ಹೈದರಾಬಾದ್​:ಸಾಫ್ಟ್​ವೇರ್​ ಇಂಜಿನಿಯರ್​ ಕುಟುಂಬವೊಂದು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ತೆಲ್ಲಪುರ್​ನಲ್ಲಿ ನಡೆದಿದೆ.
ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಸಹಿಸಲಾರದೇ ಇಬ್ಬರು ಮಕ್ಕಳೊಂದಿಗೆ ಪತ್ನಿಯು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಗಂಡ ಚಂದ್ರಕಾಂತ್​ ರಾವ್​​ ಬಿಎಚ್​ಇಎಲ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡರೆ, ಮಗ ಪ್ರೀತಂ (9) ಮತ್ತು ಮಗಳು ಸರ್ವಜ್ಞ (ಒಂದೂವರೆ ವರ್ಷ) ಇಬ್ಬರನ್ನು ಕೆರೆಗೆ ಎಸೆದು ತಾನು ಕೆರೆಗೆ ಹಾರಿ ಪತ್ನಿ ಲಾವಣ್ಯ ಪ್ರಾಣ ಕಳೆದುಕೊಂಡಿದ್ದಾರೆ.
ಚಂದ್ರಕಾಂತ ರಾವ್​ ಅವರು ಬ್ಯಾಂಕ್​ನಲ್ಲಿ ಸಾಲ ಪಡೆದು ಬಿಎಚ್​ಇಎಲ್​ ಬಳಿಯ ಬೈರಗುಡದಲ್ಲಿ ಅಪಾರ್ಟ್​ಮೆಂಟ್​ ಖರೀದಿಸಿದ್ದರು.​ ಆದರೆ, ಚಂದ್ರಕಾಂತ್​ಗೆ ಸಾಲ ತೀರಿಸುವುದು ಕಷ್ಟವಾಗಿತ್ತು. ಅವರ ತಂದೆ ಬಿಎಚ್​ಇಎಲ್​ ನಿವೃತ್ತ ನೌಕರರಾಗಿದ್ದರಿಂದ ಆರ್ಥಿಕ ಸಹಾಯ ಮಾಡುವಂತೆ ಕೋರಿದ್ದರು. ಆದರೆ ತಂದೆ ನಿರಾಕರಿಸಿದ್ದರಂತೆ. ಇದೇ ವಿಚಾರವಾಗಿ ಕಳೆದ ಒಂದು ವರ್ಷದಿಂದಲೂ ಜಗಳ ನಡೆಯುತ್ತಿತ್ತು.
6 ಎಕರೆಯಲ್ಲಿ 2 ಎಕರೆ ಜಮೀನು ಮಾರಿ ಸಾಲವನ್ನು ತೀರಿಸಲು ಚಂದ್ರಕಾಂತ್​ ರಾವ್​ ಮುಂದಾಗಿದ್ದರು. ಆದರೆ, ತಂದೆ ಒಪ್ಪಿರಲಿಲ್ಲ. ಇತ್ತರ ನಿರಂತರ ಜಗಳದಿಂದ ಮನನೊಂದಿದ್ದ ಚಂದ್ರಕಾಂತ್​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತ ಗಂಡ ಸಾವಿನ ಸುದ್ದಿ ಕೇಳಿದ ಲಾವಣ್ಯ ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ಜೀವ ಬಿಟ್ಟಿದ್ದಾರೆ.(ಏಜೆನ್ಸೀಸ್​)
ಕರೊನಾ ಸೋಂಕು ತಡೆಗಟ್ಟಲು ಈ ಚ್ಯೂಯಿಂಗ್‌ ಗಮ್‌ ತಿನ್ನಿ ಎನ್ನುತ್ತಿದ್ದಾರೆ ಸಂಶೋಧಕರು! ಏನಿದೆ ಇದರಲ್ಲಿ?
ನಿನ್ನೆ ರಾತ್ರಿ ಪಬ್​ನಲ್ಲಿ ನಡೆದ ಹಲ್ಲೆಯ ಬಗ್ಗೆ ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಕಿರಿಕ್​ ಕೀರ್ತಿ!
VIDEO| ಚಲಿಸುವ ರೈಲಿನಿಂದ ಜಿಗಿದು ಸಾವಿನ ಕದ ತಟ್ಟಿಬಂದ ಮಹಿಳೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + fourteen =
Remember me
