ಶ್ರೀಕಾಕುಳಂ:ಅವರಿಬ್ಬರು ಶಿಕ್ಷಿತರು. ಸರಿ-ತಪ್ಪು ಯಾವುದೆಂದು ಚಿಂತಿಸುವ ಸಾಮರ್ಥ್ಯ ಇದ್ದವರು. ಜೀವನ ಅಂದಮೇಲೆ ಸವಾಲುಗಳು ಬರುವುದು ಸಹಜ ಎಂದು ತಿಳಿದಿದವರು. ಧೈರ್ಯ ಮಾಡಿ ಮದುವೆ ಆದ ಅವರಿಬ್ಬರು ಜೀವನವನ್ನು ಎದುರಿಸಲಾಗದೇ ಆತ್ಮಹತ್ಯೆ ಹಿಡಿದಿರುವುದು ನಿಜಕ್ಕೂ ಆಘಾತಕಾರಿ ವಿಚಾರ.
ನವದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ಶ್ರೀಕಾಕುಳಂನಲ್ಲಿ ಬುಧವಾರ ನಡೆದಿದೆ. ಮೃತ ದಂಪತಿಯನ್ನು ಹರೀಶ್​ (29) ಮತ್ತು ರೇಣುಕಾ ದಿವ್ಯಾ (20) ಎಂದು ಗುರುತಿಸಲಾಗಿದೆ. ಇಬ್ಬರ ಆತ್ಮಹತ್ಯೆ ಹಿಂದಿರುವ ಕಾರಣ ನಿಗೂಢವಾಗಿದ್ದು, ತನಿಖಾ ನಂತರ ತಿಳಿದುಬರಬೇಕಿದೆ.
ಸಬ್​ ಇನ್ಸ್​ಪೆಕ್ಟರ್​ ಶೇಖ್​ ಮೊಹಮ್ಮದ್​ ಅಲಿ ಪ್ರಕಾರ ಹರೀಶ್​, ಶ್ರೀಕಾಕುಳಂ ಜಿಲ್ಲೆಯ ತನಿವಾಡ ಗ್ರಾಮದ ನಿವಾಸಿ. ಈತ ಎಂಸಿಎ ಓದಿದ್ದ. ರೇಣುಕಾ, ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ ಆಗಿದ್ದಳು. ಇಬ್ಬರು ಒಂದೇ ಗ್ರಾಮದವರು ಹಾಗೂ ಒಂದೇ ಸಮುದಾಯದವರಾಗಿದ್ದರಿಂದ ಪರಿಚಯವಾಗಿ, ಪ್ರೀತಿಗೆ ತಿರುಗಿತ್ತು. ಕಳೆದ ಸೆಪ್ಟೆಂಬರ್​ 1ರಲ್ಲಿ ಇಬ್ಬರ ಮದುವೆ ಸರಳವಾಗಿ ದೇವಸ್ಥಾನದಲ್ಲೇ ನಡೆದಿತ್ತು.
ಇಬ್ಬರು ಕೆಲಸ ಹುಡುಕಾಟಕ್ಕೆಂದು ಎರಡು ದಿನಗಳ ಹಿಂದೆ ವಿಶಾಖಪಟ್ಟಣಕ್ಕೆ ಬಂದಿದ್ದರು. ಪರಿಚಯಸ್ಥರ ಮನೆಯಲ್ಲೇ ಉಳಿದುಕೊಂಡಿದ್ದರು. ಬುಧವಾರ ಏನಾಯಿತೋ ಇಬ್ಬರ ಶವ ಮನೆಯ ಫ್ಯಾನ್​ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನೇತಾಡುತ್ತಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿರುವ ಪೊಲೀಸರು ಸಾವಿಗೆ ಕಾರಣ ಏನೆಂದು ತಿಳಿಯಲು ತನಿಖೆ ಚುರುಕುಗೊಳಿಸಿದ್ದಾರೆ.(ಏಜೆನ್ಸೀಸ್​)
ಮಧ್ಯರಾತ್ರಿ ಗರ್ಲ್​ಫ್ರೆಂಡ್ ಬೆಡ್​ರೂಮ್​ ಬಾಗಿಲು ಬಡಿದ ಯುವಕ: ಕದ ತೆರೆದವಳಿಗೆ ಕಾದಿತ್ತು ಶಾಕ್​..!

ಟಿಕ್ರಿ ಗಡಿಯಲ್ಲಿ ರೈತ ಮಹಿಳೆಯರ ಮೇಲೆ ಚಲಿಸಿದ ಟ್ರಕ್​; ಮನೆಗೆ ಹೊರಟಿದ್ದವರ ಪ್ರಾಣ ಹೊತ್ತೊಯ್ದ ಜವರಾಯ

ಮಧ್ಯರಾತ್ರಿ ಗರ್ಲ್​ಫ್ರೆಂಡ್ ಬೆಡ್​ರೂಮ್​ ಬಾಗಿಲು ಬಡಿದ ಯುವಕ: ಕದ ತೆರೆದವಳಿಗೆ ಕಾದಿತ್ತು ಶಾಕ್​..!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:4 × 3 =
Remember me
