ಭೋಪಾಲ್​:ವ್ಯಕ್ತಿಯೊಬ್ಬ ಬೈಕ್​ ರಿವರ್ಸ್​ ತೆಗೆಯುವಾಗ ಆಕಸ್ಮಿಕವಾಗಿ ಬಟ್ಟೆಯ ಮೇಲೆ ಕೆಸರು ಎರಚಿದ್ದಕ್ಕೆ ಕುಪಿತಗೊಂಡ ಮಹಿಳಾ ಪೊಲೀಸ್​ ಒಬ್ಬರು ಬೈಕ್​ ಸವಾರನಿಂದ ಬಲವಂತವಾಗಿ ಬಟ್ಟೆ ಸ್ವಚ್ಛ ಮಾಡಿಸಿದಲ್ಲದೆ, ಆತನ ಮೇಲೆ ಕೈ ಮಾಡಿರುವ ಘಟನೆ ಮಧ್ಯಪ್ರದೇಶದ ರೇವಾದ ಸಿರ್ಮೌರ್​ ಚೌಕದ ಬಳಿ ನಡೆದಿದೆ.
ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೆಸರು ಎರಚಿರುವ ವಿಡಿಯೋ ಇಲ್ಲ. ಆದರೆ, ಸದ್ಯ ಹರಿದಾಡುತ್ತಿರುವ ವಿಡಿಯೋದಲ್ಲಿ ಮಹಿಳಾ ಪೊಲೀಸ್​, ಬೈಕ್​ ಸವಾರನಿಂದ ತನ್ನ ಬಟ್ಟೆಯನ್ನು ಸ್ವಚ್ಛ ಮಾಡಿಸುತ್ತಿರುವ ದೃಶ್ಯವಿದೆ. ಅಲ್ಲದೆ, ವಿಡಿಯೋ ಕೊನೆಯಲ್ಲಿ ಆತನ ಮೇಲೆ ಕೈ ಮಾಡಿ ಹೋಗುತ್ತಿರುವುದು ಸೆರೆಯಾಗಿದೆ. ಮುಖಕ್ಕೆ ಬಟ್ಟೆ ಕಟ್ಟಿರುವುದರಿಂದ ಮಹಿಳಾ ಪೊಲೀಸ್ ಮುಖ ಕಾಣಸಿಲ್ಲ. ​
6 ಸೆಕೆಂಡ್​ ವಿಡಿಯೋ ತುಣುಕು ವೈರಲ್​ ಆಗಿದ್ದು, ಮಹಿಳಾ ಪೊಲೀಸ್​ ದುರ್ವತನೆ ವಿರುದ್ಧ ಆಕ್ರೋಶಗಳು ವ್ಯಕ್ತವಾಗಿವೆ. ಪೊಲೀಸ್​ ಅಧಿಕಾರಿಯನ್ನು ಶಶಿಕಲಾ ಎಂದು ಗುರುತಿಸಲಾಗಿದೆ. ಹೋಮ್​ ಗಾರ್ಡ್​ ಕಾನ್ಸ್​ಟೇಬಲ್​ ಆಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
मध्य प्रदेश के रीवा में एक महिला पुलिसकर्मी ने सिरमौर चौक के पास पहले युवक से पैंट साफ कराई. फिर उसे जोरदार थप्पड़ जड़ दिया. बाइक हटाते हुए महिला पुलिसकर्मी के पैंट में कीचड़ लग गया था@ndtv@ndtvindia@DGP_MP@drnarottammisrapic.twitter.com/m0hdSJ2mrZ
— Anurag Dwary (@Anurag_Dwary)January 12, 2022

ನಾವು ವೀಡಿಯೊವನ್ನು ನೋಡಿದ್ದೇವೆ. ಅದರಲ್ಲಿ ಒಬ್ಬ ವ್ಯಕ್ತಿಯನ್ನು ಅಧಿಕಾರಿಯ ಪ್ಯಾಂಟ್ ಸ್ವಚ್ಛಗೊಳಿಸಲು ಬಲವಂತ ಮಾಡಿರುವುದು ತೋರುತ್ತಿದೆ. ಅಲ್ಲದೆ, ಕಪಾಳಮೋಕ್ಷ ಸಹ ಮಾಡಿದ್ದಾರೆ. ಯಾರಾದರೂ ನಮ್ಮ ಬಳಿಗೆ ಬಂದು ದೂರು ನೀಡಿದರೆ, ನಂತರ ನಾವು ಪ್ರಕರಣದ ವಿಚಾರಣೆ ನಡೆಸುತ್ತೇವೆ ಎಂದು ಹೆಚ್ಚುವರಿ ಎಸ್ಪಿ (ರೇವಾ) ಶಿವಕುಮಾರ್ ಹೇಳಿದ್ದಾರೆ.(ಏಜೆನ್ಸೀಸ್​)
ಪ್ರೀತಿಸಿ ಮದ್ವೆಯಾದ ಸಬ್​ ಇನ್ಸ್​ಪೆಕ್ಟರ್​ ಬಾಳಲ್ಲಿ ದುರಂತ: ಗಂಡನ ಹಿಂದೆಯೇ ಪತ್ನಿಯ ಜೀವನವು ಅಂತ್ಯ

ವೈವಾಹಿಕ ಜೀವನಕ್ಕೆ ಕಾಲಿಟ್ಟ ರತ್ನನ್​ ಬೆಡಗಿ: ಬೆಂಗಳೂರಿನಲ್ಲಿ ನಡೆಯಿತು ರೆಬಾ ಮೊನಿಕಾ ವಿವಾಹ

ನಮ್​ ಜನ ವಿದೇಶಗಳಿಗೆ ನಾಲ್ಕೇ ದಿನದಲ್ಲಿ ಹೋಗಿ ಬರುವಂತೆ ಮಾಡುವಾಸೆ: ಜನಾರ್ದನ ರೆಡ್ಡಿ

ನೀವು ಯಾವಾಗಲೂ ನಮ್ಮ ಚಾಂಪಿಯನ್​: ಸೈನಾ ನೆಹ್ವಾಲ್​ ಎದುರು ಮಂಡಿಯೂರಿದ ನಟ ಸಿದ್ಧಾರ್ಥ್!​

Sign in to your account
Please enter an answer in digits:nine + seventeen =
Remember me
