪ್ರಿಯಾ ರಾಮನ್​, ಶ್ರೀ ಹನುಮಂತ, ಷಣ್ಮುಖ್​ ಜಸ್ವಂತ್​, ಆ್ಯಂಕರ್​ ರವಿ, ಆರ್​ಜೆ ಕಾಜಲ್​, ಜಸ್ವಂತ್​ ಪಡಾಲ, ವಿಜಿ ಸನ್ನಿ ಮತ್ತು ನವ್ಯಾ ಸ್ವಾಮಿ ಬಿಗ್​ ಮನೆ ಸೇರಲಿದ್ದಾರೆ ಎಂಬ ಮಾಹಿತಿ ಇದೆ.(ಏಜೆನ್ಸೀಸ್​)
ಫನ್​ ಬಕೆಟ್​ ಭಾರ್ಗವನೊಂದಿಗಿನ ಸಂಬಂಧ ಬಿಚ್ಚಿಟ್ಟು ಭಾವುಕಳಾದ ಓ ಮೈ ಗಾಡ್​ ಗರ್ಲ್​ ನಿತ್ಯಾ..!

ಬಾಲಕಿ ಮೇಲೆ ರೇಪ್​: ಫನ್​ ಬಕೆಟ್​ ಭಾರ್ಗವ ಬಂಧನ ಬೆನ್ನಲ್ಲೇ ಓ ಮೈ ಗಾಡ್ ಗರ್ಲ್​ ಸ್ಪಷ್ಟನೆ ಹೀಗಿದೆ…

ಟಿಕ್​ಟಾಕ್​ ಸ್ಟಾರ್​ ಫನ್​ ಬಕೆಟ್​ ಭಾರ್ಗವನ ಬಗ್ಗೆ ಶಾಕಿಂಗ್​ ಸಂಗತಿಗಳನ್ನು ಬಿಚ್ಚಿಟ್ಟ ಯುವತಿ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − four =
Remember me
