ನವದೆಹಲಿ:ದೇಶದ ಕೆಲವು ಜನರಿಗೆ ಈಗಲೂ ಹೆಲ್ಮೆಟ್ ಮಹತ್ವದ ಬಗ್ಗೆ ತಿಳಿದಿಲ್ಲ. ಪೊಲೀಸರ​ ದಂಡಾಸ್ತ್ರದಿಂದ ತಪ್ಪಿಸಿಕೊಳ್ಳಲು ಬಲವಂತವಾಗಿ ಹೆಲ್ಮೆಟ್​ ಧರಿಸುವವರು ಇದ್ದಾರೆ. ಇನ್ನು ಕೆಲವರು ಕೇಶ ಶೈಲಿ ಹಾಳಾಗುತ್ತದೆ ಅಂತಾ ಹೆಲ್ಮೆಟ್​ ನಿರ್ಲಕ್ಷ್ಯ ಮಾಡುವವರನ್ನು ನೋಡಿದ್ದೇವೆ. ಆದರೆ, ಹೆಲ್ಮೆಟ್​ ನಮ್ಮ ಜೀವ ಉಳಿಸುವ ಸಾಧನ ಎಂಬುದು ಇನ್ನು ಕೆಲವು ಮಂದಿಗೆ ತಿಳಿದೇ ಇಲ್ಲ. ಆದರೆ, ಈ ಪ್ರಸ್ತುತ ವೈರಲ್​ ಆಗಿರುವ ವಿಡಿಯೋ ನೋಡಿದರೆ, ಖಂಡಿತವಾಗಿಯೂ ಹೆಲ್ಮೆಟ್​ ಮಹತ್ವ ಏನೆಂಬುದನ್ನು ತಿಳಿದೇ ತಿಳಿಯುತ್ತದೆ.
ಹೌದು, ಹೆಲ್ಮೆಟ್​ ಧರಿಸಿದ್ದರಿಂದ ಬೈಕ್​ ಸವಾರನ ಪ್ರಾಣ ಒಂದೇ ಸಮಯದಲ್ಲಿ ಎರಡು ಬಾರಿ ಉಳಿದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಹೆಲ್ಮೆಟ್​ ಅಭಿಯಾನದ ಭಾಗವಾಗಿ ದೆಹಲಿ ಪೊಲೀಸರು ತಮ್ಮ ಟ್ವಿಟರ್​ನಲ್ಲಿ ಶೇರ್ ಮಾಡುವ ಮೂಲಕ ಹೆಲ್ಮೆಟ್​ ಮಹತ್ವವನ್ನು ಸಾರಿದ್ದಾರೆ. ಸದ್ಯ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗಿದೆ.
ವಿಡಿಯೋದಲ್ಲಿ ಏನಿದೆ?ವೇಗವಾಗಿ ಬರುವ ಬೈಕ್​ಗೆ ಕಾರೊಂದು ಅಡ್ಡಿಯಾದಾಗ ವಿಚಲಿತಗೊಂಡು ಬೈಕ್​ ನಿಯಂತ್ರಣ ಕಳೆದುಕೊಳ್ಳುವ ಸವಾರ, ಬೈಕ್​ ಸಮೇತ ಕೆಳಗೆ ಬೀಳುತ್ತಾನೆ. ಬಿದ್ದ ರಭಸಕ್ಕೆ ಎರಡ್ಮೂರು ಮೀಟರ್​ಗಳಷ್ಟು ಬೈಕ್​ ಸಮೇತ ಸವಾರ ಉಜ್ಜಿಕೊಂಡು ಹೋಗುತ್ತಾನೆ. ಈ ವೇಳೆ ಅಲ್ಲಿಯೇ ಇದ್ದ ವಿದ್ಯುತ್​ ಕಂಬಕ್ಕೆ ಬೈಕ್​ ಡಿಕ್ಕಿ ಹೊಡೆದ ಪರಿಣಾಮ, ಕಂಬ ಕುಸಿದು, ನೇರವಾಗಿ ಬೈಕ್​ ಸವಾರನ ಮೇಲೆ ಬೀಳುತ್ತದೆ. ಎದ್ದು ನಿಂತಿದ್ದ ಸವಾರ ಕಂಬ ಬಿದ್ದ ರಭಸಕ್ಕೆ ಮತ್ತೆ ಕುಸಿದು ಬಿದ್ದು, ಮತ್ತೆ ಏಳುತ್ತಾನೆ.
God helps those who wear helmet !#RoadSafety#DelhiPoliceCarespic.twitter.com/H2BiF21DDD
— Delhi Police (@DelhiPolice)September 15, 2022

