ಹೈದರಾಬಾದ್​:ಖಾಸಗಿ ಕಾಲೇಜಿಗೆ ಸೇರಿಸಲಿಲ್ಲ ಅಂತಾ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ತಲಮಾದ್ರಿಯಲ್ಲಿ ಗುರುವಾರ ನಡೆದಿದೆ.
ಪೂಜಾ (19) ಮೃತ ಯುವತಿ. ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿನಿಯಾಗಿದ್ದಳು. ತಲಮಾದ್ರಿಯಲ್ಲಿರುವ ಖಾಸಗಿ ಕಾಲೇಜಿಗೆ ಸೇರಿಸದೇ ಸರ್ಕಾರಿ ಕಾಲೇಜಿಗೆ ಸೇರಿಸಿದರು ಎಂದು ಮನನೊಂದು ಪೂಜಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ತಲಮಾದ್ರಿ ಎಸ್ಐ ಉದಯ್​ಕುಮಾರ್​ ತಿಳಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿದ್ದ ಮಹಿಳಾ ಕಾಲೇಜಿನಲ್ಲಿ ಓದಲು ಪೂಜಾಗೆ ಇಷ್ಟವಿರಲಿಲ್ಲ. ಹೀಗಾಗಿ ಖಾಸಗಿ ಕಾಲೇಜಿಗೆ ಕಳುಹಿಸುವಂತೆ ಒತ್ತಾಯ ಮಾಡುತ್ತಿದ್ದ ಪೂಜಾ ಎರಡು ತಿಂಗಳು ಕಾಲೇಜಿಗೆ ಹೋಗದೆ ಮನೆಯಲ್ಲೇ ಇದ್ದಳು. ಗುರುವಾರ ಕುಟುಂಬಸ್ಥರು ಕೆಲಸಕ್ಕೆಂದು ಹೊರಗಡೆ ಹೋದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನಾ ಸಂಬಂಧ ದೂರು ದಾಖಲಿಸಿಕೊಂಡಿರುವ ತಲಮಾದ್ರಿ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್​)
VIDEO| ಬ್ಲೌಸ್​ ಬದ್ಲು ಮೆಹೆಂದಿ ತೊಟ್ಟ ನಾರೀಮಣಿ! ಇನ್ನೂ ಏನೇನು ಮಾಡ್ತಾರೋ ಎಂದ ನೆಟ್ಟಿಗರು

ಇತಿಹಾಸ ಬರೆದ ಎಜಾಜ್​ ಪಟೇಲ್​: ಒಂದೇ ಇನ್ನಿಂಗ್ಸ್​ನಲ್ಲಿ 10 ವಿಕೆಟ್​ ಪಡೆದ ವಿಶ್ವದ 3ನೇ ಬೌಲರ್​

ಈ ಒಂದು ಷರತ್ತಿಗೆ ಒಪ್ಪಿಗೆ ನೀಡಿದ್ರೆ ಮಾತ್ರ ಮದುವೆ ಆಗುತ್ತಾರಂತೆ ನಟಿ ಸಾರಾ ಅಲಿ ಖಾನ್​!

VIDEO| ಮೈತೋರಿಸೋ ಬಟ್ಟೆ​ ಬಗ್ಗೆ ಟ್ರೋಲ್​ ಮಾಡೋರ್ಗೆ ಉರ್ಫಿ ನೀಡಿದ ಉತ್ತರ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
