ಭೋಪಾಲ್​:ಮಾಸ್ಕ್​ ಧರಿಸದ ಮಹಿಳೆಯೊಬ್ಬರ ಮೇಲೆ ಪೊಲೀಸ್​ ಸಿಬ್ಬಂದಿ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಮಧ್ಯಪ್ರದೇಶದ ಸಾಗರ್​ ಜಿಲ್ಲೆಯಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ಪೊಲೀಸರ ಅಮಾನವೀಯ ವರ್ತನೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಮಗಳ ಕಣ್ಣೆದುರಲ್ಲೇ ಮಹಿಳೆಯನ್ನು ಕಾಲಿನಿಂದ ಒದ್ದು, ರಸ್ತೆಯಲ್ಲೇ ಎಳೆದಾಡಿ ಥಳಿಸಿರುವುದು ಪೊಲೀಸರ ಮೇಲಿನ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ತಾಯಿ ಮತ್ತು ಮಗಳು ದಿನಸಿ ಪದಾರ್ಥ ತರಲು ಅಂಗಡಿಗೆ ಹೋಗುತ್ತಿದ್ದರು. ಕರೊನಾ ಲಾಕ್​ಡೌನ್​ ಇದ್ದರೂ ಮಹಿಳೆ ಮಾಸ್ಕ್​ ಧರಿಸಿರಲಿಲ್ಲ. ಇದನ್ನು ನೋಡಿದ ಪೊಲೀಸರು ಮಹಿಳೆಯನ್ನು ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದ ಕೊನೆಗೆ ಮಹಿಳೆಯನ್ನು ಪೊಲೀಸರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಇದನ್ನೂ ಓದಿರಿ:ಮಹಿಳಾ ಕ್ರಿಕೆಟರ್ ತಾಯಿಯ ಕೋವಿಡ್ ಚಿಕಿತ್ಸೆಗೆ ನೆರವಾದ ವಿರಾಟ್ ಕೊಹ್ಲಿ
ಮಾಸ್ಕ್​ ಧರಿಸದ ಮಹಿಳೆಯೊಬ್ಬರ ಮೇಲೆ ಪೊಲೀಸ್​ ಸಿಬ್ಬಂದಿ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಮಧ್ಯಪ್ರದೇಶದ ಸಾಗರ್​ ಜಿಲ್ಲೆಯಲ್ಲಿ ನಡೆದಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ಪೊಲೀಸರ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.#Woman#MadhyaPradesh#Police#Beaten#Daughter#Mask#Lockdown#Coronaviruspic.twitter.com/SiRyhMcB1g
— Vijayavani (@VVani4U)May 20, 2021

ಈ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾರೆ. ವಿಡಿಯೋದಲ್ಲಿ ಮಹಿಳೆ ಪೊಲೀಸರಿಂದ ಬಿಡಿಸಿಕೊಳ್ಳಲು ಯತ್ನಿಸುತ್ತಾರೆ. ಅಲ್ಲದೆ, ಬಲವಂತವಾಗಿ ಪೊಲೀಸ್​ ವಾಹನದ ಒಳಗಡೆ ಎಳೆದೊಯ್ಯುವಾಗ ಮಹಿಳೆ ಅದನ್ನು ನಿರಾಕರಿಸುತ್ತಾರೆ. ಈ ವೇಳೆ ಆಕೆಯ ಮಗಳು ಸಹ ತಾಯಿಯನ್ನು ಹಿಡಿದು ಹಿಂದಕ್ಕೆ ಎಳೆಯುತ್ತಾಳೆ. ಅಲ್ಲಿಂದ ಮಹಿಳೆಯನ್ನು ಕರೆದೊಯ್ಯಲು ಸಾಧ್ಯವಾಗದಿದ್ದಾಗ ತಾಳ್ಮೆ ಕಳೆದುಕೊಂಡ ಪೊಲೀಸರು ಮಹಿಳೆಗೆ ಮನಬಂದಂತೆ ಥಳಿಸಿದ್ದಾರೆ. ಈ ವೇಳೆ ಮಹಿಳೆ ನೋವಿನಿಂದ ರಸ್ತೆಯಲ್ಲಿ ಕೂಗಾಡಿದ್ದಾಳೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ನೆಟ್ಟಿಗರು ಪೊಲೀಸರು ಕ್ರಮವನ್ನು ಪ್ರಶ್ನಿಸಿದ್ದಾರೆ. ಅಲ್ಲದೆ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.(ಏಜೆನ್ಸೀಸ್​)
ಇನ್ನೇನು ತಾಳಿ ಕಟ್ಟಬೇಕೆನ್ನುವಷ್ಟರಲ್ಲಿ ಮಂಗಳಸೂತ್ರ ಕದ್ದು ಪುರೋಹಿತ ಪರಾರಿ! ಮುಂದಾಗಿದ್ದು ರೋಚಕ

ಮುಂಗಾರು ಹೊಸ್ತಿಲಲ್ಲಿ ಬಿತ್ತನೆ ಬೀಜ ದುಬಾರಿ; ಕೃಷಿ ಚಟುವಟಿಕೆಗೂ ಮುನ್ನ ಅನ್ನದಾತರು ಕಂಗಾಲು

ಕ್ರಿಕೆಟ್​ ಆಡುವುದನ್ನು ತಡೆದ ಪಿಡಿಒ ಮೇಲೆ ಯುವಕನಿಂದ ಹಲ್ಲೆ: ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − four =
Remember me
