ಲಖನೌ:ಹೆಲ್ಮೆಟ್​ ಧರಿಸಿಲ್ಲ ಅಂತ ಭಾರಿ ದಂಡ ವಿಧಿಸಿದ್ದಕ್ಕೆ ಪೊಲೀಸ್​ ಠಾಣೆಯ ವಿದ್ಯುತ್​ ಸಂಪರ್ಕವನ್ನು ಕಡಿತಗೊಳಿಸುವ ಮೂಲಕ ಪೊಲೀಸರ ವಿರುದ್ಧ ಲೈನ್​ಮ್ಯಾನ್​ ಸೇಡು ತೀರಿಸಿಕೊಂಡ ವಿಚಿತ್ರ ಘಟನೆ ಉತ್ತರ ಪ್ರದೇಶದ ಶಾಮ್ಲಿ ಏರಿಯಾದಲ್ಲಿ ನಡೆದಿದೆ. ​
ಥಾನಾ ಭವನ್​ ಪೊಲೀಸ್​ ಠಾಣೆಯಲ್ಲಿ ಈ ಘಟನೆ ನಡೆದಿದೆ. ಹಲವು ತಿಂಗಳುಗಳ ಸುಮಾರು 56 ಸಾವಿರ ರೂ. ವಿದ್ಯುತ್​ ಬಿಲ್​ ಅನ್ನು ಪೊಲೀಸ್​ ಠಾಣೆ ಬಾಕಿ ಉಳಿಸಿಕೊಂಡಿದೆ. ಪೊಲೀಸರು ಲೈನ್​ಮ್ಯಾನ್​ ಬೈಕ್​ ಹಿಡಿದು ಹೆಲ್ಮೆಟ್​ ಹಾಕಿಲ್ಲ ಅಂತ 6 ಸಾವಿರ ರೂ. ದಂಡ ವಿಧಿಸಿದರು. ಆದರೆ, ಸಾಮಾನ್ಯ ದಂಡದ ಮೊತ್ತಕ್ಕಿಂತ ಹೆಚ್ಚು ಹಣ ವಸೂಲಿ ಮಾಡಿದ್ದಕ್ಕೆ ಆಕ್ರೋಶಗೊಂಡ, ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಲೈನ್​ಮ್ಯಾನ್​ ವಿದ್ಯುತ್​ ಸಂಪರ್ಕ ಕಡಿತಗೊಳಿಸಿ ತನ್ನ ಸೇಡು ತೀರಿಸಿಕೊಂಡಿದ್ದಾನೆ.
ವಿದ್ಯುತ್​ ಸಂಪರ್ಕ ಕಡಿತಗೊಂಡಿರುವುದು ಗೊತ್ತಾದ ಬಳಿಕ ಠಾಣೆಯ ಮಹಿಳಾ ಸಿಬ್ಬಂದಿ ವಿದ್ಯುತ್​ ಕಂಬವೇರಿ ವಿದ್ಯುತ್​ ಸಮಸ್ಯೆ ಪರಿಹರಿಸಲು ಪರದಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
UP: शामली में पुलिस ने लाइनमैन का काटा 6 हजार का चालान, जवाब में लाइनमैन ने 56 हजार का बकाया बिल होने पर काट दी पुलिस थाने की बिजलीpic.twitter.com/kiQ0jH24an
— News24 (@news24tvchannel)August 24, 2022

ಕಳೆದ ಜೂನ್​ ತಿಂಗಳಲ್ಲೂ ಇದೇ ರೀತಿಯ ಘಟನೆ ಬರೇಲಿಯಲ್ಲಿ ನಡೆದಿತ್ತು. ಪೊಲೀಸರು ಭಗವಾನ್​ ಸ್ವರೂಪ್ ಎಂಬ ಲೈನ್​ಮ್ಯಾನ್​ ಒಬ್ಬರ ಬೈಕ್ ಅಡ್ಡಗಟ್ಟಿದ್ದರು. ಆಗ ದಾಖಲೆ ಕೇಳಿದ್ದಕ್ಕೆ ಕೊಡಲು ವಿಫಲನಾದ ಲೈನ್​ಮ್ಯಾನ್​ ಮನೆಗೆ ಹೋಗಿ ತರುವುದಾಗಿ ಹೇಳಿದ್ದರೂ ಕೇಳದ ಪೊಲೀಸರು 500 ರೂ. ದಂಡ ವಿಧಿಸಿದ್ದರು.
ಇದರಿಂದ ತೀವ್ರ ಬೇಸರಗೊಂಡ ಲೈನ್​ಮ್ಯಾನ್​, ತನಗೆ ಗೊತ್ತಿರುವ ಸಿಬ್ಬಂದಿಗೆ ಹೇಳಿಸಿ ಠಾಣೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದ. ಈ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ್ದ ಲೈನ್​ಮ್ಯಾನ್​, ಠಾಣೆ ವಿದ್ಯುತ್ ಸಂಪರ್ಕವಿದ್ದರೂ ಮೀಟರ್ ಇರಲಿಲ್ಲ, ಹೀಗಾಗಿ ಅದು ಕಾನೂನುಬಾಹಿರ ಎಂದು ಹೇಳಿದ್ದ.(ಏಜೆನ್ಸೀಸ್​)
ವೇಗವಾಗಿ ಬಂದು 25 ಅಡಿ ಆಳಕ್ಕೆ ಬಿದ್ದ ಕಾರು: ಅಪಘಾತದ ಬೆನ್ನಲ್ಲೇ ಟಾಟಾ ಮೋಟರ್ಸ್​ಗೆ ನೆಟ್ಟಿಗರ ಬಹುಪರಾಕ್​!

ಬಲ್ಕಿಸ್ ಬಾನು ಗ್ಯಾಂಗ್​ ರೇಪ್​ ಅಪರಾಧಿಗಳ ಬಿಡುಗಡೆ: ಗುಜರಾತ್​ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ನೋಟಿಸ್​

ಬಿಜೆಪಿ ಹೇಳುವಂತೆ ಸಾವರ್ಕರ್ ಸ್ವಾತಂತ್ರ್ಯ ಸೇನಾನಿಯಾಗಿದ್ದರೆ ಭಾರತಕ್ಕೆ ಬರಲು ನಿರಾಕರಿಸಿದ್ದೇಕೆ? ಪ್ರಿಯಾಂಕ್ ಖರ್ಗೆ ಪ್ರಶ್ನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 5 =
Remember me
