ತಿರುವನಂತಪುರ:ಮಾಡಿದ ತಪ್ಪಿಗೆ ಶಿಕ್ಷೆ ತಪ್ಪಿದ್ದಲ್ಲ. ಅವರವರ ಕರ್ಮ ಫಲವನ್ನು ಅವರೇ ಅನುಭವಿಸಬೇಕು. ಕೆಲವರಿಗೆ ಕರ್ಮಫಲ ತಡವಾಗಿ ಸಿಗಬಹುದು. ಇನ್ನು ಕೆಲವರಿಗೆ ತಕ್ಷಣವೇ ಅವರ ಕರ್ಮಫಲ ದೊರೆಯುತ್ತದೆ ಎಂಬ ಹಿರಿಯರ ಮಾತಿಗೆ ಪುಷ್ಠಿ ನೀಡುವಂತಹ ಘಟನೆಯೊಂದು ಇದೀಗ ಕೇರಳದಲ್ಲಿ ನಡೆದಿದೆ.
ಮಹಿಳೆಯೊಬ್ಬರ ಚಿನ್ನದ ಸರವನ್ನು ಕಸಿದು ಪರಾರಿಯಾಗುತ್ತಿದ್ದ ಗುಂಪಿನ ಇಬ್ಬರು ಸದಸ್ಯರಲ್ಲಿ ಒಬ್ಬರು ಬೈಕ್​ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಕೇರಳದ ರಾಜಧಾನಿ ತಿರುವನಂತಪುರದ ನರುವಮೂಡು ಏರಿಯಾದಲ್ಲಿ ನಡೆದಿದೆ.
ಸರಗಳ್ಳರಾದ ಸಾಜದ್​ ಮತ್ತು ಅಮಲ್​ ಮಹಿಳೆಯ ಚಿನ್ನದ ಸರವನ್ನು ಕದ್ದು ಬೈಕ್​ನಲ್ಲಿ ಪರಾರಿಯಾಗುವ ವೇಳೆ ಅಪಘಾತ ಸಂಭವಿಸಿದ್ದು, ಸಾಜದ್​ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಅಮಲ್​, ತಿರುವನಂತಪುರದ ಮೆಡಿಕಲ್​ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆ ಭಾನುವಾರ (ಮೇ 8) ಬೆಳಗ್ಗೆ 6 ಗಂಟೆಗೆ ನಡೆದಿದೆ. ಮೃತ ಸಾಜದ್​ ತಿರುವನಂತಪುರದ ಕಡಿನಮಕುಲಂ ಮೂಲದವ. ಈತನ ವಿರುದ್ಧ ಕರ್ನಾಟಕದ ಮಂಗಳೂರು ಪೊಲೀಸ್​ ಠಾಣೆಯಲ್ಲೂ ಪ್ರಕರಣಗಳಿವೆ. ಅಮಲ್​ ಕೊಟ್ಟಾಯಂ ಮೂಲದವನು. ಸರಗಳ್ಳತನ ಮಾಡಿಕೊಂಡು ಪಲ್ಲಿಚಲದ ಪರೂರ್ಕುಜಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವಾಗ ಬೈಕ್​ ನಿಯಂತ್ರಣ ಕಳೆದುಕೊಂಡು ಡಿವೈಡರ್​ಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.
ಸಾಜದ್​ ಮತ್ತು ಅಮಲ್​ ನಂಬರ್ ಪ್ಲೇಟ್ ಇಲ್ಲದ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರು. ಕೊಂಡಿ ಇಲ್ಲದ ಚಿನ್ನದ ಸರ ಘಟನಾ ಸ್ಥಳದಲ್ಲಿ ಪತ್ತೆಯಾಗುವುದರೊಂದಿಗೆ ಇಬ್ಬರ ಸರಗಳ್ಳತನದ ರಹಸ್ಯ ಬಯಲಾಗಿದೆ. ಅಪಘಾತಕ್ಕೀಡಾದ ಇಬ್ಬರು ಥಕ್ಕಳದಲ್ಲಿ ಮಹಿಳೆಯೊಬ್ಬರ 11. 5 ಪವನ್ ಚಿನ್ನದ ಸರ ದೋಚಿರುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.
ಚಿಕಿತ್ಸೆ ಪಡೆಯುತ್ತಿರುವ ಅಮಲ್ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)
ರಸ್ತೆ ಗುಂಡಿ, ಅವೈಜ್ಞಾನಿಕ ಹಂಪ್​ನಿಂದಾಗಿ ಅಪಘಾತ: ಸಿಲ್ಲಿ ಲಲ್ಲಿ ಖ್ಯಾತಿಯ ನಟಿ ಸುನೇತ್ರಾ ಪಂಡಿತ್​ಗೆ ಗಾಯ

ಒಟ್ಟಿಗೆ ಬಾಳಲು ಬಿಡ್ತಿಲ್ಲ ನಮಗೆ ರಕ್ಷಣೆ ಕೊಡಿ… ಎಸ್ಪಿ ಮುಂದೆ ಕಣ್ಣೀರಿಟ್ಟ ಯುವತಿಯರು!

ಅತ್ಯಾಚಾರದ ಬೆದರಿಕೆ ಹಾಕಿದ್ದವನನ್ನು ಹುಡುಕಿಕೊಡಿ ಎಂದು ಪೊಲೀಸರ ಮೊರೆ ಹೋದ ನಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
