ನವದೆಹಲಿ:ದೆಹಲಿಯ ಮಹಿಳಾ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ ಒಬ್ಬರು ತನ್ನ ತಾಯಿ ಮತ್ತು ಮತ್ತೊಬ್ಬ ಪೊಲೀಸ್​ ಸಿಬ್ಬಂದಿ ಮುಂದೆಯೇ ತನ್ನ ವಯಸ್ಸಾದ ಮಾವನ ಕೆನ್ನೆಗೆ ಬಾರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಈ ಘಟನೆ ಲಕ್ಷ್ಮೀ ನಗರದ ಹಲ್ಲೆಗೊಳಗಾದ ವಯಸ್ಸಾದ ವ್ಯಕ್ತಿಯ ನಿವಾಸದಲ್ಲಿ ಭಾನುವಾರ ನಡೆದಿದೆ. ಪೊಲೀಸ್​ ಸಿಬ್ಬಂದಿಯೊಬ್ಬರು ಮಧ್ಯ ಪ್ರವೇಶಿಸುವವರೆಗೂ ತನ್ನ ಮಾವನಿಗೆ ಮಹಿಳಾ ಎಸ್​ಐ ಅನೇಕ ಬಾರಿ ಕಪಾಳ ಮೋಕ್ಷ ಮಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯದಲ್ಲಿದೆ.
ಹಲ್ಲೆ ಮಾಡುವ ಮುನ್ನ ಎಸ್​ಐ ಮತ್ತು ಅವರ ತಾಯಿ, ವಯಸ್ಸಾದ ವ್ಯಕ್ತಿಯ ಜೊತೆ ವಾಗ್ವಾದ ನಡೆಸಿದ್ದಾರೆ. ಮಾತಿಗೆ ಮಾತು ಬೆಳೆದು ಕೊನೆಗೆ ತಾಳ್ಮೆ ಕಳೆದುಕೊಂಡ ಮಹಿಳಾ ಎಸ್​ಐ, ತನ್ನ ಮಾವನ ಮೇಲೆ ಹಲ್ಲೆ ಮಾಡಿದ್ದಾರೆ. ಆಕೆಯ ತಾಯಿಯು ಕೂಡ ಇದಕ್ಕೆ ಸಾಥ್​ ನೀಡಿದ್ದಾರೆ.
ಆರೋಪಿ ಮಹಿಳಾ ಎಸ್​ಐರನ್ನು ದೆಹಲಿಯ ಡಿಫೆನ್ಸ್​ ಕಾಲನಿ ಪೊಲೀಸ್​ ಠಾಣೆಯಲ್ಲಿ ನಿಯೋಜಿಸಲಾಗಿದೆ. ಇದರ ನಡುವೆ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತನ್ನ ಮಾವನ ವಿರುದ್ಧ ಕೋರ್ಟ್​ನಲ್ಲಿ ದಾವೆ ಹೂಡಿದ್ದು, ಈ ವಿಚಾರವಾಗಿ ಜಗಳ ನಡೆದಿದೆ ಎಂದು ತಿಳಿದುಬಂದಿದೆ.
ಸದ್ಯ ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದ್ದು, ಆರೋಪಿ ಎಸ್​ಐ ವಿರುದ್ಧ ಇಲಾಖಾ ಕ್ರಮಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.(ಏಜೆನ್ಸೀಸ್​)
#WATCH| Case registered under section 323/427 IPC after a video of Sub-Inspector thrashing her in-laws in Delhi's Laxmi Nagar went viral. Info shared with concerned authority to take suitable departmental action against the erring police official: Delhi Police
(CCTV Visuals)pic.twitter.com/VUiyjVtZQl
— ANI (@ANI)September 5, 2022

ಭಾರಿ ಮಳೆಗೆ ಸಿಲಿಕಾನ್​ ಸಿಟಿ ತತ್ತರ: ಬೆಂಗಳೂರು ಪ್ರವಾಹ ಕುರಿತು ತೆಲಂಗಾಣ ಸಚಿವ ಮಾಡಿದ ಟ್ವೀಟ್​ ವೈರಲ್​​

ನಮ್ಮನ್ನು ಬದುಕಲು ಬಿಡಿ: ನೆಟ್ಟಿಗರ ಕಾಟ ಸಹಿಸದೇ ನಟಿ, ನಿರ್ಮಾಪಕಿ ಚಾರ್ಮಿ ಕೌರ್​ ತೆಗೆದುಕೊಂಡ ನಿರ್ಧಾರವಿದು…

ಪ್ರವೀಣ್ ನೆಟ್ಟಾರ್​ ಹತ್ಯೆ ಪ್ರಕರಣ: ಸುಳ್ಯ, ಪುತ್ತೂರಿನ ವಿವಿಧ ಕಡೆಗಳಲ್ಲಿ ಎನ್​ಐಎ ದಾಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
