ನವದೆಹಲಿ:ನೂತನ ಉಪ ರಾಷ್ಟ್ರಪತಿ ಆಯ್ಕೆಗೆ ನಡೆಯುತ್ತಿರುವ ಚುನಾವಣೆಯ ಮತದಾನ ಇಂದು ಬೆಳಗ್ಗೆ 10 ಗಂಟೆಗೆ ಸಂಸತ್ತಿನಲ್ಲಿ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮತವನ್ನು ಚಲಾಯಿಸಿದರು.
–BJP KARNATAKA (@BJP4Karnataka)6 Aug 2022

ಸಂಸತ್ತಿನ ಉಭಯ ಸದನಗಳ ಸದಸ್ಯರು ಮತದಾನ ಮಾಡುತ್ತಿದ್ದಾರೆ. ಎನ್​ಡಿಎ ಕೂಟದ ಅಭ್ಯರ್ಥಿ ಜಗದೀಪ್ ಧನಕರ್ ಮತ್ತು ಪ್ರತಿಪಕ್ಷಗಳ ಜಂಟಿ ಅಭ್ಯರ್ಥಿ ಮಾರ್ಗರೆಟ್ ಆಳ್ವಾ ಕಣದಲ್ಲಿದ್ದಾರೆ. ಮತದಾರರ ಬಲಾಬಲ ಎನ್​ಡಿಎ ಪರವಾಗಿ ಇರುವುದರಿಂದ ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಧನಕರ್ ಸುಲಭವಾಗಿ ಜಯಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
Delhi | Prime Minister Narendra Modi casts his vote for the Vice Presidential election, at the Parliament.pic.twitter.com/X8kFU79I1f
— ANI (@ANI)August 6, 2022

ಆಳ್ವಾರನ್ನು ಆಯ್ಕೆ ಮಾಡುವಾಗ ಸಮಾಲೋಚನೆ ನಡೆಸಲಿಲ್ಲವೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಆರೋಪಿಸಿರುವುದರಿಂದ ಪ್ರತಿಪಕ್ಷಗಳಲ್ಲಿ ಬಿರುಕು ಉಂಟಾದಂತೆ ಕಾಣಿಸುತ್ತಿದೆ. ಕಾಂಗ್ರೆಸ್​ನ ಹಿರಿಯ ನಾಯಕಿಯಾಗಿದ್ದ 80 ವರ್ಷದ ಆಳ್ವಾ, ರಾಜಸ್ಥಾನ ಮತ್ತು ಉತ್ತರಾಖಂಡದ ರಾಜ್ಯಪಾಲರಾಗಿದ್ದ ಅನುಭವಿಯಾಗಿದ್ದಾರೆ. 71 ವರ್ಷದ ಧನಕರ್ ರಾಜಸ್ಥಾನದ ಜಾಟ್ ನಾಯಕರಾಗಿದ್ದು ಸಮಾಜವಾದಿ ಹಿನ್ನೆಲೆ ಹೊಂದಿದ್ದಾರೆ. ಆಮ್ ಆದ್ಮಿ ಪಕ್ಷ (ಆಪ್) ಹಾಗೂ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಬೆಂಬಲ ಸಾರಿದ ಎರಡು ದಿನಗಳ ನಂತರ, ಶುಕ್ರವಾರ ಇನ್ನೊಂದು ಪ್ರಾದೇಶಿಕ ಪಕ್ಷ ತೆಲಂಗಾಣ ರಾಷ್ಟ್ರ ಸಮಿತಿ ವಿಪಕ್ಷ ಹುರಿಯಾಳು ಆಳ್ವಾರಿಗೆ ಬೆಂಬಲ ಘೋಷಿಸಿದೆ. ಎಐಎಂಐಎಂ ಕೂಡ ಬೆಂಬಲಿಸಿದೆ.
ಜೆಡಿಯು, ವೈಎಸ್​ಆರ್​ಸಿಪಿ, ಬಿಎಸ್​ಪಿ, ಎಐಎಡಿಎಂಕೆ ಮತ್ತು ಶಿವಸೇನಾದಂಥ ಕೆಲವು ಪ್ರಾದೇಶಿಕ ಪಕ್ಷಗಳ ಬೆಂಬಲವನ್ನೂ ಗಳಿಸಿರುವ ಎನ್​ಡಿಎ ಉಮೇದುವಾರ ಧನಕರ್ ಸರಾಗ ವಿಜಯಕ್ಕೆ ಅಗತ್ಯವಾದ 515 ಮತಗಳನ್ನು ಪಡೆಯುವ ಸಾಧ್ಯತೆಯಿದೆ. ಆಳ್ವಾರಿಗೆ 200ಕ್ಕೂ ಅಧಿಕ ಮತಗಳು ಲಭಿಸುವ ಸಾಧ್ಯತೆ ಇದೆ. ಹಾಲಿ ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅಧಿಕಾರಾವಧಿ ಮುಗಿಯಲಿರುವ ಹಿನ್ನೆಲೆಯಲ್ಲಿ ಚುನಾವಣೆ ನಡೆಯುತ್ತಿದೆ.
ಸಿಎಂ ಬಸವರಾಜ ಬೊಮ್ಮಾಯಿಗೆ ಕರೊನಾ ಪಾಸಿಟಿವ್​: ಕೊನೇ ಕ್ಷಣದಲ್ಲಿ ದೆಹಲಿ ಪ್ರವಾಸ ರದ್ದು

VIDEO| ಪ್ರಧಾನಿ ಮೋದಿ, ಬಿಜೆಪಿ ಸರ್ಕಾರದ ಬಗ್ಗೆ ವ್ಯಂಗ್ಯವಾಡಿರುವ TRS ಪಕ್ಷದ ಈ ಸಾಂಗ್ ವೈರಲ್ ಆಗ್ತಿದೆ!

ಇಂದಿನಿಂದ ಬಿಗ್ ಬಾಸ್ ಓಟಿಟಿ; ವೂಟ್ ಸೆಲೆಕ್ಟ್​ನಲ್ಲಿ ರಾತ್ರಿ 7ಕ್ಕೆ ಗ್ರಾಂಡ್ ಪ್ರೀಮಿಯರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 10 =
Remember me
