ಲಖನೌ:ಉತ್ತರ ಪ್ರದೇಶ ಚುನಾವಣೆಯ ಮತಎಣಿಕೆಯ ಸದ್ಯದ ಟ್ರೆಂಡ್​ ಪ್ರಕಾರ ಬಿಜೆಪಿ ಮ್ಯಾಜಿಕ್ ನಂಬರ್​ ದಾಟಿ ಭರ್ಜರಿ ಮುನ್ನಡೆ ಸಾಧಿಸಿದ್ದು, ಆರಂಭಿಕ ಟ್ರೆಂಡ್​ ಅಧಿಕೃತವಲ್ಲ ಎಂದು ಸಮಾಜವಾಗಿ ಪಕ್ಷ ತಿಳಿಸಿದೆ.
ಮತಎಣಿಕೆ ಮುಗಿಯುವವರೆಗೂ ಸ್ಥಳೀಯ ಚುನಾವಣಾ ಕಚೇರಿಯಲ್ಲೇ ಉಳಿಯುವಂತೆ ಪಕ್ಷದ ಕಾರ್ಯಕರ್ತರಿಗೆ ಸಂದೇಶ ರವಾನಿಸಿದ್ದಾರೆ. ಬಿಜೆಪಿ ಗೆದ್ದಿದೆ ಎಂದು ಬಿಂಬಿಸಲು ಆರಂಭಿಕ ಟ್ರೆಂಡ್​ ಅನ್ನು ಸೃಷ್ಟಿ ಮಾಡಲಾಗಿದೆ. ಆರಂಭಿಕ ಟ್ರೆಂಡ್​ ಅಧಿಕೃತವಲ್ಲ. ಕಾರ್ಯಕರ್ತರ ಉತ್ಸಾಹವನ್ನು ತಗ್ಗಿಸಿ 3 ಗಂಟೆಯ ಬಳಿಕ ಫಲಿತಾಂಶವನ್ನು ತಿರುಚಲು ಬಹುದು. ಹೀಗಾಗಿ ಚುನಾವಣಾ ಕಚೇರಿಯಲ್ಲೇ ಕೊನೆಯವರೆಗೂ ಉಳಿಯಿರಿ ಎಂದು ಕಾರ್ಯಕರ್ತರಿಗೆ ಸಮಾಜವಾದಿ ಪಕ್ಷ ಹೇಳಿದೆ.
ಉತ್ತರ ಪ್ರದೇಶದ 403 ವಿಧಾನಸಭಾ ಸ್ಥಾನಗಳನ್ನು ಹೊಂದಿದ್ದು, ಅಧಿಕಾರದ ಗದ್ದುಗೆ ಏರಲು ಮ್ಯಾಜಿಕ್​ ನಂಬರ್​ 202ರ ಅವಶ್ಯಕತೆ ಇದೆ. ಈಗಾಗಲೇ ಬಿಜೆಪಿ ಮ್ಯಾಜಿಕ್​ ನಂಬರ್​ ಅನ್ನು ದಾಟಿ 262 ಸ್ಥಾನಗಳೊಂದಿಗೆ ಮುನ್ನುಗುತ್ತಿದೆ. ಈ ಮೂಲಕ ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್​ ನೇತೃತ್ವದ ಸರ್ಕಾರ ಮತ್ತೊಮ್ಮೆ ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದೆ.(ಏಜೆನ್ಸೀಸ್​)
ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ..
ಯಾರಿಗೆ ಪಂಚರಾಜ್ಯ?; ತಜ್ಞರ ವಿಶ್ಲೇಷಣೆ ಒಳಗೊಂಡ ಫಲಿತಾಂಶದ ಕ್ಷಣ ಕ್ಷಣ ಮಾಹಿತಿಯ ನೇರಪ್ರಸಾರ ಇಲ್ಲಿದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
