ಚೆನ್ನೈ:ತಮ್ಮ ಗ್ರಾಮದ ಬೇರೆ ಜಾತಿಯ ಯುವತಿಯ ಜತೆ ಮಗ ಓಡಿ ಹೋಗಿದ್ದಕ್ಕೆ ಒಂದು ಗುಂಪಿನ ಜನರು 45 ವರ್ಷದ ತಾಯಿಯನ್ನು ವಿದ್ಯುತ್​ ಕಂಬಕ್ಕೆ ಕಟ್ಟಿ ಥಳಿಸಿರುವ ಅಮಾನವೀಯ ಘಟನೆ ತಮಿಳುನಾಡಿನ ವಿರುಧಾನಗರ ಜಿಲ್ಲೆಯ ತಿರುಚುಲಿ ಬ್ಲಾಕ್​ನ ಕೆ. ವಗೈಕುಲಮ್​ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಸಂತ್ರಸ್ತೆಯನ್ನು ಮೀನಾಕ್ಷಿ ಎಂದು ಗುರುತಿಸಲಾಗಿದೆ. ಥಳಿತಕ್ಕೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಮೀನಾಕ್ಷಿಯನ್ನು ಅರುಪ್ಪುಕೊಟೈ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮೀನಾಕ್ಷಿ ನೀಡಿರುವ ದೂರಿನ ಆಧಾರದ ಮೇರೆಗೆ ಪರಲಚಿ ಠಾಣಾ ಪೊಲೀಸರು ಯುವತಿಯ ತಾಯಿ ಸೇರಿದಂತೆ 14 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಪೊಲೀಸರ ಪ್ರಕಾರ ಇದೇ ತಿಂಗಳ ಜನವರಿ 22ರಂದು ಸಂತ್ರಸ್ತೆಯ ಮಗ ತಮ್ಮ ಗ್ರಾಮದ ಬೇರೆ ಜಾತಿಯ ಯುವತಿ ಜತೆ ಓಡಿ ಹೋಗಿದ್ದಾನೆ. ಬಳಿಕ ಇಬ್ಬರು ಮದುವೆ ಆಗಿ ರಕ್ಷಣೆ ನೀಡುವಂತೆ ಕೋರಿ ಅರುಪ್ಪುಕೊಟೈ ಮಹಿಳಾ ಪೊಲೀಸ್​ ಠಾಣೆಯ ಮೊರೆ ಹೋಗಿದ್ದಾರೆ.
ಇದಾದ ಮೂರು ದಿನಗಳ ಬಳಿಕ ಅಂದರೆ ಜನವರಿ 25ರಂದು ಯುವತಿಯ ಸಂಬಂಧಿಕರು ಮೀನಾಕ್ಷಿಯನ್ನು ಮನೆಯಿಂದ ಹೊರಗೆ ಎಳೆದುಕೊಂಡು ವಿದ್ಯುತ್​ ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿ, ತುಂಬಾ ಕೆಟ್ಟದಾಗಿ ನಿಂದಿಸಿದ್ದಾರೆ. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಮುಂದಾಗಿದ್ದಾರೆ.(ಏಜೆನ್ಸೀಸ್​)
ಮಿಸ್​ ಕಾಲ್​ನಲ್ಲಿ ಶುರುವಾದ ಪ್ರೀತಿ: ಲವರ್ ಕುರುಡನೆಂದು ತಿಳಿದಾಗ ಯುವತಿ ಮಾಡಿದ್ದು ಕೇಳಿದ್ರೆ ಅಚ್ಚರಿ ಪಡ್ತೀರಾ!

ಮದುವೆ ನಡುವೆ ವರನ ಮುಂದೆಯೇ ನಿದ್ರೆಗೆ ಜಾರಿದ ವಧು: ಮುಂದೇನಾಯ್ತು? ಇಲ್ಲಿದೆ ವೈರಲ್​ ವಿಡಿಯೋ

ಚಾಯ್-ಸ್ಯಾಮ್ ಇಬ್ಬರಲ್ಲಿ ಯಾರು ಮೊದಲು ಡಿವೋರ್ಸ್​ ಬಯಸಿದ್ದು? ಸ್ಫೋಟಕ ಮಾಹಿತಿ ಬಿಚ್ಚಿಟ್ಟ ನಾಗಾರ್ಜುನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − six =
Remember me
