ತಿರುವನಂತಪುರಂ:ಆಂಧ್ರ ಪ್ರದೇಶದ ಟಿಕ್​ಟಾಕ್​ ಸ್ಟಾರ್​ ಫನ್​ ಬಕೆಟ್​ ಭಾರ್ಗವನ ರೀತಿಯಲ್ಲೇ ಮತ್ತೊಬ್ಬ ಟಿಕ್​ಟಾಕ್​ ಸ್ಟಾರ್​ನ ಕರಾಳ ಮುಖವಾಡ ಕಳಚಿಬಿದ್ದಿದೆ. ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿ ಗರ್ಭ ಧರಿಸುವಂತೆ ಮಾಡಿರುವ ಆರೋಪದ ಮೇಲೆ ಕೇರಳದ ತ್ರಿಸ್ಸೂರ್​ ಮೂಲದ ಟಿಕ್​ಟಾಕ್​ ಸ್ಟಾರ್​ನನ್ನು ಶನಿವಾರ ಬಂಧಿಸಲಾಗಿದೆ.
ಬಂಧಿತನನ್ನು 19 ವರ್ಷದ ಅಂಬಿಲಿ ಅಲಿಯಾಸ್​ ವಿಘ್ನೇಶ್ ಕೃಷ್ಣ ಎಂದು ಗುರುತಿಸಲಾಗಿದೆ. ಭಾರತೀಯ ದಂಡ ಸಂಹಿತೆ ಮತ್ತು ಪೊಕ್ಸೊ ಕಾಯ್ದೆಯ ವಿವಿಧ ಸೆಕ್ಷನ್​ ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ವಿವರಣೆಗೆ ಬರುವುದಾದರೆ, ವಿಘ್ನೇಶ್ ಕೃಷ್ಣ ಕಳೆದ ವರ್ಷ ಸಾಮಾಜಿಕ ಜಾಲತಾಣದಲ್ಲಿ ಹುಡುಗಿಯೊಬ್ಬಳನ್ನು ಭೇಟಿ ಮಾಡಿ ಮಾಡಿದ್ದ. ಇಬ್ಬರ ಭೇಟಿ ನಂತರದ ದಿನಗಳಲ್ಲಿ ಒಬ್ಬರಿಗೊಬ್ಬರು ಎದುರು-ಬದುರಾಗುವಷ್ಟು ಗಾಢವಾಯಿತು ಮತ್ತು ಇಬ್ಬರ ನಡುವೆ ಸ್ನೇಹ ಬೆಳೆಯಿತು.
ಇದರ ನಡುವೆ ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಹುಡುಗಿಯನ್ನು ತನ್ನ ಮನೆಗೆ ಕರೆದೊಯ್ದು ಆಕೆಯ ಮೇಲೆ ವಿಘ್ನೇಶ್ ಕೃಷ್ಣ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ.
ಹುಡುಗಿ ಗರ್ಭಿಣಿಯಾಗಿರುವುದು ಮನೆಯವರಿಗೆ ತಿಳಿದು ದೂರು ನೀಡುತ್ತಿದ್ದಂತೆ ವಿಘ್ನೇಶ್ ಪರಾರಿಯಾಗಿದ್ದ. ಆತನಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದರು. ಇದೇ ವೇಳೆಯಲ್ಲಿ ಆತ ವಿದೇಶಕ್ಕೆ ಹಾರಲು ಪಾಸ್​ಪೋರ್ಟ್​ಗೆ ಅರ್ಜಿ ಸಲ್ಲಿಸಿದ್ದ. ಪಾಸ್​ಪೋರ್ಟ್​ ರೆಡಿ ಆಗಿದೆ ಎಂದು ಆತನ ಕುಟುಂಬಕ್ಕೆ ತಿಳಿಸಲಾಗಿತ್ತು.
