ಜೈಪುರ:ಹಲವು ವರ್ಷಗಳಿಂದ ಹಾವುಗಳನ್ನು ರಕ್ಷಣೆ ಮಾಡಿ, ಸುರಕ್ಷಿತವಾಗಿ ಕಾಡಿಗೆ ಬಿಡುವ ಮೂಲಕ ರಾಜಸ್ಥಾನದ “ಹಾವಿನ ಮನುಷ್ಯ” ಎಂದೇ ಖ್ಯಾತಿ ಪಡೆದಿದ್ದ ವಿನೋದ್​ ತಿವಾರಿ ಕೊನೆಗೆ ಹಾವು ಕಡಿತದಿಂದಲೇ ದುರಂತ ಸಾವಿಗೀಡಾಗಿದ್ದಾರೆ.
ವಿನೋದ್​ ತಿವಾರಿ (45) ಅವರು ಚುರು ಜಿಲ್ಲೆಯ ನಿವಾಸಿ. ಸುಮಾರು 20 ವರ್ಷಗಳಿಂದ ಉರಗ ರಕ್ಷಣೆಯಲ್ಲಿ ತೊಡಗಿದ್ದರು. ತಮ್ಮ ಜೀವಿತಾವಧಿಯಲ್ಲಿ ಸಾಕಷ್ಟು ಹಾವುಗಳನ್ನು ರಕ್ಷಣೆ ಮಾಡಿ, ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಹೆಗ್ಗಳಿಕೆ ವಿನೋದ್​ ತಿವಾರಿ ಅವರಿಗಿದೆ. ಈ ಕಾರಣದಿಂದಲೇ ಅವರನ್ನು ರಾಜಸ್ಥಾನದ ಹಾವಿನ ಮನುಷ್ಯ ಎಂದು ಕರೆಯಲಾಗುತ್ತದೆ.
ಇದೀಗ ಹಾವಿನಿಂದಲೇ ಮೃತಪಟ್ಟಿರುವುದು ದುರಂತದ ಸಂಗತಿಯಾಗಿದೆ. ಶನಿವಾರ ಬೆಳಗ್ಗೆ ಚುರು ಜಿಲ್ಲೆಯ ಗೊಗಮೆಡಿ ಏರಿಯಾದಲ್ಲಿರುವ ಅಂಗಡಿಯೊಂದರ ಹೊರಭಾಗದಲ್ಲಿ ತಿವಾರಿ ಅವರು ವಿಷಕಾರಿ ನಾಗರಹಾವನ್ನು ಹಿಡಿದು, ಅದನ್ನು ಬ್ಯಾಗ್​ ಒಳಗೆ ಹಾಕುವಾಗ ಹಾವು ತಿವಾರಿಯ ಕೈಬೆರಳಿಗೆ ಕಡಿದಿದೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿಯೂ ಸೆರೆಯಾಗಿದೆ.
वीडियो राजस्थान के चुरु का है. सांप को पकड़ने आए विनोद तिवाड़ी ने जैसे ही कोबरा को बैग में डाला, कोबरा ने विनोद को काट लिया. कुछ ही मिनट के भीतर विनोद की मौत हो गई#vinod#Cobra#Churu#Rajasthanpic.twitter.com/S8nEWmUI3a
— Khabar Setu TV (@tv_setu)September 13, 2022

ಹಾವಿನಿಂದ ಕಡಿತಕ್ಕೆ ಒಳಗಾಗ ಕೆಲವೇ ನಿಮಿಷಗಳಲ್ಲಿ ತಿವಾರಿ ದುರ್ಮರಣಕ್ಕೀಡಾಗಿದ್ದಾರೆ. ವಿನೋದ್​ ಅವರು ತುಂಬಾ ಒಳ್ಳೆಯ ಹೆಸರನ್ನು ಮಾಡಿದ್ದರು. ಹೀಗಾಗಿ ಭಾನುವಾರ ನಡೆದ ಅವರ ಅಂತ್ಯಕ್ರಿಯೆ ವೇಳೆ ಸಾವಿರಾರು ಜನ ಭಾಗಿಯಾದರು.(ಏಜೆನ್ಸೀಸ್​)
ಬಿಜೆಪಿ ಸರ್ಕಾರದ ಭ್ರಷ್ಟಾಚಾರ ನಿಗ್ರಹಕ್ಕೆ ಸಹಾಯವಾಣಿ ತೆರೆದ ಕಾಂಗ್ರೆಸ್!

ತಮ್ಮನ ಪತ್ನಿಯ ಕಿರುಕುಳಕ್ಕೆ ಬೇಸತ್ತು ಸಾವಿನ ದಾರಿ ಹಿಡಿದ ತಾಯಿ-ಮಗ! ಸಾವಿಗೂ ಮುನ್ನ ಮನದ ನೋವನ್ನು ಬಿಚ್ಚಿಟ್ಟ ಮಹಿಳೆ

ಟಾಲಿವುಡ್​ ಸಿನಿ ಇಂಡಸ್ಟ್ರಿ ಬಗ್ಗೆ ಗಂಭೀರ ಆರೋಪ ಮಾಡಿದ ಹೆಬ್ಬುಲಿ ಬೆಡಗಿ ಅಮಲಾ ಪೌಲ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − sixteen =
Remember me
