ವಿಜಯನಗರ:ಅಪರಿಚಿತ ಯುವತಿಯೊಬ್ಬಳು ಡ್ರಾಪ್​ ಕೇಳಿದಳು ಅಂತಾ ಬೈಕ್​ ನಿಲ್ಲಿಸಿ ಆಕೆಯನ್ನು ಕೂರಿಸಿಕೊಂಡು ಹೋದ ಯುವಕನಿಗೆ ಮರುಕ್ಷಣದಲ್ಲೇ ಕಾದಿತ್ತೊಂದು ಭಾರೀ ಆಘಾತ. ಈ ಘಟನೆ ಆಂಧ್ರ ಪ್ರದೇಶದ ವಿಜಯನಗರದಲ್ಲಿ ನಡೆದಿದ್ದು, ಯುವತಿ ಹಾಕಿದ್ದ ಬಲೆಗೆ ಯುವಕ ಸುಲಭ ತುತ್ತಾಗಿದ್ದಾನೆ.
ವಿವರಣೆಗೆ ಬರುವುದಾದರೆ, ವಿಜಯನಗರದಿಂದ ಗಜಪತಿನಗರದ ಕಡೆಗೆ ಬೈಕ್​ನಲ್ಲಿ ಬರುತ್ತಿದ್ದ ಯುವಕನ ಬಳಿ ಯುವತಿಯೊಬ್ಬಳು ಡ್ರಾಪ್ ಕೇಳಿದ್ದಾಳೆ. ಹುಡುಗಿ ತಾನೇ ಅಂದುಕೊಂಡು ಬೈಕ್​ ನಿಲ್ಲಿಸಿ ಆಕೆಯನ್ನು ಕೂರಿಸಿಕೊಂಡಿದ್ದಾನೆ. ಬಳಿಕ ದವಳಪೇಟೆ ಸೇತುವೆ ಬಳಿಕ ಬೈಕ್​ ನಿಲ್ಲಿಸುವಂತೆ ಹೇಳುತ್ತಾಳೆ. ಬಳಿಕ ಸುತ್ತಮುತ್ತ ಯಾರು ಇಲ್ಲದಿರುವುದನ್ನು ಗಮನಿಸಿ ಬೈಕ್​ ಅನ್ನು ಕೆಳಗಡೆ ತೆಗೆದುಕೊಂಡು ಹೋಗುವಂತೆ ಹೇಳುತ್ತಾಳೆ. ಸರಿ ಅಂತ ಆತ ಕೆಳಗಡೆ ತೆಗೆದುಕೊಂಡು ಹೋಗುತ್ತಾನೆ. ಬಳಿಕ ಬೈಕ್​ನಿಂದ ಕೆಳಗಿಳಿಯುವ ಯುವತಿ ಯುವಕನನ್ನು ಬೆದರಿಸಿ ಆತನಿಂದ ಚಿನ್ನದ ಸರವನ್ನು ಕಸಿದುಕೊಂಡು ಅಲ್ಲಿಂದ ಪರಾರಿಯಾಗುತ್ತಾಳೆ.
ಇದಾದ ಬಳಿಕ ಸಂತ್ರಸ್ತ ಯುವಕ ಜೋರಾಗಿ ಕೂಗಿಕೊಳ್ಳುತ್ತಾನೆ. ಅದನ್ನು ಕೇಳಿದ ಸ್ಥಳೀಯರು ಓಡಿ ಬಂದು ನೋಡಿದಾಗ ಆತ ಹೇಳಿದನ್ನು ಕೇಳಿ, ಯುವತಿ ಓಡಿ ಹೋಗುತ್ತಿರುವುದನ್ನು ನೋಡಿ ಆಕೆಯನ್ನು ಹಿಡಿದುಕೊಳ್ಳುತ್ತಾರೆ. ತಕ್ಷಣ ಆಕೆಯನ್ನು ಸ್ಥಳೀಯ ಪೊಲೀಸ್​ ಠಾಣೆಗೆ ಒಪ್ಪಿಸುತ್ತಾರೆ. ಇಂಥಾ ಹುಡುಗಿಯರು ಇರ್ತಾರಾ ಎಂದು ಸ್ಥಳೀಯರು ಹುಬ್ಬೇರಿಸಿದ್ದೂ ಉಂಟು.
ಅಂದಹಾಗೆ ಸಂತ್ರಸ್ತ ಯುವಕ ಹಣಕಾಸು ವ್ಯವಹಾರಸ್ಥ. ವಿಜಯನಗರದಲ್ಲಿ ವಾಸವಿದ್ದ ಆತ ಪ್ರತಿನಿತ್ಯ ಗಜಪತಿನಗರಕ್ಕೆ ಭೇಟಿ ನೀಡುತ್ತಿದ್ದ. ಈ ವಿಚಾರ ಆರೋಪಿ ಯುವತಿಗೆ ಮೊದಲೇ ತಿಳಿದಿತ್ತು. ಬಳಿಕ ಆತನ ಸುಲಿಗೆ ನಡೆಸಲು ಸಂಚು ರೂಪಿಸಿದ್ದಳು. ಕೊನೆಗೂ ತನ್ನ ಸಂಚನ್ನು ಕಾರ್ಯರೂಪಕ್ಕಿಳಿಸಿದ ಯುವತಿ, ಯುವಕನಿಂದ ಭಾರೀ ಮೌಲ್ಯದ ಚಿನ್ನದ ಸರವನ್ನು ಎಗರಿಸಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.
ಇದೇ ಮೊದಲೇನಲ್ಲ ಈಕೆ ಈ ಹಿಂದೆ ಅನೇಕ ಸರಗಳ್ಳತನ ಮಾಡಿರುವ ಉದಾಹರಣೆಗಳಿವೆ. ಆರೋಪಿಯ ಹಿನ್ನೆಲೆಯನ್ನು ಪರಿಶೀಲಿಸಿದಾಗ ಆಕೆಯ ದುಷ್ಕೃತ್ಯ ಬಯಲಾಗಿದೆ. ಸದ್ಯ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.(ಏಜೆನ್ಸೀಸ್​)
ಕೆಂಪು ಇರುವೆ ಚಟ್ನಿ ಬಗ್ಗೆ ಮಹತ್ವದ ತೀರ್ಪು ನೀಡಿದ ಸುಪ್ರೀಂಕೋರ್ಟ್​: ಅರ್ಜಿದಾರರಿಗೆ ಶಾಕ್​!​

ಭೀಕರ ಅಪಘಾತ: ಸೇತುವೆಯ ತಡಗೋಡೆ ಮೇಲೆ ನೇತಾಡಿದ ಕಾರು, ಕೃಷ್ಣಾ ನದಿ ಪಾಲಾಗುವುದರಿಂದ ಪಾರು!

ಸತ್ತವರು ಹೇಗೆ ಪ್ರಮಾಣಪತ್ರ ನೀಡುತ್ತಾರೆ!; ನಿಯಮಾವಳಿಗೆ ಹೈಕೋರ್ಟ್ ಗರಂ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − 1 =
Remember me
