ನವದೆಹಲಿ:ನಿನ್ನೆ (ಡಿಸೆಂಬರ್​ 8) ಭಾರತದ ಪಾಲಿಗೆ ಅತ್ಯಂತ ಕರಾಳ ದಿನ. ತಮಿಳುನಾಡಿನ ಕೂನೂರಿನಲ್ಲಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ಪತನದಲ್ಲಿ ಭಾರತೀಯ ಸೇನಾಪಡೆಯ ಮುಖ್ಯಸ್ಥ ಬಿಪಿನ್​ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಸೇರಿದಂತೆ 13 ಮಂದಿ ಮೃತಪಟ್ಟಿದ್ದು, ಇಡೀ ದೇಶವೇ ಶೋಕ ಸಾಗರದಲ್ಲಿ ಮುಳುಗಿದೆ. ಇದರ ನಡುವೆ ಸೇನಾ ಹೆಲಿಕಾಪ್ಟರ್​ ಪತನಕ್ಕೆ ಸಂಬಂಧಿಸಿದ್ದು ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ, ಅದು ನಕಲಿ ವಿಡಿಯೋ ಎಂದು ಫ್ಯಾಕ್ಟ್​ಚೆಕ್​ನಿಂದ ಬಯಲಾಗಿದೆ.
ವಿಡಿಯೋದಲ್ಲಿ ಏನಿದೆ?: ಆಕಾಶದಲ್ಲಿ ಹಾರಾಡುತ್ತಿರುವಾಗಲೇ ಹೆಲಿಕಾಪ್ಟರ್​ಗೆ ಬೆಂಕಿ ಹೊತ್ತುಕೊಳ್ಳುತ್ತದೆ. ಅದು ನಿಧಾನವಾಗಿ​ ಪತನವಾಗುತ್ತಾ ನೆಲಕ್ಕುರುಳುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ನಿನ್ನೆ ಸೇನಾ ಮುಖ್ಯಸ್ಥರಾದ ಬಿಪಿನ್​ ರಾವತ್ ಮತ್ತು ಅವರ ಸಿಬ್ಬಂದಿಯಿದ್ದ ಹೆಲಿಕಾಪ್ಟರ್​ ಪತನದ ದೃಶ್ಯ ಎಂದು ಹೇಳಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಈಗಾಗಲೇ ಸಾವಿರಾರು ಮಂದಿ ವಿಡಿಯೋವನ್ನು ನಿಜವೆಂದು ನಂಬಿ ರೀಟ್ವೀಟ್​, ಶೇರ್​ ಮತ್ತು ಲೈಕ್ಸ್​ಗಳನ್ನು ಮಾಡುತ್ತಿದ್ದಾರೆ. ​
Bipin Rawat Helicopter Crashed In Tamil Nadu live Video#bipinrawat#helicopter#IndianArmy#BIGBREAKINGpic.twitter.com/CgwCqZ0bSr
— Marwadi Club (@MarwadiClub)December 8, 2021

