ಕೊಚ್ಚಿ:ಕೇರಳದ ಮೊದಲ ತೃತೀಯಲಿಂಗಿ ರೇಡಿಯೋ ಜಾಕಿ ಅನನ್ಯಾ ಕುಮಾರಿ ಅಲೆಕ್ಸ್​ ಸಾವಿನ ಪ್ರಕರಣ ಕೇರಳದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಅನನ್ಯ ಶವಪರೀಕ್ಷೆಯಲ್ಲಿ ಕೆಲವು ಸ್ಫೋಟಕ ಮಾಹಿತಿಗಳು ಬಹಿರಂಗವಾಗಿದೆ. ಮರಣೋತ್ತರ ವರದಿಯ ಪ್ರಕಾರ ಅನನ್ಯಾರ ಗುಪ್ತಾಂಗದಲ್ಲಿ ಗುಣಪಡಿಸಲಾಗದ ಗಾಯಗಳಿದ್ದವು ಎಂದು ತಿಳಿದುಬಂದಿದ್ದು, ಅನನ್ಯಾ ಆರೋಪಕ್ಕೆ ಪುಷ್ಠಿ ನೀಡುವಂತಹ ಸಂಗತಿಗಳು ಬಯಲಾಗಿವೆ.
ಪೊಲೀಸರಿಗೆ ಹಸ್ತಾಂತರಿಸಿರುವ ಮರಣೋತ್ತರ ವರದಿಯಲ್ಲಿ ಆಕೆಯ ಸಾವಿನಲ್ಲಿ ಯಾವುದೇ ಸಂಚು ನಡೆದಿಲ್ಲ ಎಂದು ತಿಳಿದುಬಂದಿದೆ ಮತ್ತು ಅನನ್ಯಾ ಆತ್ಮಹತ್ಯೆ ಮಾಡಿಕೊಂಡಿರುವುದು ದೃಢವಾಗಿದೆ. ಎರ್ನಾಕುಲಂ ವೈದ್ಯಕೀಯ ಕಾಲೇಜಿನ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥರ ನೇತೃತ್ವದ ತಂಡವು ಮರಣೋತ್ತರ ವರದಿಯನ್ನು ಸಿದ್ಧಪಡಿಸಿದೆ. ವರದಿಯನ್ನು ಶನಿವಾರ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಅನನ್ಯಾ ಅವರ ಎಸ್‌ಆರ್‌ಎಸ್ ಶಸ್ತ್ರಚಿಕಿತ್ಸೆ ನಡೆಸಿದ ಕೊಚ್ಚಿಯ ಖಾಸಗಿ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜನ್ ಕಡೆಯಿಂದ ಏನಾದರೂ ಲೋಪಗಳು ಕಂಡುಬಂದಿದೆಯೇ ಎಂದು ಸ್ಪಷ್ಟಪಡಿಸುವ ವೈದ್ಯರ ಹೇಳಿಕೆಯನ್ನು ಪೊಲೀಸರು ದಾಖಲಿಸಲಿದ್ದಾರೆ. ಮರಣೋತ್ತರ ವರದಿ ಕುರಿತು ಚರ್ಚಿಸಲು ಕಲಮಸ್ಸೆರಿ ಮೆಡಿಕಲ್​ ಕಾಲೇಜಿಗೆ ಪೊಲೀಸರು ತೆರಳಲಿದ್ದಾರೆ. ಅನನ್ಯಾರಿಗೆ ಸರ್ಜರಿ ಮಾಡಿದ ಡಾ. ಅರ್ಜುನ್​ರನ್ನು ಅದೇ ದಿನ ಪೊಲೀಸರು ವಿಚಾರಣೆ ನಡೆಸಲಿದ್ದಾರೆ.
ಕಳೆದ ಮಂಗಳವಾರ ಕೊಚ್ಚಿಯಲ್ಲಿರುವ ನಿವಾಸದಲ್ಲಿ ಅನನ್ಯಾ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪ್ರಾಥಮಿಕ ವರದಿ ಪ್ರಕಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗಿತ್ತು. ಅದೀಗ ಮರಣೋತ್ತರ ವರದಿಯಿಂದ ಖಚಿತವಾಗಿದೆ. ಕಳೆದ ಒಂದು ವರ್ಷದಿಂದ ಅನನ್ಯಾ ವಿವಿಧ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಅದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಕಳೆದ ವರ್ಷ್​ ಜೂನ್​ ತಿಂಗಳಲ್ಲಿ ಅನನ್ಯಾ ಆರು ಬಾರಿ ಲಿಂಗ ಪರಿಪರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದಾದ ಬಳಿಕ ಅವರ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಳ್ಳಲು ಆರಂಭಿಸಿತು ಎಂದು ಸ್ವತಃ ಅನನ್ಯಾ ಹಿಂದೊಮ್ಮೆ ಹೇಳಿಕೊಂಡಿದ್ದಾರೆ. ಸರ್ಜರಿ ಮಾಡಿದ ಡಾ. ಅರ್ಜುನ್​ ವಿರುದ್ಧ ಅನನ್ಯಾ ಗಂಭೀರ ಆರೋಪ ಮಾಡಿದ್ದಾರೆ.
ಅನನ್ಯಾ ಮೃತಪಟ್ಟ ಮೂರು ದಿನಗಳ ಬಳಿಕ ಆಕೆಯ ಪಾರ್ಟ್ನರ್​ ಜಿಜು ರಾಜ್​ ಮೃತದೇಹ ಕೂಡ ಎಡಪಲ್ಲಿಯ ಫ್ಲ್ಯಾಟ್​ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೊಲೀಸರು ಸಾವಿಗೂ ಮುನ್ನ ಆತನ ಹೇಳಿಕೆಯನ್ನು ದಾಖಲಿಸಿದ್ದರು.(ಏಜೆನ್ಸೀಸ್)
ಕೇರಳದ ಮೊದಲ ತೃತೀಯಲಿಂಗಿ ರೇಡಿಯೋ ಜಾಕಿ ಆತ್ಮಹತ್ಯೆ: ಈ ನಿರ್ಧಾರವೇ ಮುಳುವಾಯ್ತಾ?

ದಿನಕ್ಕೆ 12 ಸ್ಯಾನಿಟರಿ ಪ್ಯಾಡ್​ ಬಳಸ್ತಿದ್ದೆ! ನೋವಿನಿಂದಲೇ ಸಾವಿನ ಕದ ತಟ್ಟಿದವಳ ಕರುಣಾಜನಕ ಕತೆಯಿದು

ಕೇರಳದ ಮೊದಲ ತೃತೀಯಲಿಂಗಿ ರೇಡಿಯೋ ಜಾಕಿ ಸಾವಿನ ಬೆನ್ನಲ್ಲೇ ಶವವಾಗಿ ಪತ್ತೆಯಾದ ಸ್ನೇಹಿತ!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:ten + 18 =
Remember me
