ಹೈದರಾಬಾದ್​:ಕರೊನಾ ಸೋಂಕಿತ ತಂದೆಗೆ ನೀರು ಕುಡಿಸಲು ತನ್ನ ತಾಯಿಯ ಜತೆಯೇ ಮಗಳು ಹೋರಾಟ ನಡೆಸಿದ ಮನಕಲಕುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಮಹಾಮಾರಿ ಕರೊನಾ ವೈರಸ್​ ಎರಡನೇ ಅಲೆಯು ದೇಶದಲ್ಲಿ ಸೃಷ್ಟಿಸಿರುವ ಭೀಕರತೆಗೆ ಈ ಘಟನೆ ಸಾಕ್ಷಿಯಾಗಿದೆ. ಪ್ರತಿನಿತ್ಯ ಇಂತಹ ಅಮಾನವೀಯ ಘಟನೆ ಸಾಮಾನ್ಯವಾಗಿದ್ದು, ರಕ್ತ ಸಂಬಂಧಗಳನ್ನೇ ಕಷ್ಟಕಾಲದಲ್ಲಿ ಹೊರಗಿಡುವಂತಹ ವಾತಾವರಣ ನಿರ್ಮಾಣವಾಗಿರುವುದು, ಓ ವಿಧಿಯೇ ನೀನೆಷ್ಟು ಕ್ರೂರಿ ಎಂದು ಶಪಿಸುವಂತಿದೆ.
ಘಟನೆಯ ವಿವರಣೆಗೆ ಬರುವುದಾದರೆ, ವಿಜಯವಾಡದಲ್ಲಿ ಕೆಲಸ ಮಾಡುತ್ತಿದ್ದ 50 ವರ್ಷದ ವ್ಯಕ್ತಿ ಕರೊನಾ ಪಾಸಿಟಿವ್​ ಆದ ಬಳಿಕ ಶ್ರೀಕಾಕುಳಂನಲ್ಲಿರುವ ತನ್ನ ಮನೆಗೆ ಮರಳುತ್ತಾನೆ. ಆದರೆ, ತಮ್ಮದೇ ಗ್ರಾಮದ ಜನರು ಆತನನ್ನು ಸೇರಿಸಿಕೊಳ್ಳುವುದಿಲ್ಲ. ಹೀಗಾಗಿ ಗ್ರಾಮದ ಹೊರಭಾಗದ ಮೈದಾನದಲ್ಲಿ ಗುಡಿಸಲು ಕಟ್ಟಿಕೊಂಡು ಉಳಿಯುವಂತೆ ಒತ್ತಾಯ ಮಾಡುತ್ತಾರೆ.
ಇತ್ತ ತುಂಬಾ ದಣಿದಿದ್ದ ಸೋಂಕಿತ ತಂದೆಯ ನರಳಾಟ ನೋಡದೇ 17 ವರ್ಷದ ಮಗಳು ನೀರಿನ ಬಾಟಲ್​ ತೆಗೆದುಕೊಂಡು ಹೋಗಿ ತಂದೆಗೆ ನೀರು ಕುಡಿಸಲು ಮುಂದಾದಾಗ ಆಕೆಗೂ ಸೋಂಕು ತಗಲಬಹುದು ಎಂದು ತಾಯಿ ಆಕೆಯನ್ನು ಹಿಂಬದಿಯಿಂದ ಹಿಡಿದುಕೊಳ್ಳುತ್ತಾಳೆ.
ಅಷ್ಟರಲ್ಲಿ ತಂದೆ ನೆಲದ ಮೇಲೆ ಬಿದ್ದು ಒದ್ದಾಡುವಾಗ ಹೇಗೋ ತಾಯಿಯಿಂದ ಬಿಡಿಸಿಕೊಂಡು ಹೋಗಿ ಮಗಳು ಆತನಿಗೆ ನೀರು ಕುಡಿಸುತ್ತಾಳೆ.
ವಿಡಿಯೋ ಚಿತ್ರೀಕರಿಸಿದ ವ್ಯಕ್ತಿ ಹೇಳುವಂತೆ ಸೋಂಕಿತನಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಯಾವುದೇ ಆಸ್ಪತ್ರೆಗಳಲ್ಲಿ ಬೆಡ್​ಗಳು ಇರಲಿಲ್ಲ. ಇದರಿಂದಾಗಿ ಕೆಲವೇ ಹೊತ್ತಲ್ಲಿ ಮೃತಪಟ್ಟ. ಅವನ ಕುಟುಂಬಕ್ಕೂ ಸಹ ಕರೊನಾ ಪಾಸಿಟಿವ್​ ದೃಢಪಟ್ಟಿದೆ ಎಂದು ಹೇಳಿದ್ದಾನೆ.
ಇನ್ನು ಈ ಘಟನೆಯು ಕೋವಿಡ್ ಸೋಂಕಿಗೆ ಅಂಟಿಕೊಂಡಿರುವ ಕಳಂಕವನ್ನು ಬಹಿರಂಗಪಡಿಸುತ್ತದೆ. ಎರಡನೇ ಅಲೆಯು ದೇಶದ ಹಳ್ಳಿಗಳಲ್ಲಿ, ಕುಟುಂಬಗಳಿಗೂ ಹರಡಿದೆ ಎಂಬುದನ್ನು ಸಾಬೀತು ಮಾಡಿದೆ.
ಆಂಧ್ರಪ್ರದೇಶದಲ್ಲಿ ಒಂದು ದಿನದಲ್ಲಿ ಸುಮಾರು 20,000 ಪ್ರಕರಣಗಳು ಮತ್ತು 71 ಸಾವುಗಳು ವರದಿಯಾಗಿವೆ. ಈವರೆಗೆ ರಾಜ್ಯವು ಸುಮಾರು 11 ಲಕ್ಷ ಪ್ರಕರಣಗಳನ್ನು ದಾಖಲಿಸಿದೆ.(ಏಜೆನ್ಸೀಸ್​)
ಕರೊನಾ ನಿಯಂತ್ರಣಕ್ಕೆ ಮೇಲ್ವಿಚಾರಕರನ್ನು ನೇಮಿಸಿದ ಸರ್ಕಾರ
ಒಂದೂವರೆ ಗಂಟೆ ಅವಧಿಯಲ್ಲಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ 5 ಜನ ಕೋವಿಡ್ ಪೀಡಿತರು ಪ್ರಾಣ ಬಿಟ್ಟರು!
ಕರೊನಾಗೆ ಮೊಸರನ್ನದ ಶಾಂತಿ!; ಮೊದಲ ಅಲೆಯಲ್ಲಿ ‘ಗೋ ಕರೊನಾ ಗೋ’, ಎರಡನೇ ಅಲೆಯಲ್ಲಿ ‘ಕರೊನಮ್ಮ ಊರು ಬಿಟ್ಟು ಹೋಗಮ್ಮ..’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + nine =
Remember me
