ಜೈಸಲ್ಮೇರ್​:ನೋಡ ನೋಡುತ್ತಿದ್ದಂತೆ ಕಾಂಕ್ರಿಟ್​ ಚಪ್ಪಡಿ ಕುಸಿದು ಐವರು ಮಂದಿ ಚರಂಡಿ ಒಳಗೆ ಬಿದ್ದ ಭಯಾನಕ ಘಟನೆ ರಾಜಸ್ಥಾನದ ಜೈಸಲ್ಮೇರ್​ನಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ.
ಜೈಸಲ್ಮೇರ್​ನ ಬಾಬಾ ಬಾವ್ದಿ ಏರಿಯಾದ ರೈಲು ನಿಲ್ದಾಣದ ಸಮೀಪ ಇರುವ ಪಂಕ್ಚರ್​ ಶಾಪ್​ ಮುಂದೆ ಈ ಘಟನೆ ಸಂಭವಿಸಿದೆ. ಏಪ್ರಿಲ್​ 7 ರಂದು ರಾತ್ರಿ 9.30ರ ಸುಮಾರಿಗೆ ಈ ಘಟನೆ ನಡೆದಿದ್ದು ಸಿಸಿಟಿವಿಯಲ್ಲಿ ರೆಕಾರ್ಡ್​ ಆಗಿದೆ.
ವಿಡಿಯೋದಲ್ಲಿ ಏನಿದೆ?: ಪಂಕ್ಚರ್​ ಶಾಪ್​ ಮುಂದೆ ನಾಲ್ವರು ಮಾತನಾಡುತ್ತಾ ನಿಂತಿರುತ್ತಾರೆ. ಇನೊಬ್ಬ ಪಕ್ಕದಲ್ಲೇ ಮೋಟರ್​ಬೈಕ್​ ದುರಸ್ಥಿ ಮಾಡುತ್ತಿರುತ್ತಾನೆ. ಕಾಂಕ್ರಿಟ್​ನಿಂದ ಮುಚ್ಚಲಾದ ಚರಂಡಿಯ ಮೇಲೆ ಭಾರೀ ವಾಹನದ ಸಾಕಷ್ಟು ಟೈರ್​ಗಳನ್ನು ಇಟ್ಟಿರಲಾಗುತ್ತದೆ. ಈ ವೇಳೆ ನೋಡ ನೋಡುತ್ತಿದ್ದಂತೆ ಕಾಂಕ್ರಿಟ್​ ಚಪ್ಪಡಿ ಕುಸಿದು ಐದು ಮಂದಿಯು ಚರಂಡಿಯ ಒಳಗೆ ಬೀಳುತ್ತಾರೆ. ಅವರ ಮೇಲೆ ಮೋಟರ್​ ಬೈಕ್​ ಕೂಡ ಬೀಳುತ್ತದೆ.
ಐದು ಮಂದಿ ಚರಂಡಿ ಒಳಗೆ ಬೀಳುವುದನ್ನು ನೋಡಿ ಪಕ್ಕದಲ್ಲೇ ಇದ್ದ ಅನೇಕ ಸಹಾಯ ಮಾಡಲು ಧಾವಿಸಿ ಬರುತ್ತಾರೆ. ಅದೃಷ್ಟವಶಾತ್​ ಚರಂಡಿ ಒಣಗಿತ್ತು. ಹೀಗಾಗಿ ಸಣ್ಣಪುಟ್ಟ ಗಾಯಗಳೊಂದಿಗೆ ಬಚಾವ್​ ಆಗಿದ್ದಾರೆ. ಭಾರೀ ತೂಕದಿಂದ ಚಪ್ಪಡಿ ಕುಸಿದಿದೆ ಎಂದು ತಿಳಿದುಬಂದಿದೆ.
ಸಾಮಾನ್ಯವಾಗಿ ಜನರು ಅನೇಕ ನಗರಗಳಲ್ಲಿ ರಸ್ತೆಬದಿಯ ಪಾದಚಾರಿ ಮಾರ್ಗಗಳು ಮತ್ತು ಚರಂಡಿಗಳ ಮೇಲೆ ಪಂಕ್ಚರ್-ರಿಪೇರಿ ಅಂಗಡಿಗಳನ್ನು ಸ್ಥಾಪಿಸುತ್ತಾರೆ. ಚರಂಡಿ ಮೇಲಿನ ಚಪ್ಪಡಿಗಳಲ್ಲಿ ಕೆಲವು ಹಳೆಯದಾಗಿದ್ದು, ದುರಸ್ತಿಯ ಅಗತ್ಯವಿದೆ. ಇಲ್ಲವಾದಲ್ಲಿ ಇಂಥಹ ಘಟನೆಗಳು ಮರುಕಳಿಸುವ ಸಾಧ್ಯತೆ ಇರುತ್ತದೆ.(ಏಜೆನ್ಸೀಸ್​)
(ವಿಡಿಯೋ ಕೃಪೆ: ಮೋಜೋ ಸ್ಟೋರಿ)

RCB ಟ್ರೋಫಿ ಗೆಲ್ಲೋವರೆಗೂ ಮದ್ವೆಯಾಗಲ್ಲ ಎಂದ ಮಹಿಳಾ ಅಭಿಮಾನಿ: ಕ್ರಿಕೆಟಿಗ ಅಮಿತ್​ ಮಿಶ್ರಾ ಕಾಮೆಂಟ್​ ವೈರಲ್​

ಗುತ್ತಿಗೆದಾರ ಸಂತೋಷ್ ಮೃತದೇಹ ಹುಟ್ಟೂರು ತಲುಪುತ್ತಿದ್ದಂತೆ​ ಪೊಲೀಸರು ಮತ್ತು ಕುಟುಂಬಸ್ಥರ ಮಧ್ಯೆ ವಾಗ್ವಾದ

ಆಧಾರರಹಿತ ಆರೋಪ, ತೇಜೋವಧೆಗೆ ನಾವು ಹೆದರಲ್ಲ; ಸಚಿವ ಡಾ.ಕೆ. ಸುಧಾಕರ್ ಎಚ್ಚರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 17 =
Remember me
