ವಿಜಯವಾಡ:ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಟಿಕ್​ಟಾಕ್​ ಖ್ಯಾತಿಯ ಫನ್​ ಬಕೆಟ್​ ಭಾರ್ಗವನನ್ನು ಪೊಲೀಸರು ಬಂಧಿಸಿದ್ದಾರೆ. ಟಿಕ್​ಟಾಕ್​ ವಿಡಿಯೋ ಹೆಸರಿನಲ್ಲಿ ಬಾಲಕಿಯನ್ನು ತನ್ನ ಅಧೀನದಲ್ಲಿ ಇಟ್ಟುಕೊಂಡು ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆಂಬ ಆರೋಪದ ಮೇಲೆ ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ಭಾರ್ಗವ ವಿರುದ್ಧ ಪ್ರಕರಣ ದಾಖಲಾಗಿದೆ.
ವಿವರಣೆಗೆ ಬರುವುದಾದರೆ, ವಿಜಯನಗರಂ ಜಿಲ್ಲೆಯ ಕೊಟ್ಟವಲಸಾ ಏರಿಯಾದ ನಿವಾಸಿ ಆಗಿರುವ ಭಾರ್ಗವ ಟಿಕ್​ಟಾಕ್​ ವಿಡಿಯೋಗಳಿಂದ ತುಂಬಾ ಫೇಮಸ್​ ಆಗಿದ್ದಾನೆ. ಒಮ್ಮೆ ಚಾಟಿಂಗ್​ ಮೂಲಕ ವಿಶಾಖಪಟ್ಟಣಂ ಜಿಲ್ಲೆಯ ಸಿನ್ಹಗಿರಿ ಕಾಲನಿಯ 14 ವರ್ಷದ ಬಾಲಕಿಯ ಪರಿಚಯವಾಗಿದೆ. ಸಿನ್ಹಗಿರಿ ಕಾಲನಿ ವಿಜಯನಗರಂ ಮತ್ತು ವಿಶಾಖಪಟ್ಟಣಂ ಗಡಿಭಾಗದಲ್ಲಿದೆ. ಚಾಟಿಂಗ್​ನಿಂದ ಆರಂಭವಾದ ಪರಿಚಯ ತುಂಬಾ ಸಲುಗೆಗೆ ತಿರುಗಿತ್ತು.
ಇದನ್ನೂ ಓದಿರಿ:ಬಿಗ್​ಬಾಸ್​ ಮನೆ ಖಾಲಿ ಖಾಲಿ! ಇದ್ದಕ್ಕಿದ್ದಂತೆ ಎಲ್ಲವನ್ನೂ ಹಿಂಪಡೆಯುವುದಕ್ಕೆ ಕಾರಣವೇನು?
ತನ್ನ ಜತೆಗಿರುವ ಅಪ್ರಾಪ್ತೆಯನ್ನು ಭಾರ್ಗವ ಅನನ್ಯ ಎಂದು ಪರಿಚಯಿಸಿದ್ದ. ಇಬ್ಬರ ನಡುವಿನ ಸಲುಗೆ ನಿರಂತರವಾಗಿ ಚಾಟ್​ ಮಾಡುವುದು ಮತ್ತು ಪದೇಪದೆ ಭೇಟಿಯಾಗುವುದು ಮಾಡುತ್ತಿದ್ದರು. ಭಾರ್ಗವ್​, ಟಿಕ್​ಟಾಕ್​ ವಿಡಿಯೋ ಹೆಸರಲ್ಲಿ ಅಪ್ರಾಪ್ತೆಯನ್ನು ತನ್ನ ಅಧೀನದಲ್ಲಿ ಇಟ್ಟುಕೊಂಡಿದ್ದ ಎನ್ನಲಾಗಿದೆ. ಹೀಗಿರುವಾಗ ಒಮ್ಮೆ ಅಪ್ರಾಪ್ತೆಯ ದೇಹದಲ್ಲಾದ ಬದಲಾವಣೆಯನ್ನು ನೋಡಿ ಆಕೆಯ ತಾಯಿ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿಸಿದಾಗ ಆಕೆ ಅಷ್ಟರಲ್ಲಾಗಲೇ ನಾಲ್ಕು ತಿಂಗಳ ಗರ್ಭಿಣಿ ಎಂಬ ವಿಚಾರ ಬೆಳಕಿಗೆ ಬಂದಿದೆ.
