ಹೈದರಾಬಾದ್​:ನಿನ್ನೆ (ಮಾ. 25) ವಿಶ್ವದಾದ್ಯಂತ ತೆರೆಕಂಡ ಆರ್​ಆರ್​ಆರ್​ ಸಿನಿಮಾ ಅದ್ಭುತ ಪ್ರತಿಕ್ರಿಯೆಯೊಂದಿಗೆ ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸಿದೆ. ಆರ್​ಆರ್​ಆರ್​ ಸಿನಿಮಾ ನೋಡಿದ ಜೂ. ಎನ್​ಟಿಆರ್​ ಮತ್ತು ರಾಮ್​ಚರಣ್​ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿದೆ. ಸಿನಿಮಾ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬರುತ್ತಿದ್ದು, ಸಂಭ್ರಮ ಮನೆ ಮಾಡಿರುವ ಮಧ್ಯೆಯೇ ದುರಂತ ಘಟನೆಯಿಂದ ನಡೆದು ಹೋಗಿದೆ.
ಆಂಧ್ರ ಪ್ರದೇಶದ ಅನಂತಪುರದಲ್ಲಿರುವ ಎಸ್​ವಿ ಮ್ಯಾಕ್ಸ್​ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಣೆ ಮಾಡುವಾಗ ಅಭಿಮಾನಿಯೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ. ಸಿನಿಮಾ ನೋಡಲು ಕಾತುರರಾಗಿದ್ದ ಅಭಿಮಾನಿಯೊಬ್ಬರು ತಮ್ಮ ನೆಚ್ಚಿನ ನಾಯಕನನ್ನು ಫೋನ್‌ನಲ್ಲಿ ಚಿತ್ರೀಕರಿಸುತ್ತಿದ್ದಾಗ ಮಧ್ಯದಲ್ಲಿ ಏಕಾಏಕಿ ಕುಸಿದು ಬಿದ್ದಿದ್ದಾರೆ. ಈ ದುರಂತ ಘಟನೆ ಎಲ್ಲಾ ಅಭಿಮಾನಿಗಳನ್ನು ಕೂಡ ಬೆಚ್ಚಿಬೀಳಿಸಿದೆ.
ಸಾವಿಗೂ ಮುನ್ನ ಆತನ ಸ್ನೇಹಿತರು ಆತನನ್ನು ಆಸ್ಪತ್ರೆಗೆ ಕರೆದೊಯ್ದರು, ಆದರೆ ವೈದ್ಯರು ಹೃದಯಾಘಾತದಿಂದ ಈಗಾಗಲೇ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದರು. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ. ನೆಚ್ಚಿನ ನಾಯಕನ ಸಿನಿಮಾ ನೋಡಲು ಕಾತರರಾಗಿದ್ದ ಅಭಿಮಾನಿಯೊಬ್ಬರನ್ನು ಕಳೆದುಕೊಂಡಿರುವುದು ಹಲವರ ಬದುಕಿಗೆ ನೋವುಂಟು ಮಾಡಿದೆ.
ಇನ್ನೊಂದೆಡೆ ಚಿತ್ರಕ್ಕೆ ಮೊದಲ ದಿನವೇ ಪಾಸಿಟಿವ್ ಟಾಕ್ ಸಿಕ್ಕಿದ್ದು, ಹಿಂದೆಂದೂ ಕಾಣದಷ್ಟು ಹೊಸ ಬಾಕ್ಸಾಫೀಸ್ ದಾಖಲೆಗಳನ್ನು ಸೃಷ್ಟಿಸಿದೆ ಎಂದು ತಿಳಿದುಬಂದಿದೆ.(ಏಜೆನ್ಸೀಸ್​)
ದೃಶ್ಯವೈಭೋಗದೊಳಗೆ ಅಬ್ಬರದ ರೋಚಕತೆ…; RRR- ವಿಜಯವಾಣಿ ಸಿನಿಮಾ ವಿಮರ್ಶೆ

ಸಣ್ಣ ವಿಚಾರಕ್ಕೆ ಫೋನ್​ನಲ್ಲೇ ಕಿತ್ತಾಡಿಕೊಂಡ ಪ್ರೇಮಿಗಳು: ಮರುದಿನವೇ ನಡೆಯಿತು ಘೋರ ದುರಂತ!

ಒಮಿಕ್ರಾನ್​ಗಿಂತ ಮಾರಕ ವೈರಸ್?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − two =
Remember me