https://twitter.com/_SirDonBradman_/status/1468543949279166464?s=20
ಆದರೆ, ವೈರಲ್​ ಆಗುತ್ತಿರುವ ವಿಡಿಯೋದಲ್ಲಿರುವುದು ಬಿಪಿನ್​ ರಾವತ್​ ಅವರಿದ್ದ ಸೇನಾ ಹೆಲಿಕಾಪ್ಟರ್​ ಅಲ್ಲ. ಬದಲಿಗೆ 2020ರಲ್ಲಿ ಸಿರಿಯಾದಲ್ಲಿ ಸಂಭವಿಸಿದ ಹೆಲಿಕಾಪ್ಟರ್​ ಪತನದ ದೃಶ್ಯವಾಗಿದೆ. ಈ ವಿಚಾರ ಫ್ಯಾಕ್ಟ್​ಚೆಕ್​ನಿಂದ ಬಯಲಾಗಿದೆ.
ಅವಿಯೇಶನ್​ ಗೀಕ್​ ಕ್ಲಬ್​ ವರದಿಯ ಪ್ರಕಾರ ಸೈಯದ್​ ಎಂಐ-17 ಹೆಸರಿನ ಹೆಲಿಕಾಪ್ಟರ್​ ಅನ್ನು 2020ರ ಫೆಬ್ರವರಿಯಲ್ಲಿ ಸಿರಿಯಾ ಮೇಲೆ ಟರ್ಕಿ ಮತ್ತು ಅಲ್ ಖೈದಾ ಬೆಂಬಲಿತ ಸೇನಾಪಡೆಗಳು ಸಿಡಿಸಿದ ಕ್ಷಿಪಣಿಯ ದಾಳಿಗೆ ಹೆಲಿಕಾಪ್ಟರ್ ಪತನವಾಗಿದೆ. ಈ ವಿಡಿಯೋವನ್ನು ವಾಯುಯಾನ ವಿಶ್ಲೇಷಕ ಬಾಬಕ್​ ತಾಘ್ವೀ ಎಂಬುವರು 2020ರ ಫೆಬ್ರವರಿ 11ರಂದು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಟರ್ಕಿಶ್​ ಸೇನೆಯು ಸಿರಿಯಾ ಅರಬ್​ ವಾಯುಪಡೆಗೆ ಸೇರಿದ ಎಂಐ-17 ಯುಟಿಲಿಟಿ ಹೆಲಿಕಾಪ್ಟರ್​ ಅನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ಮಾಡಿದ್ದು, ಅದು ಪತನವಾಗುತ್ತಿರುವ ದೃಶ್ಯವಿದು ಎಂದು ತಾಘ್ವೀ ಟ್ವೀಟ್​ ಮೂಲಕ ಸ್ಪಷ್ಟಪಡಿಸಿದ್ದಾರೆ.
#BREAKING:#TurkishArmy targeted a Mi-17 utility helicopter of#SyriaArab Air Force over Al-Nayrab,#Idliban hour ago. It can be seen crashing.#AlQaedaaffiliated militias of#Turkeyclaim that they did it, but it was beyond range of their MANPADS!pic.twitter.com/kaZfTcoaN6
— Babak Taghvaee – Μπάπακ Τακβαίε – بابک تقوایی (@BabakTaghvaee)February 11, 2020