ಅಪ್ರಾಪ್ತೆಯ ತಾಯಿ ಇದೇ ತಿಂಗಳ 16ರಂದು ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದು ಮಗಳ ಸ್ಥಿತಿಗೆ ಫನ್​ ಬಕೆಟ್​ ಭಾರ್ಗವ ಕಾರಣ ಎಂದು ಆರೋಪಿಸಿದ್ದಾರೆ. ಈ ಸಂಬಂಧ ವಿಶಾಖಪಟ್ಟಣಂ ನಗರದಲ್ಲಿ ಪೊಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಭಾರ್ಗವ್​ನನ್ನು ಬಂಧಿಸಲಾಗಿದೆ. ಆತನು ಸಹ ಅಪ್ರಾಪ್ತೆಯನ್ನು ತಂಗಿಯ ಹೆಸರಲ್ಲಿ ಅಧೀನದಲ್ಲಿ ಇಟ್ಟುಕೊಂಡು ದೈಹಿಕ ಸಂಪರ್ಕ ನಡೆಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ತೆಲುಗಿನ ಮುಂಚೂಣಿ ಆ್ಯಂಕರ್​ ಒಬ್ಬರು ಸಹ ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಭಾರ್ಗವನನ್ನು ಬಂಧಿಸಲಾಗಿದೆ. ಆತನ ಫೋನ್​ ಮತ್ತು ಲ್ಯಾಪ್​ಟಾಪ್​ ವಶಕ್ಕೆ ಪಡೆಯಲಾಗಿದೆ ಎಂದು ಬರೆದುಕೊಂಡಿದ್ದಾರೆ. ಆದರೆ, ಈ ಸಂದರ್ಭದಲ್ಲಿ ಈ ಸುದ್ದಿ ನಿಜವಾಗಿದೆಯೇ? ಅಥವಾ ಆತಿಥೇಯ ಶಿವ ತನ್ನ ಜನಪ್ರಿಯತೆಯನ್ನು ಹೆಚ್ಚಿಸಲು ಇಂತಹ ನಾಟಕಗಳನ್ನು ಆಡುತ್ತಿದ್ದಾನೆಯೇ ಎಂಬ ಪ್ರಶ್ನೆಗಳನ್ನು ನೆಟ್ಟಿಗರು ಕೇಳಿದ್ದಾರೆ.
https://www.youtube.com/watch?v=-q6Cy9qRY0s&t=47s
ಇದನ್ನೂ ಓದಿರಿ:ಆಸ್ಪತ್ರೆ ಬಾಗಿಲಲ್ಲಿ ಕೂತರೂ ಚಿಕಿತ್ಸೆ ಸಿಗಲಿಲ್ಲ, ಹೆಂಡತಿ-ಮಗನ ಕಣ್ಣೆದುರಲ್ಲೇ ನರಳಾಡಿ ಪ್ರಾಣಬಿಟ್ಟ ಕರೊನಾ ಸೋಂಕಿತ!
ಈ ಬಗ್ಗೆ ಸ್ಪಷ್ಟನೆ ನೀಡಿರುವ ಆ್ಯಂಕರ್ ಶಿವ, ನಾನಿದ್ದನ್ನು ಫಾಲೋವರ್ಸ್​ ಹೆಚ್ಚಿಸಿಕೊಳ್ಳಲು ಮಾಡುತ್ತಿಲ್ಲ. ನಾನು ಹೇಳಿದ್ದೆಲ್ಲ ತಮಾಷೆಯಲ್ಲ, ಇದು ನಿಜವಾದ ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ಶಿವ ಅವರು ಮಾಡಿದ ಪೋಸ್ಟ್‌ಗಳ ಸರಣಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.(ಏಜೆನ್ಸೀಸ್​)
ಗಿಣಿರಾಮ ಧಾರಾವಾಹಿಯಿಂದ ಮಹತಿ ಔಟ್​?! ಅಷ್ಟಕ್ಕೂ ಆಗಿದ್ದೇನು ಗೊತ್ತಾ?
ಬೆಳ್ಳಂಬೆಳಗ್ಗೆ ಎಲ್ಲರಿಗಿಂತ ಬೇಗ ಎಚ್ಚರಗೊಂಡ ಗೇಲ್ ಏಕಾಂಗಿಯಾಗಿ ಹೊರಟಿದ್ದೆಲ್ಲಿಗೆ?​
ಅಪ್ರತಿಮ ಸಾಹಸ ಮೆರೆದ ರೈಲ್ವೆ ಪಾಯಿಂಟ್​​ಮನ್ ಮಯೂರ್ ಶೆಳಕೆಗೆ ಜಾವಾ ಬೈಕ್ ಉಡುಗೊರೆ!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:three × 2 =
Remember me