ಅದೃಷ್ಟವಶಾತ್​ ಬೈಕ್​ ಸವಾರ ಹೆಲ್ಮೆಟ್​ ಧರಿಸಿದ್ದರಿಂದ ಒಂದೇ ಸಮಯದಲ್ಲಿ ಸಂಭವಿಸಿದ ಎರಡು ಅಪಘಾತದಿಂದ ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದಿದ್ದಾನೆ. ಹೆಲ್ಮೆಟ್​ ಇಲ್ಲದೇ ಹೋಗಿದ್ದರೆ, ಬೈಕ್​ ಸವಾರ ಸಾಯುವ ಸಾಧ್ಯತೆ ಇತ್ತು. ಇದೀಗ ಈ ವಿಡಿಯೋವನ್ನು ಹೆಲ್ಮೆಟ್​ ಬಗ್ಗೆ ಅರಿವು ಮೂಡಿಸಲೆಂದು ದೆಹಲಿ ಪೊಲೀಸರು ಟ್ವಿಟರ್​ನಲ್ಲಿ ಶೇರ್​ ಮಾಡಿದ್ದು, ಹೆಲ್ಮೆಟ್​ ಧರಿಸುವುದರಿಂದ ಒಂದಲ್ಲ, ಎರಡಲ್ಲ ಅನೇಕ ಬಾರಿ ಜೀವ ಉಳಿಸುತ್ತದೆ ಎಂದು ಅಡಿಬರಹ ಬರೆದುಕೊಂಡಿದ್ದಾರೆ.
ನಿನ್ನೆಯಷ್ಟೇ ಶೇರ್​ ಆಗಿರುವ ವಿಡಿಯೋ 1 ಮಿಲಿಯನ್​ಗೂ ಅಧಿಕ ವೀಕ್ಷಣೆ ಕಂಡಿದೆ. 26 ಸಾವಿರಕ್ಕೂ ಅಧಿಕ ಲೈಕ್ಸ್​ ಮತ್ತು 5 ಸಾವಿರಕ್ಕೂ ಅಧಿಕ ರೀಟ್ವೀಟ್​ ಮಾಡಲಾಗಿದೆ. ವಿಡಿಯೋ ನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.​
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪೂರ್ಣ ಮುಖವನ್ನು ಮುಚ್ಚುವ ಹೆಲ್ಮೆಟ್‌ಗಳನ್ನು ಸರಿಯಾಗಿ ಧರಿಸಿದರೆ, ಮಾರಣಾಂತಿಕ ಗಾಯಗಳನ್ನು ಶೇಕಡಾ 64 ರಷ್ಟು ಮತ್ತು ಮೆದುಳಿನ ಗಾಯಗಳನ್ನು ಶೇಕಡಾ 74 ರಷ್ಟು ಕಡಿಮೆ ಮಾಡಬಹುದು ಎಂದು ಹೇಳಿದೆ.(ಏಜೆನ್ಸೀಸ್​)
ರೈಲಿನ ಕಿಟಕಿಯಿಂದ ಕೈ ತೂರಿ ಮೊಬೈಲ್​ ದೋಚಲು ಯತ್ನಿಸಿದ ಖದೀಮನಿಗೆ 10 ಕಿ.ಮೀ ನರಕ ದರ್ಶನ!

ಮಳೆಗೆ ಹೆದರಿ ಮನೆಯಿಂದ ಹೊರಬಂದರೂ ಬಿಡಲಿಲ್ಲ ಜವರಾಯ: ಆಶ್ರಯ ಪಡೆದ ಕಟ್ಟಡವೇ ಕುಸಿದು 10 ಸಾವು!

ರಸ್ತೆ ದಾಟುವಾಗಲೇ 130 ಕಿ.ಮೀ ವೇಗದಲ್ಲಿ ಬಂದ ಕಾರು ಡಿಕ್ಕಿ: ಇಬ್ಬರು ಮಹಿಳಾ ಟೆಕ್ಕಿಗಳು ದುರ್ಮರಣ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five + 13 =
Remember me
