ಮುಂಬೈ:ಭಾರತೀಯ ಮೂಲದ ಯುನೈಟೆಡ್​ ಕಿಂಗ್​ಡಮ್​ ಪ್ರಜೆಯೊಬ್ಬರು ಗಂಭೀರ ಆರೋಪ ಮಾಡಿದ್ದು, ಮುಂಬೈ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ಕೋವಿಡ್​ ಪರೀಕ್ಷೆ ಮತ್ತು ಕ್ವಾರೆಂಟೈನ್​ ಪ್ರೊಟೋಕಾಲ್​ ಹಣ ಮಾಡುವ ಹಗರಣ ಎಂದು ದೂರಿದ್ದಾರೆ.
ಮಾವನ ಅಂತ್ಯಕ್ರಿಯೆಯಲ್ಲಿ ಪಾಲ್ಗೋಳ್ಳಲು ಮನೋಜ್​ ಲಾಡ್ವಾ ಎಂಬುವರು ತನ್ನ ಪತ್ನಿ ಜತೆ ಡಿಸೆಂಬರ್​ 30ರಂದು ಮುಂಬೈಗೆ ಬಂದಿಳಿದರು. ವಿಮಾನ ನಿಲ್ದಾಣದ ಕೋವಿಡ್​ ಕೇಂದ್ರದಲ್ಲಿ ಪರೀಕ್ಷಿಸಿದಾಗ ಮನೋಜ್​ ಅವರಿಗೆ ಕರೊನಾ ಪಾಸಿಟಿವ್​ ವರದಿ ಬಂದಿತು. ಆದರೆ, ಲಂಡನ್​ನ ಹೀಥ್ರೋ ವಿಮಾನ ನಿಲ್ದಾಣದಲ್ಲಿ ಹೊರಡುವ ಮುನ್ನ ತೆಗೆದುಕೊಂಡಿದ್ದ ಕೋವಿಡ್​ ವರದಿಯಲ್ಲಿ ನೆಗಿಟಿವ್​ ಇತ್ತು. ಹೀಗಾಗಿ ಖಚಿತತೆಗಾಗಿ ಮತ್ತೊಮ್ಮೆ ಪರೀಕ್ಷೆ ಮಾಡುವಂತೆ ಮನೋಜ್​ ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಕೇಳಿಕೊಂಡರು. ಆದರೆ, ಅದನ್ನು ನಿರಾಕರಿಸಲಾಯಿತು. ಇದಾದ ತಕ್ಷಣ ಮನೋಜ್​ ಅವರನ್ನು ಸರ್ಕಾರಿ ನಿರ್ಮಿತ ಕ್ವಾರೆಂಟೈನ್​ ಕೇಂದ್ರಕ್ಕೆ ಸ್ಥಳಾಂತರಿಸಿದ್ದರಿಂದ ಅವರು ಮಾವನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಆಗಲಿಲ್ಲ. ಲಂಡನ್​ನಿಂದ ಬಂದ ಉದ್ದೇಶವೇ ಈಡೇರಲಿಲ್ಲ. ಸಮಯದ ಜತೆಗೆ ಹಣವೂ ವ್ಯರ್ಥವಾಯಿತು.
ಇದಾದ ಬಳಿಕ ತೀವ್ರವಾಗಿ ಬೇಸರಗೊಂಡಿದ್ದ ಮನೋಜ್​ ಅವರು ಫೇಸ್​ಬುಕ್​ ಲೈವ್​ ಬಂದು ವಿಮಾನ ನಿಲ್ದಾಣದ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ಹೊರಹಾಕುವ ಮೂಲಕ ಗಂಭೀರ ಆರೋಪಗಳನ್ನು ಮಾಡಿದರು. ಬಾಂಬೆ ವಿಮಾನ ನಿಲ್ದಾಣದಲ್ಲಿ ನನಗೆ ಮಾಂತ್ರಿಕವಾಗಿ ಕರೊನಾ ಪಾಸಿಟಿವ್​ ವರದಿ ಬಂದಿತು. ನಾವು ಪ್ರಯಾಣಿಸಿದ ವಿಮಾನದಲ್ಲೇ ಯುವಕ-ಯುವತಿಯರಿದ್ದರು. ಅವರೆಲ್ಲರಿಗೂ ಲಂಡನ್​ ಏರ್​ಪೋರ್ಟ್​ನಲ್ಲಿ ನೆಗಿಟಿವ್​ ಇದ್ದ ವರದಿ ಮುಂಬೈ ವಿಮಾನ ನಿಲ್ದಾಣದಲ್ಲಿ ಪಾಸಿಟಿವ್​ ಬಂದಿದೆ. ಇದನ್ನೆ ಪ್ರಶ್ನೆ ಮಾಡಿದರೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಈ ಬಗ್ಗೆ ಪ್ರಶ್ನಿಸುವಂತೆ ಆಪ್ತರ ಬಳಿ ಒತ್ತಾಯಿಸಿದ್ದಾರೆ.
ನಾನು ನನ್ನ ಮಾವ ಅವರ ಅಂತ್ಯಕ್ರಿಯೆಗೆ ಹೋಗಲು ಪ್ರಯತ್ನಿಸುತ್ತಿದ್ದೇನೆ. ಪತ್ನಿ ಶರ್ಮಿಲಿ ಅವರ ತಂದೆ 24 ಗಂಟೆಗಳ ಹಿಂದೆ ನಿಧನರಾದರು. ನಾವು ಭಾರತಕ್ಕೆ ಹೋಗಲು ಧಾವಿಸಿದೆವು ಮತ್ತು ಈ ಜನರು ನಮ್ಮಿಂದ ಹೆಚ್ಚಿನ ಹಣವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಇದು ಕೇವಲ ಅವಾಸ್ತವವಾಗಿದೆ ಎಂದು ಲಾಡ್ವಾ ಆರೋಪಿಸಿದ್ದಾರೆ.(ಏಜೆನ್ಸೀಸ್​)
ಹೆದರಿಸಲು ಬಂದ್ರು ಅನುಶ್ರೀ; ನಾಲ್ಕು ವರ್ಷಗಳ ನಂತರ ನಟನೆಗೆ..

ಭೋಜಪುರಿಯಲ್ಲಿ ಹರ್ಷಿಕಾ ಹ್ಯಾಟ್ರಿಕ್; ‘ಸನಮ್ ಮೇರೆ ಹಮ್​ರಾಝ್​’ ಚಿತ್ರದಲ್ಲಿ ನಟನೆ

ಆರ್​ಆರ್​ಆರ್ ಪ್ರಚಾರ ವ್ಯರ್ಥ; ಬಿಡುಗಡೆ ಮುಂದೂಡಿಕೆಯಿಂದಾಗಿ 20 ಕೋಟಿ ರೂಪಾಯಿ ನಷ್ಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + two =
Remember me
