ತಿರುವನಂತಪುರಂ:ದಕ್ಷಿಣ ಭಾರತದ ಬಹುಭಾಷಾ ನಟಿ ತ್ರಿಶಾ ಮಾಡಿದ ಎಟವಟ್ಟನ್ನೇ ಮಲಯಾಳಂ ಕಿರುತೆರೆ ನಟಿ ಮಾಡಿದ್ದು, ತೀವ್ರ ಟೀಕೆ ಗುರಿಯಾಗಿದ್ದಾರೆ. ಅಲ್ಲದೆ, ನಟಿಯು ಪೊಲೀಸ್​ ತನಿಖೆಯನ್ನು ಎದುರಿಸುವಂತಾಗಿದೆ.
ಇತ್ತೀಚೆಗೆ ಮಣಿರತ್ನಂ ನಿರ್ದೇಶನದ ಪೊನ್ನಿನ್ ಸೆಲ್ವನ್ ಚಿತ್ರವನ್ನು ತಮಿಳುನಾಡಿನ ಐತಿಹಾಸಿಕ ದೇವಸ್ಥಾನವೊಂದರ ಒಳಗಡೆ ಶೂಟ್​ ಮಾಡಲಾಯಿತು. ನಟಿ ತ್ರಿಶಾ ಅವರ ಮಹತ್ವದ ಪಾತ್ರಗಳನ್ನು ಸೆರೆಹಿಡಿಯಲಾಯಿತು. ಶೂಟಿಂಗ್​ ಗ್ಯಾಪ್​ನಲ್ಲಿ ನಟಿ ತ್ರಿಶಾ ಚಪ್ಪಲಿ ಹಾಕಿಕೊಂಡೆ ದೇವಸ್ಥಾನದ ಒಳಗೆ ಓಡಾಡಿದ್ದರು. ಅದರಲ್ಲೂ ಶಿವಲಿಂಗ ಮತ್ತು ನಂದಿಯ ನಡುವೆ ತ್ರಿಶಾ ಚಪ್ಪಲಿ ಹಾಕಿಕೊಂಡು ನಿಂತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ ಸಾಕಷ್ಟು ಟೀಕೆಗಳು ವ್ಯಕ್ತವಾಯಿತು. ಅಲ್ಲದೆ, ತ್ರಿಶಾರನ್ನು ಬಂಧಿಸುವಂತೆ ಒತ್ತಾಯಗಳು ಕೂಡ ಕೇಳಿಬಂತು.
ತ್ರಿಶಾ ರೀತಿಯಲ್ಲಿ ಕೇರಳದ ಕಿರುತೆರೆ ನಟಿ ನಿಮಿಷಾ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪವನ್ನು ಎದುರಿಸುತ್ತಿದ್ದಾರೆ. ದೇವಸ್ಥಾನಕ್ಕೆ ಸಂಬಂಧಿಸಿದ ಪವಿತ್ರ ದೋಣಿಯೊಂದರ ಒಳಗೆ ಕಾಲಿಗೆ ಚಪ್ಪಲಿ ಹಾಕಿಕೊಂಡು ಇಳಿದಿದ್ದು ಕೇರಳದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಅನೇಕರು ನಟಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ಅಲ್ಲದೆ, ನಟಿಗೆ ಫೋನ್​ ಮತ್ತು ಜಾಲತಾಣ ಮೂಲಕ ಬೆದರಿಕೆ ಕರೆಗಳು ಕೂಡ ಬರುತ್ತಿವೆ.

A post shared by Nimisha Bijo (@nimisha.bijo_official_)

ಬೋಟ್​ನಲ್ಲಿ ಕುಳಿತಿದ್ದ ಫೋಟೋಗಳನ್ನು ನಿಮಿಷಾ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಅಪ್​ಲೋಡ್​ ಮಾಡಿಕೊಂಡಿದ್ದರು. ಜಾಲತಾಣದಲ್ಲಿ ತೀವ್ರ ಟೀಕೆ ವ್ಯಕ್ತವಾಗುತ್ತಿದ್ದಂತೆ ಅದನ್ನು ತೆಗೆದುಹಾಕಿದ್ದಾರೆ. ವಿಧ್ಯುಕ್ತ ಹಾವಿನ ದೋಣಿಯ ಮೇಲೆ ಗೊತ್ತಿಲ್ಲದೇ ನಿಂತುಬಿಟ್ಟೆ. ಕ್ಷಮಿಸಿ, ಫೋಟೋಗಳನ್ನು ಡಿಲೀಟ್​ ಮಾಡಿದ್ದೇನೆ. ಫೋಟೋ ಅಪ್​ಲೋಡ್​ ಮಾಡಿದಾಗಿನಿಂದ ಅನೇಕ ಬೆದರಿಕೆ ಕರೆಗಳು ಬರುತ್ತಿವೆ ಎಂದು ನಿಮಿಷಾ ಹೇಳಿಕೊಂಡಿದ್ದಾರೆ.

A post shared by Nimisha Bijo (@nimisha.bijo_official_)

ಬೆದರಿಕೆ ಹಾಕುತ್ತಿರುವವರು ನನ್ನ ಕುಟುಂಬದ ಸದಸ್ಯರನ್ನು ಸಹ ಉಳಿಸುವುದಿಲ್ಲ ಎನ್ನುತ್ತಿದ್ದಾರೆ. ದೇವಾಲಯದ ವ್ಯವಸ್ಥಾಪಕರಾಗಲಿ ಅಥವಾ ಸ್ಥಳೀಯರಾಗಲಿ ನನಗೆ ಮೊದಲೇ ಎಚ್ಚರಿಕೆ ನೀಡಿದ್ದಲ್ಲಿ ನಾನು ದೋಣಿಯೊಳಗೆ ಕಾಲಿಡುತ್ತಿರಲಿಲ್ಲ ಎಂದು ನಟಿ ಹೇಳಿದ್ದಾರೆ. ಈ ವಿಚಾರ ವಿವಾದವಾಗುತ್ತಿದ್ದಂರೆ ತಿರುವಲ್ಲ ಪೊಲೀಸ್​ ಠಾಣೆಯಲ್ಲಿ ನಿಮಿಷಾ ವಿರುದ್ಧ ದೂರು ದಾಖಲಾಗಿದೆ. ಪುಥುಕುಲಂಗರ ಪಲ್ಲಿಯೋದ ಸೇವಾ ಸಮಿತಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.(ಏಜೆನ್ಸೀಸ್​)
ಶೂಟಿಂಗ್​ ವೇಳೆ ತ್ರಿಶಾ ಕೃಷ್ಣನ್​ ಎಡವಟ್ಟು! ಸೌತ್​ ಬ್ಯೂಟಿಗೆ ಎದುರಾಗಿದೆ ಬಂಧನದ ಭೀತಿ..!

ಲ್ಯಾಗ್​ ಮಂಜು-ದಿವ್ಯಾ ಸುರೇಶ್​ ಬಗ್ಗೆ ಹರಿದಾಡ್ತಿರೋ ಸುದ್ದಿ ನಿಜನಾ? ಹೌದು ಅನ್ನುವಂತಿದೆ ಈ ವೈರಲ್​ ಫೋಟೋ!

ರಾಮ್ ಚರಣ್​ ಬೇಡ ಅಂದಿದ್ರೂ ಸಮಂತಾ ಲಿಪ್​ಲಾಕ್: ರಂಗಸ್ಥಳಂ ಚಿತ್ರದ ಹಿಂದಿನ ಸೀಕ್ರೆಟ್​ ಬಿಚ್ಚಿಟ್ಟ ನಿರ್ದೇಶಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