ಹೀಗಾಗಿ ಬಿಪಿನ್​ ರಾವತ್​ ಅವರಿದ್ದ ಹೆಲಿಕಾಪ್ಟರ್​ ಪತನಕ್ಕೂ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋಗೂ ಸಂಬಂಧವಿಲ್ಲ ಎಂಬುದು ಫ್ಯಾಕ್ಟ್​ಚೆಕ್​ನಿಂದ ಬಯಲಾಗಿದೆ. ಬಿಪಿನ್​ ರಾವತ್​ ಅವರಿದ್ದ ಹೆಲಿಕಾಪ್ಟರ್​ ಪತನದ ದೃಶ್ಯ ಯಾರಿಗೂ ಲಭ್ಯವಾಗಿಲ್ಲ. ಅದು ಸೆರೆಯಾಗಿದೆಯೇ? ಇಲ್ಲವೇ? ಎಂಬುದು ಕೂಡ ಯಾರಿಗೂ ಸದ್ಯದವರೆಗೂ ತಿಳಿದಿಲ್ಲ. ಹೀಗಾಗಿ ಪ್ರಸ್ತುತ ಹರಿದಾಡುತ್ತಿರುವ ಹೆಲಿಕಾಪ್ಟರ್​ ಪತನದ ದೃಶ್ಯ ಸಿರಿಯಾದಲ್ಲಿ ನಡೆದ ಹೆಲಿಕಾಪ್ಟರ್​ ಪತನದ ದೃಶ್ಯವಾಗಿದೆ.
ನಿನ್ನೆ ನಡೆದಿದ್ದೇನು?ವೆಲ್ಲಿಂಗ್ಟನ್‌ನ ಮಿಲಿಟರಿ ಶಾಲೆಯಲ್ಲಿ ನಿಗದಿಯಾಗಿದ್ದ ಸೆಮಿನಾರ್​ಗೆಂದು ಸಿಡಿಎಸ್​ ಬಿಪಿನ್​ ರಾವತ್, ಅವರ ಪತ್ನಿ ಮಧುಲಿಕಾ ರಾವತ್​, ಬ್ರಿಗೇಡಿಯರ್​ ಎಲ್​.ಎಸ್​.ಲಿಡ್ಡರ್​, ಲೆಫ್ಟಿನೆಂಟ್ ಕರ್ನಲ್​ ಹರ್ಜಿಂದರ್ ಸಿಂಗ್​, ನಾಯಕ್​ ಗುರುಸೇವಕ್​ ಸಿಂಗ್, ನಾಯಕ್​ ಜಿತೇಂದರ್​ ಕುಮಾರ್​, ಲ್ಯಾನ್ಸ್ ನಾಯಕ್​ ವಿವೇಕ್ ಕುಮಾರ್​, ಲ್ಯಾನ್ಸ್ ನಾಯಕ್​ ಬಿ ಸಾಯ್​ತೇಜ್​, ಹವಲ್ದಾರ್​ ಸತ್ಪಾಲ್​ ಸೇರಿದಂತೆ 14 ಮಂದಿ ಬುಧವಾರ ರಷ್ಯಾ ನಿರ್ಮಿತ ಸೇನಾ ಹೆಲಿಕಾಪ್ಟರ್ Mi-17V5 ​ನಲ್ಲಿ ಹೋಗುತ್ತಿದ್ದರು. ಮಾರ್ಗಮಧ್ಯೆ ಹೆಲಿಕಾಪ್ಟರ್​ ಪತನಗೊಂಡು ಬಿಪಿನ್​ ರಾವತ್​ ದಂಪತಿ ಸೇರಿ 13 ಮಂದಿ ಮೃತಪಟ್ಟಿದ್ದಾರೆ. ಸಿಡಿಎಸ್​ ಬಿಪಿನ್​ ರಾವತ್​ ನಿಧನಕ್ಕೇ ಇಡೀ ದೇಶವೇ ಕಂಬನಿ ಮಿಡಿದಿದೆ.(ಏಜೆನ್ಸೀಸ್​)
ಸೇನಾ ಮುಖ್ಯಸ್ಥ ಬಿಪಿನ್​ ರಾವತ್ ನಿಧನಕ್ಕೂ ಮುನ್ನ ನಿವೃತ್ತ ಸೇನಾಧಿಕಾರಿ ಮಾಡಿದ ಟ್ವೀಟ್​ಗೆ ಭಾರೀ ಆಕ್ರೋಶ ​

ಪಶ್ಚಿಮಘಟ್ಟದಲ್ಲಿ 2 ಸೇನಾ ಕಾಪ್ಟರ್​ಗಳ ಪತನ ಇನ್ನೂ ನಿಗೂಢ; 1998, 2003ರಲ್ಲಿ ಪ್ರತ್ಯೇಕ ಅಪಘಾತ

ಮಗಳ ಸಾವಿನಿಂದ ಮನನೊಂದು ಅಳಿಯನ ಮನೆ ಮುಂದೆ ಎಡೆಯಿಟ್ಟು ನೇಣಿಗೆ ಶರಣಾದ ತಂದೆ

ಜನ್ಮದಿನದಂದೇ ಮಾಜಿ ಸಚಿವ ಎಸ್. ಆರ್‌. ಮೋರೆ‌ ವಿಧಿವಶ

Sign in to your account
Please enter an answer in digits:18 − fourteen =
Remember me