ವಿಘ್ನೇಶ್ ತಂದೆ ಪಾಸ್​ಪೋರ್ಟ್​ ಕೊಡಲು ಅವನಿದ್ದ ಸ್ಥಳಕ್ಕೆ ಹೋಗುವುದನ್ನು ಹಿಂಬಾಲಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಆರೋಪಿ ವಿಚಾರಣೆ ನಡೆಯುತ್ತಿದೆ.
ಚೈನೀಸ್​ ಆ್ಯಪ್​ಗಳು ಬ್ಯಾನ್​ ಆಗುವ ಮುನ್ನ ವಿಘ್ನೇಶ್ ಕೃಷ್ಣ ತನ್ನ ಟಿಕ್​ಟಾಕ್​ ವಿಡಿಯೋಗಳಿಂದ ಸಾಮಾಜಿಕ ಜಾಲತಾಣದಲ್ಲಿ ಒಳ್ಳೆಯ ಖ್ಯಾತಿ ಗಳಿಸಿದ್ದ. ಸಾಕಷ್ಟು ಫಾಲೋವರ್ಸ್​ಗಳನ್ನು ಸಹ ಈತ ಹೊಂದಿದ್ದ.
ಫನ್​ ಬಕೆಟ್​ ಭಾರ್ಗವನದ್ದು ಇದೇ ಕತೆಆಂಧ್ರದ ವಿಜಯನಗರಂ ಜಿಲ್ಲೆಯ ಕೊಟ್ಟವಲಸಾ ಏರಿಯಾದ ನಿವಾಸಿ ಭಾರ್ಗವ ಟಿಕ್​ಟಾಕ್​ ವಿಡಿಯೋಗಳಿಂದ ತುಂಬಾ ಫೇಮಸ್​ ಆಗಿದ್ದಾನೆ. ಒಮ್ಮೆ ಚಾಟಿಂಗ್​ ಮೂಲಕ ವಿಶಾಖಪಟ್ಟಣಂ ಜಿಲ್ಲೆಯ ಸಿನ್ಹಗಿರಿ ಕಾಲನಿಯ 14 ವರ್ಷದ ಬಾಲಕಿಯ ಪರಿಚಯವಾಗಿದೆ. ಚಾಟಿಂಗ್​ನಿಂದ ಆರಂಭವಾದ ಪರಿಚಯ ತುಂಬಾ ಸಲುಗೆಗೆ ತಿರುಗಿತ್ತು. ಇದೇ ಸಲುಗೆಯಲ್ಲಿ ಆಕೆಯನ್ನು ಪುಸಲಾಯಿಸಿ ಅನೇಕ ಬಾರಿ ದೈಹಿಕ ಸಂಪರ್ಕ ನಡೆಸಿದ್ದ. ಕೊನೆಗೆ ಹುಡುಗಿ ಗರ್ಭಿಯಾದ ಬಳಿಕ ಆಕೆಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಭಾರ್ಗವನನ್ನು ಬಂಧಿಸಲಾಗಿದೆ.(ಏಜೆನ್ಸೀಸ್​)
ಬಾಲಕಿ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿಯಾಗಿಸಿದ ಆರೋಪ: ಟಿಕ್​ಟಾಕ್​ ಖ್ಯಾತಿಯ ಫನ್​ ಬಕೆಟ್​ ಭಾರ್ಗವ ಬಂಧನ!

ಬಾಲಕಿ ಮೇಲೆ ರೇಪ್​: ಫನ್​ ಬಕೆಟ್​ ಭಾರ್ಗವ ಬಂಧನ ಬೆನ್ನಲ್ಲೇ ಓ ಮೈ ಗಾಡ್ ಗರ್ಲ್​ ಸ್ಪಷ್ಟನೆ ಹೀಗಿದೆ…

ಫನ್​ ಬಕೆಟ್​ ಭಾರ್ಗವನೊಂದಿಗಿನ ಸಂಬಂಧ ಬಿಚ್ಚಿಟ್ಟು ಭಾವುಕಳಾದ ಓ ಮೈ ಗಾಡ್​ ಗರ್ಲ್​ ನಿತ್ಯಾ..!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:14 + 12 =
Remember me
