ಲಖನೌ:ಕನ್ನಡಕ ಇಲ್ಲದೆ ನ್ಯೂಸ್​ಪೇಪರ್​ ಓದಲು ವರನೊಬ್ಬ ತಡಬಡಿಸಿದಕ್ಕೆ ವಧು, ಮದುವೆ ಮುರಿದುಕೊಂಡಿರುವ ಅಪರೂಪದ ಪ್ರಕರಣ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಕೇವಲ ಮದುವೆ ಮಾತ್ರ ರದ್ದುಗೊಂಡಿಲ್ಲ. ಬದಲಾಗಿ ವರ ಮತ್ತು ಆತನ ಕುಟುಂಬದ ವಿರುದ್ಧ ದೂರು ಕೂಡ ದಾಖಲಿಸಲಾಗಿದೆ.
ವಿವರಣೆಗೆ ಬರುವುದಾದರೆ, ಉತ್ತರ ಪ್ರದೇಶದ ಸರ್ದಾರ್​ ಕೊಟ್ವಾಲಿ ಪಟ್ಟಣದ ಜಮಲ್ಪುರ್​ ಗ್ರಾಮದ ಅರ್ಚನಾಗು ಮತ್ತು ಬನ್ಸಿ ಗ್ರಾಮದ ನಿವಾಸಿ ಶಿವಂಗು ಮದುವೆ ನಿಶ್ಚಯವಾಗಿತ್ತು. ಮದುವೆಯ ದಿನದವರೆಗೂ ವರನಿಗೆ ದೃಷ್ಟಿದೋಷ ಇದೆ ಎಂಬುದು ವಧುವಿನ ಕುಟುಂಬಕ್ಕೆ ತಿಳಿದಿರಲಿಲ್ಲ.
ಆದರೆ, ಮದುವೆ ದಿನ ವರ ಕನ್ನಡಕ ಹಾಕಿರುವುದನ್ನು ನೋಡಿ ವಧು ಮತ್ತು ಆಕೆಯ ಕುಟುಂಬಕ್ಕೆ ಅನುಮಾನ ಮೂಡಿದೆ. ತಾಳಿ ಕಟ್ಟುವ ಮುನ್ನ ಸಮಸ್ಯೆ ಬಗೆಹರಿಸಿಕೊಳ್ಳಲು ಮುಂದಾದ ವಧು, ಕನ್ನಡಕ ಇಲ್ಲದೆ ನ್ಯೂಸ್​ಪೇಪರ್​ ಓದುವಂತೆ ಹೇಳಿದ್ದಾಳೆ. ಆದರೆ, ಕನ್ನಡಕ ಇಲ್ಲದೇ ವರನಿಗೆ ಏನೂ ಕಾಣುವುದಿಲ್ಲ. ಹೀಗಾಗಿ ವಧುವಿನ ಪರೀಕ್ಷೆಯಲ್ಲಿ ಆತ ವಿಫಲವಾಗುತ್ತಾನೆ. ಕೊನೆಗೂ ವಧುವಿನ ಕುಟುಂಬ ಒಂದು ನಿರ್ಧಾರಕ್ಕೆ ಬಂದು ಮದುವೆಯನ್ನು ಮುರಿದುಕೊಳ್ಳುತ್ತಾರೆ.
ವಧುವಿನ ತಂದೆ ಅರ್ಜುನ್ ಸಿಂಗ್ ಮಾತನಾಡಿ, ವರನ ದೃಷ್ಟಿ ತುಂಬಾ ದುರ್ಬಲವಾಗಿದೆ ಎಂದು ನನಗೆ ತಿಳಿದಿರಲಿಲ್ಲ. ನನ್ನ ಮಗಳು, ಸತ್ಯವನ್ನು ತಿಳಿದ ನಂತರ ಮದುವೆಯನ್ನು ರದ್ದುಗೊಳಿಸಲು ನಿರ್ಧರಿಸಿದಳು ಎಂದು ಹೇಳಿದರು.
ವರನ ಕುಟುಂಬಕ್ಕೆ ವರದಕ್ಷಿಣೆ ರೂಪದಲ್ಲಿ ನೀಡಲಾದ ಮೋಟರ್​ಬೈಕ್​ ಅನ್ನು ಹಿಂದಿರುಗಿಸಬೇಕೆಂದು ವಧುವಿನ ಕುಟುಂಬವು ಒತ್ತಾಯಿಸಿತು. ವರನ ಕುಟುಂಬವು ಬೇಡಿಕೆಯನ್ನು ನಿರಾಕರಿಸಿದಾಗ ವಧುವಿನ ಕುಟುಂಬ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದೆ. (ಏಜೆನ್ಸೀಸ್​)
ಕರೊನಾಗೆ ಆಯುರ್ವೇದ ಔಷಧ ಪ್ರಯೋಗ ಏಕಿಲ್ಲ?: ಹಲೋ ಡಾಕ್ಟರ್​

ಟೋಕಿಯೊ ಒಲಿಂಪಿಕ್ಸ್‌ಗೂ ಮುನ್ನವೇ ಭಾರತದ ಕುಸ್ತಿಪಟುಗೆ ಶಾಕ್…

ಜಗಳ ಮುಗಿದಿದ್ದರೆ ಒಟ್ಟಾಗಿ ಹೋರಾಡೋಣವೇ? ಪ್ರಶ್ನೆ ಕೇಳಿದ ಅರವಿಂದ್ ಕೇಜ್ರಿವಾಲ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 14 =
Remember me
