ಭೋಪಾಲ್​:ಮದುವೆ ವಿವಾದ ಸಂಬಂಧ ಗ್ರಾಮ ಪಂಚಾಯಿತಿ ಅಧ್ಯಕ್ಷನನ್ನೇ ಅಪಹರಿಸಿರುವ ಘಟನೆ ಮಧ್ಯಪ್ರದೇಶದ ನೀಮುಚ್​ ಜಿಲ್ಲೆಯ ಡಯಾಲಿ ಗ್ರಾಮದಲ್ಲಿ ನಡೆದಿದೆ. ಇಡೀ ಪ್ರಸಂಗ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣ ವೈರಲ್​ ಆಗಿದೆ.
ಈ ಬಗ್ಗೆ ಮಾತನಾಡಿರುವ ನೀಮುಚ್​ ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ ಸುಂದರ್​ ಸಿಂಗ್​ ಕನೇಶ್​, ಅವರ ಸಮುದಾಯದ ಸಂಪ್ರದಾಯದಂತೆ ಡಯಾಲಿ ಗ್ರಾಮದ ಅಧ್ಯಕ್ಷ ಬದ್ರಿ ಲಾಲ್​ ಮೊಮ್ಮಗನಿಗೆ ಚಿಕ್ಕಂದಿನಿಂಲದೇ ಬಾಲಗಂಜ್​ ಮೂಲದ ಹುಡುಗಿ ಜತೆ ಮದುವೆ ನಿಶ್ವಯವಾಗಿತ್ತು. ಆದರೆ, ಹುಡುಗಿ ಮನೆಯವರು ಅವಳನ್ನು ಅಧ್ಯಕ್ಷರ ಮನೆಗೆ ಮದುವೆ ಮಾಡಿಕೊಡಲು ಒಪ್ಪಲಿಲ್ಲ. ಬಳಿಕ ಸಂಧಾನಕ್ಕಾಗಿ ಎರಡು ಕಡೆಯವರನ್ನು ದೇವಸ್ಥಾನಕ್ಕೆ ಕರೆಯಿಸಲಾಗಿತ್ತು. ಆದರೆ, ಇಬ್ಬರ ನಡುವೆ ಸಂಧಾನದ ಬದಲು ಜಗಳು ಶುರುವಾಯಿತು ಎಂದಿದ್ದಾರೆ.
ಇದಾದ ಒಂದು ದಿನದ ಬಳಿಕ ಹುಡುಗಿ ಮನೆ ಕಡೆಯವರು ಬದ್ರಿ ಲಾಲ್​ನನ್ನು ರಸ್ತೆಯ ಮಧ್ಯೆಯೇ ತಡೆದು ಥಳಿಸಿ, ಅಪಹರಿಸಿದ್ದಾರೆ. ಈ ಘಟನೆ ನಡೆದ ಬಳಿಕ ಡಯಾಲಿ ಗ್ರಾಮದ ಜನರು ಬಾಲಗಂಜ್​ ಗ್ರಾಮಕ್ಕೆ ಬಹುದೊಡ್ಡ ಸಂಖ್ಯೆಯಲ್ಲಿ ತೆರಳಿ ಹುಡುಗಿ ಮನೆಯ ಮೇಲೆ ಹಲ್ಲೆ ಮಾಡಿದ್ದಾರೆ.
ಸದ್ಯ ಎರಡು ಕುಟುಂಬದ ಮೇಲೆ ದೂರು ದಾಖಲಾಗಿದ್ದು, ತನಿಖೆ ಆರಂಭವಾಗಿದೆ.(ಏಜೆನ್ಸೀಸ್​)
ರೋಹಿಣಿ ಸಿಂಧೂರಿ ತಪ್ಪುಗಳನ್ನು ಎತ್ತಿ ತೋರಿಸಿ ಪ್ರಶ್ನೆಗಳ ಸವಾಲೆಸೆದ ಐಪಿಎಸ್​ ಅಧಿಕಾರಿ ಡಿ. ರೂಪಾ!

ಬಿಗ್​ಬಾಸ್​ ಎರಡನೇ ಇನ್ನಿಂಗ್ಸ್​ ಆರಂಭದಲ್ಲೇ ಲ್ಯಾಗ್​ ಮಂಜುಗೆ ಶಾಕ್​ ಕೊಟ್ಟ ದಿವ್ಯಾ ಸುರೇಶ್​!

ಹಣ್ಣು ಕಿತ್ತು ತಿಂದ ಬಾಲಕರನ್ನು ಮರಕ್ಕೆ ಕಟ್ಟಿ ಹೊಡೆದ; ಮೂರ್ಛೆ ಹೋದವರ ಮುಂದೆ ಮದ್ಯ ಕುಡಿದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − eleven =
Remember me
