ಪಟನಾ:ಭಾರತದ ಅನೇಕ ರಸ್ತೆಗಳು ಇಂದಿಗೂ ಡಾಂಬರೀಕರಣಗಿಂತ ಹೆಚ್ಚು ಗುಂಡಿಗಳನ್ನೇ ಹೊಂದಿವೆ. ಆದರೆ, ಕಣ್ಣಿಗೆ ಕಾಣುವಷ್ಟು ದೂರ, ರಾಷ್ಟ್ರೀಯ ಹೆದ್ದಾರಿಯ ಸಂಪೂರ್ಣ ಅಗಲವನ್ನೇ ಆವರಿಸಿರುವ ದೈತ್ಯ ಕುಳಿಗಳು ಇನ್ನು ಇವೆ ಅಂದರೆ, ಅದಕ್ಕಿಂತ ಅಚ್ಚರಿ ಬೇರೊಂದಿಲ್ಲ. ಇದಕ್ಕೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಸಿಕ್ಕಾಪಟ್ಟೆ ವೈರಲ್​ ಆಗಿವೆ.
ಹೌದು. ಬಿಹಾರದ ರಾಷ್ಟ್ರೀಯ ಹೆದ್ದಾರಿಯೊಂದರ ಪರಿಸ್ಥಿತಿ ವಾಹನ ಸವಾರರಿಗೆ ಎಚ್ಚರಿಕೆ ನೀಡುವಂತಿದೆ. ಬಿಹಾರದ ಮಧುಬಾನಿ ಬಳಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 227ರ ಪಕ್ಷಿನೋಟದ ವಿಡಿಯೋವನ್ನು ದೈನಿಕ್​ ಭಾಸ್ಕರ್​ ಪತ್ರಿಕೆಯ ಪ್ರವೀಣ್​ ಠಾಕೂರ್ ಎಂಬುವರು ಸರೆಹಿಡಿದಿದ್ದು, ಅದರ ಸ್ಥಿತಿಯನ್ನು ನೋಡಿದರೆ, ಇಂದಿಗೂ ಇಂತಹ ರಸ್ತೆ ಇದೆಯಾ ಎಂದು ನೀವು ನಂಬಲಾರಿರಿ. ಆದರೆ, ಇಂತಹ ರಸ್ತೆ ಇರುವುದು ಅಕ್ಷರಶಃ ಸತ್ಯವಾಗಿದೆ.
ತಕೇಶಿ ಕ್ಯಾಸ್ಟಲ್​​ ಹೆಸರಿನ ರೇಸ್​ ಗೇಮ್​ ಶೋನಲ್ಲಿ ಬರುವ ರಸ್ತೆಗಿಂತಲೂ ಹೀನಾಯಮಾನವಾಗಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಆಗಾಗ ಟೀಕಿಸುವ ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್, ಟ್ವಿಟರ್​ನಲ್ಲಿ ವಿಡಿಯೋ ಶೇರ್​ ಮಾಡಿಕೊಂಡು ನಿತೀಶ್​ ವಿರುದ್ಧ ಮತ್ತೆ ಟೀಕಾ ಪ್ರಹಾರ ನಡೆಸಿದ್ದಾರೆ.

ಬಿಹಾರದ ಮಧುಬನಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 227, 1990ರ ದಶಕದ ಜಂಗಲ್ ರಾಜ್‌ನಲ್ಲಿದ್ದ ಬಿಹಾರದ ರಸ್ತೆಗಳ ಸ್ಥಿತಿಯನ್ನು ನೆನಪಿಸುತ್ತದೆ. ಇತ್ತೀಚಿಗೆ ನಿತೀಶ್ ಕುಮಾರ್ ಅವರು ಕಾರ್ಯಕ್ರಮವೊಂದರಲ್ಲಿ ರಸ್ತೆ ನಿರ್ಮಾಣ ವಿಭಾಗದ ಅಧಿಕಾರಿಗಳೊಂದಿಗೆ ಬಿಹಾರದ ರಸ್ತೆಗಳ ಉತ್ತಮ ಸ್ಥಿತಿಯ ಬಗ್ಗೆ ಎಲ್ಲರಿಗೂ ತಿಳಿಸಬೇಕು ಎಂದು ಹೇಳಿದ್ದಾರೆ. ಆದರೆ, ಈ ರಸ್ತೆ ನೋಡಿದರೆ ಹೀಗಿದೆ ಎಂದು ಪ್ರಶಾಂತ್​ ಕಿಶೋರ್​ ಟೀಕಿಸಿದ್ದಾರೆ.
https://twitter.com/PrashantKishor/status/1538381463619518464?s=20&t=smQi2JQJUq_TYAfG_mBFVQ
ಈ ಹೆದ್ದಾರಿಯು 2015 ರಿಂದಲೂ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ. ದುರಸ್ತಿಗೆ ಇದುವರೆಗೆ ಮೂರು ಬಾರಿ ಟೆಂಡರ್‌ ಕರೆದರೂ ಕಾಮಗಾರಿಯನ್ನು ಅಪೂರ್ಣಗೊಳಿಸಿರುವ ಗುತ್ತಿಗೆದಾರರು ನಾಪತ್ತೆಯಾಗಿದ್ದಾರೆ.
ಎರಡು ವಾರಗಳ ಹಿಂದೆ ನಡೆದ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಮಾತನಾಡಿ, ಬಿಹಾರದ ರಸ್ತೆ ಮೂಲಸೌಕರ್ಯವು ಡಿಸೆಂಬರ್ 2024ರ ವೇಳೆಗೆ ಯುನೈಟೆಡ್ ಸ್ಟೇಟ್ಸ್‌ಗೆ ಸಮನಾಗಿರುತ್ತದೆ ಎಂದು ಹೇಳಿದ್ದರು. ಆದರೆ, ಸದ್ಯ ವೈರಲ್​ ಆಗಿರುವ ವಿಡಿಯೋದಲ್ಲಿ ಬಿಹಾರದ ರಸ್ತೆ ಸ್ಥಿತಿಯನ್ನು ನೋಡಿ ಜನರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.(ಏಜೆನ್ಸೀಸ್​)
ತಮ್ಮ ಮಗನ ಜತೆ ಹೋಲಿಸಿ ಶಾರುಖ್​ ಪುತ್ರನನ್ನು ಟ್ರೋಲ್ ಮಾಡುವವರಿಗೆ ನಟ ಮಾಧವನ್​ ಹೇಳಿದ್ದು ಹೀಗೆ…​

ಮದ್ವೆಯಾಗಿ ಇಬ್ಬರು ಮಕ್ಕಳಿದ್ರೂ 21 ವರ್ಷದ ಅರ್ಚಕನ ಜತೆ 35ರ ಮಹಿಳೆ ಪರಾರಿ! ಮಧ್ಯರಾತ್ರಿ ಕಾಡಲ್ಲಿ ಈಕೆ ಪಟ್ಟ ಪಾಡು ಅಷ್ಟಿಷ್ಟಲ್ಲ

PHOTOS| ಎಲ್ಲ ಓಕೆ ದೇವಸ್ಥಾನದಲ್ಲಿ ಇದೆಲ್ಲಾ ಯಾಕೆ? ದೀಪ್ತಿ ಸುನೈನಾ ಅವತಾರಕ್ಕೆ ನೆಟ್ಟಿಗರ ಆಕ್ರೋಶ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
