ಲಖನೌ:ಉತ್ತರ ಪ್ರದೇಶದ ಹಮೀರ್​ಪುರ್​ನಲ್ಲಿರುವ ಗುಟ್ಕಾ ವ್ಯಾಪಾರಿ ಮನೆಯ ಮೇಲೆ ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಸಿಜಿಎಸ್​ಟಿ) ಅಧಿಕಾರಿಗಳು ದಾಳಿ ಮಾಡಿದ್ದು, ಈ ವೇಳೆ ಬೆಡ್​ ಅಡಿಯಲ್ಲಿ 6 ಕೋಟಿ 31 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ.
ಏಪ್ರಿಲ್​ 12ರ ಮಂಗಳವಾರ ಈ ದಾಳಿ ನಡೆದಿದ್ದು, 6.31 ಕೋಟಿ ರೂಪಾಯಿ ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಡ್​ ಅಡಿಯಲ್ಲಿ ರಾಶಿ ರಾಶಿ ಹಣ ಪತ್ತೆಯಾದ ಬಳಿಕ ಅಧಿಕಾರಿಗಳ ನೋಟು ಎಣಿಸುವ ಯಂತ್ರಗಳನ್ನು ತರಿಸಿದರು. ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದ ಉದ್ಯೋಗಿಗಳು ಮೂರು ಯಂತ್ರಗಳನ್ನು ತಂದರು. ಸುಮಾರು 18 ಗಂಟೆಗಳ ಕಾಲ ನೋಟು ಎಣಿಸಿ, ಟ್ರಂಕ್​ನಲ್ಲಿ ತುಂಬಿದರು. ಈ ಘಟನೆಯ ಬಗ್ಗೆ ದಾಳಿ ನಡೆಸಿದ ಅಧಿಕಾರಿಗಳ ತಂಡದ ಜತೆಗಿದ್ದ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಲು ನಿರಾಕರಿಸಿದರು. ಜಂಟಿ ಆಯುಕ್ತರು ಸರ್ಚ್ ವಾರೆಂಟ್ ಹೊರಡಿಸಿದ್ದು, ಅದರ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಒಟ್ಟು 15 ಸದಸ್ಯರ ತಂಡವು ಸುಮೇರ್‌ಪುರ ನಗರದ ಪೊಲೀಸ್ ಠಾಣೆ ಬಳಿಯ ಗುಟ್ಕಾ ವ್ಯಾಪಾರಿ ಜಗತ್ ಗುಪ್ತಾ ಅವರ ಮನೆಯ ಮೇಲೆ ದಾಳಿ ನಡೆಸಿತು. ಏಪ್ರಿಲ್ 12 ರಂದು ಬೆಳಗ್ಗೆ 6 ಗಂಟೆಗೆ ಪ್ರಾರಂಭವಾದ ಶೋಧ ಕಾರ್ಯಾಚರಣೆ ಏಪ್ರಿಲ್ 13ರ ಸಂಜೆಯವರೆಗೆ ಮುಂದುವರೆಯಿತು. ರಾತ್ರಿಯ ವೇಳೆಗೆ, ಬ್ಯಾಂಕ್ ಉದ್ಯೋಗಿಗಳು ಹಣವನ್ನು ಇರಿಸಿಕೊಳ್ಳಲು ಒಂದ ದೊಡ್ಡ ಟ್ರಂಕ್‌ಗಳೊಂದಿಗೆ ಗುಪ್ತಾ ಮನೆಯನ್ನು ತಲುಪಿದರು.
ದಾಳಿ ವೇಳೆ ವಶಕ್ಕೆ ಪಡೆದ ಹಣವನ್ನ ಸ್ಟೇಟ್ ಬ್ಯಾಂಕ್ ಆಫ್​ ಇಂಡಿಯಾದ ಹಮೀರ್‌ಪುರ ಶಾಖೆಗೆ ಕಳುಹಿಸಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ಹಣದ ಮೂಲದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​)
UP : हमीरपुर में तंबाकू करोबारी के घर पर GST टीम के छापे में 6 करोड़ 31 लाख 11 हजार 800 रुपए की रकम बरामदpic.twitter.com/fWHhG26AsT
— News24 (@news24tvchannel)April 15, 2022

ಕೆಜಿಎಫ್​-2 ಮಾಡಿದ ನಿಮ್ಗೆ ನಾಚಿಕೆಯಾಗ್ಬೇಕು, ಟಾಪ್ ಕ್ಲಾಸ್ ಲದ್ದಿ ಚಿತ್ರ, 3 ಗಂಟೆಯ ಟಾರ್ಚರ್​ ಎಂದ ವಿಮರ್ಶಕ

ಪಂಜಾಬ್​ ಜನತೆಗೆ ಬಂಪರ್​ ಆಫರ್​: ಜುಲೈ 1ರಿಂದ ಪ್ರತಿ ಮನೆಗೆ 300 ಯೂನಿಟ್​ ಉಚಿತ ವಿದ್ಯುತ್​

ಬಿಜೆಪಿ ಸ್ವಚ್ಛತಾ ಅಭಿಯಾನ: ಈಶ್ವರಪ್ಪ ರಾಜೀನಾಮೆ ಬಳಿಕ ಸಮಗ್ರ ಶುದ್ಧಿಗೆ ವರಿಷ್ಠರ ಚಿಂತನೆ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
