ಮುಜಾಫರ್​ನಗರ:ಉತ್ತರ ಪ್ರದೇಶದ ಎರಡು ಪ್ರತ್ಯೇಕ ಪ್ರದೇಶಗಳಲ್ಲಿರುವ ಗಂಗಾ ನದಿಯ ಕಾಲುವೆಯಿಂದ ಹೊರತೆಗೆಯಲಾದ 2 ಕಾರುಗಳಲ್ಲಿ ಎರಡು ಮೃತಹೇಹಗಳು ಕೊಳೆತ ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿವೆ.
ಎರಡು ದೇಹಗಳು ಕಾರಿನ ಒಳಗೆ ಪತ್ತೆಯಾಗಿವೆ. ಕಾಲುವೆಯಲ್ಲಿನ ನೀರಿನ ಮಟ್ಟ ಕಡಿಮೆಯಾಗಿ ಕಾರುಗಳ ಮೇಲ್ಮೈ ಗೋಚರವಾಗುತ್ತಿದ್ದಂತೆ ಎರಡು ಕಾರುಗಳನ್ನು ಮೇಲಕ್ಕೆತ್ತಿ ಪರಿಶೀಲನೆ ನಡೆಸಿದಾಗ ಮೃತದೇಹಗಳು ಪತ್ತೆಯಾಗಿವೆ. ಮೃತರ ಗುರುತು ಸಹ ಪತ್ತೆಯಾಗಿದ್ದು, ತನಿಖೆ ಆರಂಭವಾಗಿದೆ.
ಮೃತ ಇಬ್ಬರಲ್ಲಿ ಓರ್ವ ದಿಲ್ಶಾದ್​ ಅನ್ಸಾರಿ (27). ಅನ್ಸಾರಿ ದೇಹ ಕಾರಿನ ಹಿಂಬದಿಯ ಸೀಟಿನಲ್ಲಿ ಪತ್ತೆಯಾಗಿದೆ. ಈತ ಮುಜಾಫರ್​ನಗರದ ಭಗ್ರಾ ಏರಿಯಾ ನಿವಾಸಿ. ಈ ವರ್ಷದ ಆರಂಭದಿಂದಲೂ ಅನ್ಸಾರಿ ನಾಪತ್ತೆಯಾಗಿದ್ದ. ಎಲ್ಲಿಗೂ ತೆರಳಬೇಕೆಂದು ಹೇಳಿ ಸ್ನೇಹಿತನ ಕಾರು ತೆಗೆದುಕೊಂಡು ಹೋಗಿದ್ದ ಅನ್ಸಾರಿ ಮರಳಿ ಬಂದಿರಲಿಲ್ಲ. ಈ ಸಂಬಂಧ ಅನ್ಸಾರಿ ಸಹೋದರ ವಾಜಿದ್​ ಅನ್ಸಾರಿ ನ್ಯೂ ಮಂಡಿ ಪೊಲೀಸ್​ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಮತ್ತೊಂದು ಕಾರಿನಲ್ಲಿ ಪತ್ತೆಯಾದ ಮೃತದೇಹವನ್ನು ಹರೇಂದ್ರ ದತ್​ ಅಟ್ರೆ ಎಂದು ಗುರುತಿಸಲಾಗಿದೆ. ಇವರ ಮೃತದೇಹ ಅನ್ಸಾರಿ ಮೃತದೇಹ ಪತ್ತೆಯಾದ 55 ಕಿ.ಮೀ ದೂರದಲ್ಲಿ ಪತ್ತೆಯಾಗಿದೆ. ಕಳೆದ ಫೆಬ್ರವರಿಯಿಂದ ಅಟ್ರೆ ನಾಪತ್ತೆಯಾಗಿದ್ದರು. ಕೆಲಸದ ನಿಮಿತ್ತ ಮೀರಾಪುರ್​ಗೆ ತೆರಳಬೇಕೆಂದು ಹೇಳಿ ಬೆಳಗ್ಗೆ 7 ಗಂಟೆಗೆ ಮನೆ ಬಿಟ್ಟು ಹೋಗಿದ್ದ ಅಟ್ರೆ ಮರಳಿ ಬಂದಿರಲಿಲ್ಲ. ಕುಟುಂಬದಿಂದ ಕೊಟ್ವಾಲಿಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಇಬ್ಬರ ಮೃತದೇಹವನ್ನು ಕುಟುಂಬಸ್ಥರು ಗುರುತಿಸಿದ್ದಾರೆ. ಘಟನೆ ನಡೆದ ಅನೇಕ ತಿಂಗಳ ಬಳಿಕ ಇಬ್ಬರ ಮೃತದೇಹ ಸಿಕ್ಕಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇದು ಹೇಗೆ ಸಂಭವಿಸಿದೆ ಮತ್ತು ಇದರ ಹಿಂದೆ ಬೇರೆ ಏನಾದರೂ ಕೈವಾಡ ಇದೆಯೇ ಎಂಬ ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್​)
… and this is car no 2 . The police says both bodies have been identified and in both cases missing person complaints had been filed …pic.twitter.com/UwdhmsFrrS
— Alok Pandey (@alok_pandey)June 23, 2021

ನೀರಿನಲ್ಲಿ ತೇಲುತ್ತಿತ್ತು ಮಹಿಳೆಯ ದೇಹ; ರಕ್ಷಿಸಲು ಹೋದವರಿಗೆ ಕಾದಿತ್ತು ಬಿಗ್ ಶಾಕ್!

ಬಿಗ್​ಬಾಸ್​ ಮನೆ ಒಳಗೆ ಬರ್ತಿದ್ದಂತೆ ಫೈಟ್ ಶುರು ಮಾಡಿದ ದಿವ್ಯಾ ಉರುಡುಗ ಹಾಗೂ ದಿವ್ಯಾ ಸುರೇಶ್!

ವರ್ಜಿನಿಟಿ ಕಳೆದುಕೊಳ್ಳಲು ಸರಿಯಾದ ವಯಸ್ಸು ಯಾವುದು? ಅಮ್ಮನಿಗೇ ಪ್ರಶ್ನಿಸಿದ ಆಲಿಯಾ ಕಶ್ಯಪ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
