ಅಗಲಿ:ಯಾವುದಾದರೂ ಸ್ಥಳಕ್ಕೆ ಹೋಗಬೇಕಾದಾಗ, ಯಾವುದಾದರೂ ಸ್ಥಳವನ್ನು ನೋಡಿ ತಿಳಿಯಬೇಕಾದಾಗ ಸಾಮಾನ್ಯವಾಗಿ ನಾವೆಲ್ಲ ಒಂದಲ್ಲ ಒಂದು ಸಲ ಗೂಗಲ್ ಮ್ಯಾಪ್​, ಗೂಗಲ್​ ಸರ್ಚ್​ನ ಮೊರೆ ಹೋಗಿರುತ್ತೇವೆ. ಅದರಲ್ಲೂ ಗೂಗಲ್​ ಮ್ಯಾಪ್ ಹೆಚ್ಚಾಗಿ ಬಳಕೆ ಮಾಡುತ್ತೇವೆ. ಆದರೆ, ಗೂಗಲ್​ ಮ್ಯಾಪ್​ ಬಳಸುವಾಗ ಸ್ವಲ್ಪ ಎಚ್ಚರ ತಪ್ಪಿದರೆ ಏನಾಗಬಹುದು ಎಂಬುದಕ್ಕೆ ಕೇರಳದಲ್ಲಿ ನಡೆದ ಈ ಒಂದು ಘಟನೆ ತಾಜಾ ಉದಾಹರಣೆ ಆಗಿದೆ.
ಟ್ರೈಲರ್​ ಲಾರಿ ಉರುಳಿಬಿದ್ದ ಪರಿಣಾಮ ಹಿಂದೆ ಬರುತ್ತಿದ್ದ ಮತ್ತೊಂದು ಲಾರಿ ಸಿಲುಕಿ ಭಾರೀ ಪ್ರಮಾಣದಲ್ಲಿ ಟ್ರಾಫಿಕ್​ ಜಾಮ್​ ಉಂಟಾದ ಘಟನೆ ಕೇರಳದ ಅಟ್ಟಪ್ಪಾಡಿ ಘಾಟ್​ನಲ್ಲಿ ನಡೆದಿದೆ. ಸುಮಾರು 12 ಗಂಟೆಗಳ ಕಾಲ ಟ್ರಾಫಿಕ್​ ಬಿಸಿ ಸವಾರರಿಗೆ ತಟ್ಟಿದೆ. ಬುಧವಾರ ಮಧ್ಯರಾತ್ರಿ 12 ಗಂಟೆಗೆ ಲಾರಿಗಳು ಅಟ್ಟಪ್ಪಾಡಿ ಘಾಟ್​ನಲ್ಲಿ ಸಿಲುಕಿದವು. ಸಮೀಪದ ಮನ್ನಾರ್​ಕ್ಕಾಡ್​ನಿಂದ ಕ್ರೇನ್​ ತರಿಸಿ ಲಾರಿಗಳನ್ನು ತೆರವುಗೊಳಿಸಿ ಮತ್ತೆ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಇನ್ನು ಇಷ್ಟೆಲ್ಲ ಅವಾಂತರಕ್ಕೆ ಕಾರಣ ಗೂಗಲ್​ ಮ್ಯಾಪ್​ ಎಂಬುದು ಕುತೂಹಲಕಾರಿ ಸಂಗತಿ. ಅಂದಹಾಗೆ ಲಾರಿಗಳು ಎಲೆಕ್ಟ್ರಿಕ್​ ಮೋಟರ್ಸ್​ಗೆ ಬಳಸುವ ಕಾಯಿಲ್​ಗಳನ್ನು ತುಂಬಿದ್ದ ಲಾರಿಗಳು ಮಂಗಳೂರಿನಿಂದ ತಮಿಳುನಾಡಿನ ಈರೋಡ್​ಗೆ ತೆರಳುತ್ತಿದ್ದವು. ಚಾಲಕರಿಗೆ ದಾರಿ ಹೊಸದಾದ್ದರಿಂದ ಗೂಗಲ್​ ಮ್ಯಾಪ್​ ಮೊರೆ ಹೋಗಿದ್ದಾರೆ. ವಾಸ್ತವವಾಗಿ ಲಾರಿಗಳು ಪಲಕ್ಕಾಡ್​-ವಾಲಾಯಾರ್​ ನಡುವಿನ ಮಾರ್ಗದಲ್ಲಿ ಚಲಿಸಬೇಕಾಗಿತ್ತು. ಆದರೆ, ಗೂಗಲ್​ ಮ್ಯಾಪ್​ ಅವರನ್ನು ನೆಲ್ಲಿಪುಳಾ ಕಡೆಗೆ ಕರೆದೊಯ್ದಿದೆ. ಕೊನೆಗೆ ಅಟ್ಟಪ್ಪಾಡಿ ಘಾಟ್​ ದಾರಿ ಹಿಡಿದ ಲಾರಿ ಚಾಲಕರಿಗೆ ಬಿಗ್​ ಶಾಕ್​ ಕಾದಿತ್ತು.
ಆನಾಮೂಲಿ ಚೆಕ್​ಪೋಸ್ಟ್​ ದಾಟಿ ಘಾಟ್​ ರಸ್ತೆ ಪ್ರವೇಶಿಸಿದ ಲಾರಿಗಳು ಮಾರ್ಗಮಧ್ಯೆಯೇ ಸಿಲುಕಿವೆ. ಈ ಬಗ್ಗೆ ಮಾತನಾಡಿರುವ ಮಣ್ಣರಕ್ಕಾಡ್ ಡಿಎಫ್ಒ ಸುರ್ಜಿತ್, ಘಾಟ್ ರಸ್ತೆಯ ಮೂಲಕ ಯಾವ ರೀತಿಯ ವಾಹನಗಳಿಗೆ ಅನುಮತಿ ನೀಡಬೇಕು ಎಂಬುದರ ಕುರಿತು ಅರಣ್ಯ ಇಲಾಖೆಗೆ ಯಾವುದೇ ಮಾರ್ಗಸೂಚಿ ಬಂದಿಲ್ಲ ಎಂದು ಹೇಳಿದ್ದಾರೆ.(ಏಜೆನ್ಸೀಸ್​)
ರಾಕಿಂಗ್​ ಸ್ಟಾರ್​ ಯಶ್​ ಧರಿಸಿರುವ ರೋಲೆಕ್ಸ್​ ವಾಚ್​ ದರ ಕೇಳಿದ್ರೆ ನಿಜಕ್ಕೂ ದಂಗಾಗ್ತೀರಾ..!

ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆ ಪ್ರಯೋಜನ ಪಡೆಯುವುದು ಹೇಗೆ?

ಈ ಬಂಕ್​ನಲ್ಲಿ 3 ದಿನ ಉಚಿತ ಪೆಟ್ರೋಲ್​: ಕಾರಣ ಕೇಳಿದ್ರೆ ಮಾಲೀಕನಿಗೆ ಖಂಡಿತ ಶಹಬ್ಬಾಸ್​ ಅಂತಿರಾ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
