ಹೈದರಾಬಾದ್​:ಬಾಯ್​ಫ್ರೆಂಡ್​ ಮೋಸ ಮಾಡಿದ್ದಕ್ಕೆ ಮನನೊಂದು ಟಾಲಿವುಡ್​ ಕಿರಿಯ ಕಲಾವಿದೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್​ನ ಬಂಜಾರ ಹಿಲ್ಸ್​ನಲ್ಲಿ ನಡೆದಿದೆ. ​
ಅನುರಾಧ (22) ಮೃತ ಕಲಾವಿದೆ. ಈಕೆ ಫಿಲ್ಮ್​ ನಗರದಲ್ಲಿ ಸಹ ಕಿರಿಯ ಕಲಾವಿದ ಕಿರಣ್​ ಎಂಬಾತನ ಜತೆ ಕಳೆದ ಮೂರು ತಿಂಗಳಿಂದ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ಕೆಳಗಿನ ಕೊಠಡಿಯಲ್ಲಿದ್ದ ಕೆಲ ಯುವಕರು ಅನುರಾಧ ಕೊಠಡಿಯಿಂದ ಗಬ್ಬು ವಾಸನೆ ಬರುತ್ತಿರುವುದನ್ನು ಗಮನಿಸಿ ಮನೆ ಮಾಲೀಕರಿಗೆ ಮಾಹಿತಿ ನೀಡಿದ್ದರು.
ಅನುಮಾನಗೊಂಡ ಮಾಲೀಕ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಧಾವಿಸಿದ ಪೊಲೀಸರು ಮನೆಯ ಬಾಗಿಲನ್ನು ಮರಿದು ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಅನುರಾಧ ಮೃತದೇಹ ಪತ್ತೆಯಾಗಿದೆ. ಆಕೆಯ ಮೃತದೇಹವನ್ನು ವಶಕ್ಕೆ ಪಡೆದಿರುವ ಪೊಲೀಸರು ಸಮೀಪದ ಆಸ್ಪತ್ರೆಗೆ ರವಾನಿಸಿದ್ದಾರೆ.

ಅನುರಾಧ ಪಾಲಕರು ಕಿರಣ್​ ವಿರುದ್ಧ ದೂರು ದಾಖಲಿಸಿದ್ದಾರೆ. ಆರು ವರ್ಷಗಳಿಂದ ನಮ್ಮ ಮಗಳು ಕಿರಣ್​ ಎಂಬಾತನ್ನು ಪ್ರೀತಿಸುತ್ತಿದ್ದಳು. ಆಕೆಗೆ ಗೊತ್ತಿಲ್ಲದಂತೆ ಕಿರಣ್​ ಇನ್ನೊರ್ವ ಯುವತಿಯ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದನ್ನು. ಇದು ಅನುರಾಧಳಿಗೆ ತಿಳಿದು ಬಾಯ್​ಫ್ರೆಂಡ್​ನಿಂದ ಮೋಸ ಹೋಗಿದ್ದನ್ನು ಸಹಿಸದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಅನುರಾಧ ಸಹೋದರಿ ಪೊಲೀಸರಿಗೆ ತಿಳಿಸಿದ್ದಾರೆ.
ಅನುಮಾನಸ್ಪದ ಸಾವು ಪ್ರಕರಣವನ್ನು ದಾಖಲಿಸಿರುವ ಬಂಜಾರ ಹಿಲ್ಸ್​ ಪೊಲೀಸರು ತನಿಖೆ ಕೈಗೊಂಡಿದ್ದು, ತಲೆಮರೆಸಿಕೊಂಡಿರುವ ಕಿರಣ್​ಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.(ಏಜೆನ್ಸೀಸ್​)
ಡೆತ್​ನೋಟ್​ ಬರೆದಿಟ್ಟು ಬೆಂಗಳೂರು ಸಮೀಪ ಕಿರುತೆರೆ ನಟಿ ಸವಿ ಮಾದಪ್ಪ ಆತ್ಮಹತ್ಯೆ

ನಾನು ಕನ್ಯತ್ವ ಕಳೆದುಕೊಂಡಿದ್ದೇನೆ: 7 ವರ್ಷದ ಸಂಬಂಧದ ಬಗ್ಗೆ ಬೋಲ್ಡ್​ ಮಾತುಗಳನ್ನಾಡಿದ ಟಾಲಿವುಡ್​ ಬ್ಯೂಟಿ

ಸಮಂತಾರ ಈ ನಡೆಯಿಂದ ಅಭಿಮಾನಿಗಳು ಫುಲ್​ ಖುಷ್! ಮನಸ್ಸು ಬದಲಿಸಿದ್ರಾ ಸೌತ್​ ಬ್ಯೂಟಿ?

ಡಿವೋರ್ಸ್​ ವಿಚಾರವಾಗಿ ಕೊನೆಗೂ ಮೌನ ಮುರಿದ ಸಮಂತಾ: ಆದ್ರೆ ಸೌತ್​ ಬ್ಯೂಟಿ ಹೇಳಿಕೆಯಿಂದ ಫ್ಯಾನ್ಸ್​ ಕನ್ಫ್ಯೂಸ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 18 =
Remember me
